ಹೋಂಡಾದ ಹೊಸ ಎಸ್‌ಯುವಿಯ ಟೀಸರ್ ಬಿಡುಗಡೆ: ಯಾವಾಗ ಖರೀದಿಗೆ ಸಿಗುತ್ತೆ?

ಭಾರತದ ಮಾರುಕಟ್ಟೆಯಲ್ಲಿ ಒಂದಿಲ್ಲೊಂದು ಹೊಸ ವಾಹನಗಳು ಬಿಡುಗಡೆಯಾಗುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುತ್ತವೆ. ಇದೀಗ ಹೋಂಡಾ ಕಾರ್ಸ್ ಇಂಡಿಯಾ, ಸೋಮವಾರ ತನ್ನ ಮುಂಬರುವ ನೂತನ ಎಸ್‌ಯುವಿಯ ಟೀಸರ್ ಫೋಟೋವನ್ನು ಅಧಿಕೃತವಾಗಿ ಶೇರ್ ಮಾಡಿದೆ. ಇದು ಈ ವರ್ಷದ ಕೊನೆಯಲ್ಲಿ ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.

ಈ ಹೊಸ ಎಸ್‌ಯುವಿಯನ್ನು ಹೋಂಡಾ, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಪ್ರತಿಸ್ಪರ್ಧಿಯಾಗಿ ಪರಿಚಯಿಸಲಿದೆ. ಇದು ಹೋಂಡಾ R&D ಏಷ್ಯಾ ಪೆಸಿಫಿಕ್ ಕಂ. ಲಿಮಿಟೆಡ್‌ನಲ್ಲಿ ಅಭಿವೃದ್ಧಿ ಹಾಗೂ ವಿನ್ಯಾಸಗೊಳಿಸಲಾಗಿರುವ ಹೊಸ ಕಾರಾಗಿದೆ ಎಂದು ಕಂಪನಿ ಹೇಳಿದೆ. ಈ ಚಿತ್ರದಲ್ಲಿ ಕಾರಿನ ಮುಂಭಾಗದ ಬಾನೆಟ್‌ನಲ್ಲಿ LED DRLsಗಳಿದ್ದು, ಕೆಳಗೆ ವೃತ್ತಾಕಾರದ ಫಾಗ್ ಲೈಟ್ಸ್ ಮತ್ತು ವೀಲ್ ಅರ್ಚೆಸ್ ಗಳನ್ನು ಕಾಣಬಹುದು. ಅಲ್ಲದೆ, ಈ ಹೋಂಡಾ ಮಿಡ್-ಸೈಜ್ ಎಸ್‌ಯುವಿ ಸಾಕಷ್ಟು ಆಕರ್ಷಕ ಲುಕ್ ಹೊಂದಿದ್ದು, ವಿನ್ಯಾಸದ ವಿವರಗಳು ಅಂತಿಮವಾಗಿ ಈ ಕಾರು ಮಾರುಕಟ್ಟೆಗೆ ಪರಿಚಯವಾದಾಗ ತಿಳಿಯಲಿದೆ.

ಹೋಂಡಾದ ಹೊಸ ಎಸ್‌ಯುವಿಯ ಟೀಸರ್ ಬಿಡುಗಡೆ: ಯಾವಾಗ ಖರೀದಿಗೆ ಸಿಗುತ್ತೆ?

ಈ ಹೊಸ ಎಸ್‌ಯುವಿಯನ್ನು ಪ್ಯೂರ್ ಪೆಟ್ರೋಲ್ ಮತ್ತು ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ನೀಡಲು ಯೋಜಿಸಲಾಗಿದೆ ಎಂದು ಸದ್ಯ ವರದಿಯಾಗಿದೆ. ಹೋಂಡಾ ಕಂಪನಿ, ಹೈಬ್ರಿಡ್ ಎಂಜಿನ್ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದೆ. ಜೊತೆಗೆ ಈಗಾಗಲೇ ಅದರ ಅಸ್ತಿತ್ವದಲ್ಲಿರುವ ಕೆಲವು ಕಾರುಗಳಲ್ಲಿ ಈ ತಂತ್ರಜ್ಞಾನವನ್ನು ಬಳಸುವುದರಿಂದ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯೇ ಬಹುತೇಕ ಇರಬಹುದು ಎಂದು ಹೇಳಲಾಗಿದೆ. ಈ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ದೊರೆತ ಮೇಲೆಯೇ ಯಾವ ಪವರ್‌ಟ್ರೇನ್ ಬಳಸಲಾಗಿದೆ. ಅದರ ಕಾರ್ಯಕ್ಷಮತೆ ಏನೆಂಬುದರ ಬಗ್ಗೆ ಗೊತ್ತಾಗಲಿದೆ.

ಈ ಎಸ್‌ಯುವಿಯ ಸೈಜ್ ಬಗ್ಗೆ ಹೇಳುವುದಾದರೆ, ಇದರ ಉದ್ದವನ್ನು 4.2 - 4.3 ಮೀಟರ್ ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಮೇಜ್‌ ಕಾರಿನಲ್ಲಿ ಬಳಸಲಾಗಿರುವ ಪ್ಲಾಟ್‌ಫಾರ್ಮ್‌ನ ನವೀಕರಿಸಿದ ಆವೃತ್ತಿಯನ್ನು ಆಧರಿಸಿ, ಈ ಎಸ್‌ಯುವಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಒಳಭಾಗದಲ್ಲಿ,12 ಇಂಚುಗಳಷ್ಟು ದೊಡ್ಡದಾದ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಈ ಎಸ್‌ಯುವಿ ಪಡೆದಿರಬಹುದು. ಹೆಚ್ಚುವರಿಯಾಗಿ, 10-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್‌ ಹೊಂದಿರಬಹುದು ಎಂದು ಹೇಳಲಾಗಿದೆ.

'ಭಾರತದಲ್ಲಿ ಮಾರುಕಟ್ಟೆ ಸಮೀಕ್ಷೆ ಬಳಿಕ, ಎಸ್‌ಯುವಿಯನ್ನು ಅಂತಿಮಗೊಳಿಸಲಾಗಿದೆ' ಎಂದು ಕಂಪನಿಯು ಇತ್ತೀಚಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ನೂತನ ಹೋಂಡಾ ಎಸ್‌ಯುವಿಯನ್ನು ಹೋಂಡಾ R&D ಏಷ್ಯಾ ಪೆಸಿಫಿಕ್ ಕಂ.ಲಿಮಿಟೆಡ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಜನರ ಬದಲಾಗುತ್ತಿರುವ ಜೀವನಶೈಲಿ ಅಗತ್ಯತೆಗಳು, ವಿನ್ಯಾಸ ಹಾಗೂ ಕಾರ್ಯಕ್ಷಮತೆಯ ವಿಷಯದಲ್ಲಿ ಹೋಂಡಾ ಈ ಹೊಸ ಎಸ್‌ಯುವಿ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಮಾರುಕಟ್ಟೆಯ ಬಂದ ಮೇಲೆ ಎಷ್ಟರಮಟ್ಟಿಗೆ ಕಮಲ್ ಮಾಡಲಿದೆ ಕಾದು ನೋಡಬೇಕಾಗಿದೆ.

ಹೋಂಡಾದ ಹೊಸ ಎಸ್‌ಯುವಿಗೆ ಪ್ರತಿಸ್ಪರ್ಧಿ ಎನ್ನಲಾದ ಕಿಯಾ ಸೆಲ್ಟೋಸ್‌ ರೂ.10.69 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.19.15 ಲಕ್ಷ ಇದೆ. ಈ ಕಾರನ್ನು 19 ರೂಪಾಂತರಗಳಲ್ಲಿ ಖರೀದಿಗೆ ನೀಡಲಾಗುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳೆಂದರೇ, 1.5-ಲೀಟರ್ (115PS ಪವರ್ ಮತ್ತು 144Nm ಟಾರ್ಕ್) ಮತ್ತು 1.4-ಲೀಟರ್ ಟರ್ಬೋಚಾರ್ಜ್ಡ್ (140PS ಪವರ್ ಮತ್ತು 242Nm ಟಾರ್ಕ್) ಪೆಟ್ರೋಲ್ ಎಂಜಿನ್‌. 6-ಸ್ವೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿದೆ.

ಕಿಯಾ ಸೆಲ್ಟೋಸ್‌ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕನೆಕ್ಟ್ದ್ ಕಾರ್ ತಂತ್ರಜ್ಞಾನದೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಎಂಟು ಇಂಚಿನ ಹೆಡ್-ಅಪ್ ಡಿಸ್ಪ್ಲೇ, ಸನ್‌ರೂಫ್ ಮತ್ತು ರಿಮೋಟ್-ಎಂಜಿನ್ ಸ್ಟಾರ್ಟ್ ಅನ್ನು ಒಳಗೊಂಡಿದೆ. ಸುರುಕ್ಷತಾ ದೃಷ್ಟಿಯಿಂದ ಆರು ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಹಿಲ್ ಅಸಿಸ್ಟ್, ಬ್ರೇಕ್ ಅಸಿಸ್ಟ್ ಎಬಿಎಸ್ ಅನ್ನು ಹೊಂದಿದೆ.

ಮತ್ತೊಂದು ಪ್ರತಿಸ್ಪರ್ಧಿ ಎಸ್‌ಯುವಿ ಹ್ಯುಂಡೈ ಕ್ರೆಟಾ, ರೂ.10.44 ಲಕ್ಷದಿಂದ ರೂ.18.24 ಲಕ್ಷದವರೆಗೆ (ಎಕ್ಸ್ ಶೋರೂಂ ದೆಹಲಿ) ಬೆಲೆಯನ್ನು ಹೊಂದಿದೆ. ಹ್ಯುಂಡೈ ಮೂರು ಎಂಜಿನ್‌ಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಅವುಗಳೆಂದರೆ, 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ (115PS ಪವರ್ ಮತ್ತು 144Nm ಪೀಕ್ ಟಾರ್ಕ್), 1.5-ಲೀಟರ್ ಡೀಸೆಲ್ (115PS ಮತ್ತು 250Nm) ಮತ್ತು 1.4-ಲೀಟರ್ ಟರ್ಬೋ-ಪೆಟ್ರೋಲ್ (140Nm ಮತ್ತು 242Nm). 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು 6-ಸ್ವೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
Read more on ಹೋಂಡಾ honda
English summary
Hondas new suv teaser released
Story first published: Monday, January 9, 2023, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X