Honda: ಗತವೈಭವ ಮರಳಿ ಪಡೆಯಲು ಹೊರಹೊಮ್ಮಲಿದೆ 7-ಸೀಟರ್ SUV ಸೇರಿದಂತೆ 3 ಹೊಸ ಕಾರುಗಳು
ಭಾರತೀಯ ಆಟೋ ಜಗತ್ತಿನಲ್ಲಿ ತಮ್ಮದೇ ಬ್ರಾಂಡ್ ಮೌಲ್ಯವನ್ನು ಹೊಂದಿರುವ ಕೆಲವೇ ಕಂಪನಿಗಳಲ್ಲಿ Honda ಕೂಡ ಒಂದು. ಹೋಂಡಾದಿಂದ ಒಂದು ಹೊಸ ಕಾರು ಬರಲಿದೆ ಎಂದರೆ ಕಾತುರದಿಂದ ಕಾಯುವವರು ಹಲವರಿದ್ದಾರೆ. ಅಂಥವರಿಗಾಗಿ ಹೋಂಡಾ ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿರುವ ಟಾಪ್ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
1. ಹೊಸ ಕಾಂಪ್ಯಾಕ್ಟ್ SUV: Honda WR-V ಸ್ಥಗಿತಗೊಂಡ ನಂತರ, ಹೋಂಡಾ ಅತ್ಯಂತ ಜನಪ್ರಿಯತೆ ಪಡೆದಿರುವ ಸಬ್ - 4 - ಮೀಟರ್ SUV ವಿಭಾಗದಲ್ಲಿ ಪುನಃ ತನ್ನ ಸಾಮರ್ಥ್ಯವನ್ನು ತೋರಲು ಸಜ್ಜಾಗುತ್ತಿದೆ. ಈ ಜಪಾನಿನ ವಾಹನ ತಯಾರಕರು, ಭಾರತೀಯ ಮಾರುಕಟ್ಟೆಗೆ ಸಂಪೂರ್ಣ ಹೊಸ ಕಾರಿನೊಂದಿಂಗೆ ಬಲವಾದ ಪುನರಾಗಮನವನ್ನು ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ನಮ್ಮ ಪ್ರಕಾರ ಹೋಂಡಾ ಅಮೇಜ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಹೊಸ ಎಸ್‌ಯುವಿಯನ್ನು ಪರಿಚಯಿಸಲಿದ್ದಾರೆ. ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲದಿದ್ದರೂ, ಮುಂದಿನ ವರ್ಷ ಅಥವಾ ಇನ್ನೆರಡು ವರ್ಷಗಳಲ್ಲಿ ತನ್ನ ಹೊಸ ಎಸ್‌ಯುವಿಯನ್ನು ಪರಿಸಯಿಸಲಿದ್ದಾರೆ ಎಂದು ಆಟೋ ವಲಯದಲ್ಲಿ ಬಲವಾಗಿ ಹೇಳಲಾಗುತ್ತಿದೆ.
2. ಹೋಂಡಾ ಎಲಿವೇಟ್ ಇವಿ: ಇತ್ತೀಚೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಾಗಿರುವ ಬೇಡಿಕೆಯಿಂದಾಗಿ Honda ತನ್ನ ಹೊಸ ಮಾದರಿಯಾದ ಎಲಿವೇಟ್ ಎಸ್‌ಯುವಿಯನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ತರುವುದು ಬಹುತೇಕ ಖಚಿತವೆನ್ನಲಾಗಿದೆ. ಮೂಲಗಳ ಪ್ರಕಾರ 2030ರ ವೇಳೆಗೆ ಭಾರತದಲ್ಲಿ ಐದು SUV ಮಾದರಿಗಳನ್ನು ತರಲು ಹೋಂಡಾ ಪ್ಲಾನ್ ಮಾಡಿದ್ದು, ಅದರಲ್ಲಿ ಎಲಿವೇಟ್ ಎಲೆಕ್ಟ್ರಿಕ್ ಎಸ್‌ಯುವಿ ಕೂಡ ಒಂದು. ಇದನ್ನು 2025 ರಲ್ಲಿ ಬಿಡುಗಡೆ ಮಾಡಬಹುದು.

3. ಹೊಸ 7-ಸೀಟರ್ SUV: ಈ ಎಸ್‌ಯುವಿಯ ಸೂಕ್ಷ್ಮವಾದ ವಿವರಗಳು ನಿಗೂಢವಾಗಿ ಉಳಿದಿವೆ, ಹೋಂಡಾ 7-ಆಸನಗಳ SUV ಅನ್ನು ತರಲಿದೆ ಎಂಬ ವದಂತಿಗಳಿವೆ. ಆದ್ರೆ ಇದು ನಿಜವೂ ಆಗಿರಬಹುದು, ಹೋಂಡಾ ಕುಟುಂಬಕ್ಕೆ ಈ ಅತ್ಯಾಕರ್ಷಕ 7-ಸೀಟರ್ SUV ಸೇರ್ಪಡೆಯು ಟಾಟಾ ಸಫಾರಿ, ಹ್ಯುಂಡೈ ಅಲ್ಕಾಜರ್, ಮಹೀಂದ್ರಾ XUV700 ಇತ್ಯಾದಿ ಎಸ್‌ಯುವಿಗಳಿಗೆ ಅಸಾಧಾರಣ ಪ್ರತಿಸ್ಪರ್ಧಿಯಾಗಲಿದೆ. ಈ ಕುರಿತ ವಿವರಗಳು ಮುಂಬರುವ ತಿಂಗಳುಗಳಲ್ಲಿ ಹೊರಹೊಮ್ಮಬಹುದು.
4. ನೆಕ್ಸ್ಟ್-ಜೆನ್ ಹೋಂಡಾ ಅಮೇಜ್: ಭಾರತದಲ್ಲಿನ ಹೋಂಡಾ ಅಮೇಜ್ ತನ್ನ ಮೂರನೇ ತಲೆಮಾರಿನ ಮಾದರಿಯ ಪರಿಚಯಕ್ಕೆ ಸಜ್ಜಾಗಿದೆ. 2024 ರಲ್ಲಿ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ನಿರೀಕ್ಷಿಸಲಾಗಿದೆ. ಇದು ಸಿಟಿ ಮತ್ತು ಅಕಾರ್ಡ್‌ನಂತಹ ಹೋಂಡಾದ ಇತ್ತೀಚಿನ ಸೆಡಾನ್‌ಗಳ ಡಿಸೈನ್ ಸ್ಫೂರ್ತಿಯನ್ನು ಪಡೆಯಲಿದೆಯಂತೆ, ಹೊರಭಾಗವು ಬಹಳಷ್ಟು ಅತ್ಯಾಧುನಿಕತೆಯನ್ನು ಹೊರಹೊಮ್ಮಿಸುವಂತೆ ಇರಲಿದೆ ಎನ್ನಲಾಗಿದೆ.

ಇದರ ಇಂಟೀರಿಯರ್, ಹೊಸ ಡಿಸೈನ್ ಮತ್ತು ಅಪ್‌ಗ್ರೇಡ್ ಮಾಡಿದ ಇನ್ಫೋಟೈನ್‌ಮೆಂಟ್ ಆಯ್ಕೆಗಳು ಸೇರಿದಂತೆ ಚಾಲನಾ ಅನುಭವವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಮುಂದಿನ ಜನ್ Honda ಅಮೇಜ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಇದನ್ನು 5-ಸ್ಪೀಡ್ MT ಮತ್ತು CVT ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಆದ್ರೆ ಡೀಸೆಲ್ ಎಂಜಿನ್ ಆಯ್ಕೆಗಳು ಇರುವುದಿಲ್ಲ ಎಂಬುದನ್ನು ಗಮನಿಸಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications