ಹೊಸ ಮಾರುತಿ ಜಿಮ್ನಿ ಎಷ್ಟು ಸೇಫ್... ಯುರೋ NCAP ರಿಸಲ್ಟ್ ನೋಡಿದ್ರೆ 100% ದಂಗಾಗ್ತೀರ!
ಭಾರತದಲ್ಲಿ ತಯಾರಾದ ವಾಹನಗಳು ಹಾಗೂ ಅಂತರಾಷ್ಟ್ರೀಯ ಕಾರುಗಳಿಗೆ ಗುಣಮಟ್ಟದಲ್ಲಿ ಭಾರೀ ವ್ಯತ್ಯಾಸವಿದೆ. ಕಾರಿನ ಬೆಲೆಗೆ ಅನುಗುಣವಾಗಿ ಗುಣಮಟ್ಟ ಕೂಡ ಇರುತ್ತದೆ. ಆದ್ರೆ ದೇಶದಲ್ಲಿ ಕಡಿಮೆ ಬೆಲೆ ಇದ್ರೆ ಸಾಕು ಎಂದುಕೊಳ್ಳುವವರು ಗುಣಮಟ್ಟವನ್ನು ಲೆಕ್ಕಿಸುವುದಿಲ್ಲ. ಸುರಕ್ಷತೆ ಬೇಕೆಂದುಕೊಳ್ಳುವವರು ಬೆಲೆ ಹೆಚ್ಚಾಗಿದ್ರು ಉತ್ತಮ ಕಾರುಗಳನ್ನು ಖರೀದಿಸುತ್ತಾರೆ.
ಇವೆಲ್ಲಾ ಏಕೆ ಬೇಕು ಅಂತೀರಾ, ಮಾರುತಿ ಕಾರುಗಳ ಬಗ್ಗೆ ಹೇಳಬೇಕಾದರೆ ಮೊದಲು ಈ ವಿವರಣೆ ತುಂಬಾ ಮುಖ್ಯ. ಭಾರತದಲ್ಲಿ ಈಗ ಟಾಪ್ ಕಾರು ಕಂಪನಿಯೆಂದರೆ ಮಾರುತಿ ಸುಜುಕಿ ಮಾತ್ರ. ಆದ್ರೆ ಇವರ ಕಾರುಗಳ ಗುಣಮಟ್ಟವನ್ನು ಹಲವರು ತಳ್ಳಿ ಹಾಕುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ, ಆದ್ರೂ ಕೂಡ ಜನ ಮುಗಿಬಿದ್ದು ಇವರದ್ದೇ ಕಾರುಗಳನ್ನು ಖರೀದಿಸುತ್ತಾರೆ.

ಮಾರುತಿ ಕಾರುಗಳ ಅಗ್ಗದ ಬೆಲೆ, ಸಾಕಷ್ಟು ಫೀಚರ್‌ಗಳು, ಕಂಪನಿಯ ಸೇವಾ ಕೇಂದ್ರಗಳು ದೇಶದ ಇನ್ಯಾವುದೇ ಬ್ರಾಂಡ್ ನೀಡುತ್ತಿಲ್ಲ. ಹಾಗಾಗಿಯೇ ಮಾರುತಿ ಕಾರುಗಳಿಗೆ ಈ ಮಟ್ಟದ ಬೇಡಿಕೆಯಿದೆ. ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಜಿಮ್ನಿ ಕೂಡ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದೆ. ಸಂಪೂರ್ಣ ಆಫ್ ರೋಡರ್ ಆಗಿರುವ ಈ ಜಿಮ್ನೆಗೆ ಎಲ್ಲಿಲ್ಲದೆ ಬೇಡಿಕೆ ಇದೆ.
ಇತರ ಆಫ್ ರೋಡರ್ ಎಸ್‌ಯುವಿಗಳಿಗೆ ಹೋಲಿಸಿಕೊಂಡರೆ ಮಾರುತಿ ಜಿಮ್ನಿ ತುಂಬಾ ಅಗ್ಗದ ಬೆಲೆಗೆ ಲಭ್ಯವಿದೆ. ಆದ್ರೆ ಇದರ ಸುರಕ್ಷತೆ ಕುರಿತು ಕೂಡ ನಾವು ಒಮ್ಮೆ ಪರಿಶೀಲಿಸುವುದು ತುಂಬಾ ಮುಖ್ಯ. ಹಾಗೆಂದು ಹೊಸ ಮಾರುತಿ ಸುಜುಕಿ ಜಿಮ್ನಿಯನ್ನು ಇನ್ನೂ ಕ್ರ್ಯಾಶ್ ಟೆಸ್ಟ್ ಮಾಡಲಾಗಿಲ್ಲ. ಆದ್ರೆ ಅಂತರಾಷ್ಟ್ರಿಯ ಮಾರುಕಟ್ಟೆಯ ಮೂರು-ಬಾಗಿಲಿನ ಜಿಮ್ನಿಯನ್ನು ಈಗಾಗಲೇ ಯುರೋ ಎನ್‌ಸಿಎಪಿನಲ್ಲಿ ಟೆಸ್ಟ್ ಮಾಡಲಾಗಿದೆ.

ಹಾಗಾಗಿ ಎರಡೂ ಕಾರುಗಳು ಬಹುತೇಕ ಒಂದೇ ಆಗಿರುವುದರಿಂದ ಐದು ಬಾಗಿಲಿನ ಆವೃತ್ತಿಗೂ ಅದೇ ಕ್ರಾಷ್ ಟೆಸ್ಟ್ ಫಲಿತಾಂಶ ಸಿಗಬಹುದು ಎಂಬ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಒಮ್ಮೆ ಮೂರು ಬಾಗಿಲಿನ ಜಿಮ್ನಿ ಯುರೋ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನು ಇಲ್ಲಿ ನೋಡೋಣ. ಮಾರುತಿ ಸುಜುಕಿ ಜಿಮ್ನಿ ಮೂರು-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.
ವಯಸ್ಕರ ರಕ್ಷಣೆ: ಜಿಮ್ನಿ ಮೂರು-ಬಾಗಿಲಿನ ಆವೃತ್ತಿಯು ಮುಂಭಾಗದ ಆಫ್‌ಸೆಟ್ ಪರೀಕ್ಷೆಯಲ್ಲಿ 8 ರಲ್ಲಿ 4.6 ಅಂಕಗಳನ್ನು ಗಳಿಸಿದ್ದರೇ, ಮುಂಭಾಗದ ಪೂರ್ಣ ಅಗಲದ ಕ್ರ್ಯಾಶ್ ಪರೀಕ್ಷೆಯಲ್ಲಿ 8 ರಲ್ಲಿ 5.8 ಅಂಕಗಳನ್ನು ಗಳಿಸಿದೆ. ಪ್ರಯಾಣಿಕರು ಉತ್ತಮ ಕಾಲು ಮತ್ತು ತಲೆ ರಕ್ಷಣೆಯನ್ನು ಪಡೆದರು. ಚಾಲಕ ಸಾಕಷ್ಟು ಕಾಲು ರಕ್ಷಣೆ, ಕನಿಷ್ಠ ತಲೆ ರಕ್ಷಣೆ ಮತ್ತು ದುರ್ಬಲ ಎದೆಯ ರಕ್ಷಣೆಯನ್ನು ಪಡೆದರು. ಒಟ್ಟಾರೆ ಜಿಮ್ನಿ 27.9 ಅಂಕಗಳನ್ನು ಗಳಿಸಿದೆ.

ಮಕ್ಕಳ ರಕ್ಷಣೆ: ಮಾರುತಿ ಸುಜುಕಿ ಜಿಮ್ನಿಯು ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಉತ್ತಮವಾಗಿದೆ, ಒಟ್ಟಾರೆಯಾಗಿ ಶೇ 84 ರಷ್ಟು ಸುರಕ್ಷತೆ ನೀಡುತ್ತದೆ. ವಯಸ್ಕರ ರಕ್ಷಣೆಗಾಗಿ ಇದು ಪಡೆದುಕೊಂಡಿರುವ ಶೇ 73 ಕ್ಕೆ ಹೋಲಿಸಿದರೆ ಮಕ್ಕಳ ಸುರಕ್ಷತೆ ಪರವಾಗಿಲ್ಲ ಎನ್ನಿಸಿಕೊಂಡಿದೆ. "ಮುಂಭಾಗದ ಆಫ್‌ಸೆಟ್ ಪರೀಕ್ಷೆಯಲ್ಲಿ, ಎರಡೂ ಡಮ್ಮೀಸ್‌ಗಳ ಕುತ್ತಿಗೆಯನ್ನು ಹೊರತುಪಡಿಸಿ ಎಲ್ಲಾ ನಿರ್ಣಾಯಕ ದೇಹದ ಪ್ರದೇಶಗಳ ರಕ್ಷಣೆ ಉತ್ತಮವಾಗಿತ್ತು.
ಅಡ್ಡ ತಡೆ ಪರೀಕ್ಷೆಯಲ್ಲಿ, ಎರಡೂ ಡಮ್ಮಿಗಳ ರಕ್ಷಣೆ ದೇಹದ ಎಲ್ಲಾ ನಿರ್ಣಾಯಕ ಭಾಗಗಳಿಗೆ ಉತ್ತಮವಾಗಿದೆ. ಮುಂಭಾಗದ ಪ್ರಯಾಣಿಕರ ಏರ್‌ಬ್ಯಾಗ್ ಅನ್ನು ಆ ಆಸನದ ಸ್ಥಾನದಲ್ಲಿ ಹಿಂಬದಿಯ ಮುಖದ ಮಗುವಿನ ಸಂಯಮವನ್ನು ಬಳಸಲು ಅನುಮತಿಸಲು ನಿಷ್ಕ್ರಿಯಗೊಳಿಸಬಹುದು. ಏರ್‌ಬ್ಯಾಗ್‌ನ ಸ್ಥಿತಿಯ ಬಗ್ಗೆ ಚಾಲಕನಿಗೆ ಸ್ಪಷ್ಟ ಮಾಹಿತಿಯನ್ನು ಒದಗಿಸಲಾಗಿದೆ. ಹಾಗಾಗಿ ಎಲ್ಲಾ ಸಂಯಮ ಪ್ರಕಾರಗಳನ್ನು ಸರಿಯಾಗಿ ಸ್ಥಾಪಿಸಬಹುದು ಮತ್ತು ಸರಿಹೊಂದಿಸಬಹುದು.
ಈ ಎಲ್ಲಾ ಪರೀಕ್ಷೆಗಳು ಯುರೋ ಎನ್‌ಸಿಎಪಿ 2018 ರಲ್ಲಿ ನಡೆಸಿದ್ದರ ಫಲಿತಾಂಶವಾಗಿದೆ. ಆಗ ಜಿಮ್ನಿಯು ಡ್ಯುಯಲ್ ಏರ್ ಬ್ಯಾಗ್‌ಗಳೊಂದಿಗೆ ಕರ್ಟನ್ ಏರ್ ಬ್ಯಾಗ್‌ಗಳು, ಸೀಟ್ ಬೆಲ್ಟ್ ರಿಮೈಂಡರ್, ಐಎಸ್‌ಒ ಫಿಕ್ಸ್ ಚೈಲ್ಡ್ ಸೀಟ್ ಆಂಕರ್ ಗಳು, ಪ್ರಿ- ಟೆನ್ಷನರ್ ಗಳೊಂದಿಗೆ ಸೀಟ್‌ಬೆಲ್ಟ್, ಆಟೋ ಎಮರ್ಜನ್ಸಿ ಬ್ರೇಕಿಂಗ್ (ಎಇಬಿ) ಹೊಂದಿತ್ತು.
ಈಗಿನ ಭಾರತೀಯ ಆವೃತ್ತಿಯು ಮುಂಭಾಗ ಮತ್ತು ಕರ್ಟನ್ ಏರ್ ಬ್ಯಾಗ್‌ಗಳು, ಇಬಿಡಿ ಮತ್ತು ಸೀಟ್‌ಬೆಲ್ಟ್ ಪ್ರಿ-ಟೆನ್ಷನರ್, ಎಬಿಎಸ್, ಇಎಸ್‌ಪಿಗಳನ್ನು ಹೊಂದಿದೆ. ಹಾಗಾದರೆ ಹೊಸ ಗ್ಲೋಬಲ್ NCAP ರೇಟಿಂಗ್‌ನಲ್ಲಿ ಭಾರತೀಯ ಮಾರುಕಟ್ಟೆಗಾಗಿ ನಿರ್ಮಿಸಿರುವ ಹೊಸ ಜಿಮ್ನಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಸುದ್ದಿಗಳನ್ನು ಶೇರ್ ಮಾಡುತ್ತೇವೆ ಸಂಪರ್ಕದಲ್ಲಿರಿ.


Click it and Unblock the Notifications