631 ಕಿ.ಮೀ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಟ್ರಿಕ್ ಕಾರಿಗೆ ನಿರೀಕ್ಷೆಗೂ ಮೀರಿ ಬುಕ್ಕಿಂಗ್

ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಐಯೊನಿಕ್ 5 ಎಲೆಕ್ಟ್ರಿಕ್ ಕಾರನ್ನು ಇತ್ತೀಚೆಗೆ ನಡೆದ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಹ್ಯುಂಡೈ ಐಯೊನಿಕ್ 5 ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 44.95 ಲಕ್ಷವಾಗಿದೆ.

ಹೊಸ ಹ್ಯುಂಡೈ ಐಯೊನಿಕ್ 5 ಎಲೆಕ್ಟ್ರಿಕ್ ಕಾರಿನ ಪರಿಚಯಾತ್ಮಕ ಬೆಲೆಯು ಮೊದಲ 500 ಬುಕಿಂಗ್‌ಗಳಿಗೆ ಮಾತ್ರ ಮೀಸಲಾಗಿತ್ತು. ಇದರ ಬೆಲೆ ರೂ. 60.95 ಲಕ್ಷದಿಂದ ರೂ. 65.95 ಲಕ್ಷದವರೆಗೆ ಇದೆ. Kia EV6 ಮಾದರಿಗೆ ಹೋಲಿಸಿದರೆ, Ioniq 5 ಸುಮಾರು ರೂ 16 ಲಕ್ಷ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದೆ. Kia EV6 ಎಲೆಕ್ಟ್ರಿಕ್ ಕಾರನ್ನು ಪೂರ್ಣ ಆಮದು ಯುನಿಟ್ ಆಗಿದ್ದರೆ, ಎರಡನೆಯದು CKD (ಸಂಪೂರ್ಣವಾಗಿ ನಾಕ್ ಡೌನ್) ಮಾರ್ಗದ ಮೂಲಕ ಇಲ್ಲಿಗೆ ಬರುತ್ತದೆ.

ಹ್ಯುಂಡೈ ಎಲೆಕ್ಟ್ರಿಕ್ ಕಾರಿಗೆ ನಿರೀಕ್ಷೆಗೂ ಮೀರಿ ಬುಕ್ಕಿಂಗ್

ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಆಯ್ದ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಬುಕ್ಕಿಂಗ್ ಟೋಕನ್ ಮೊತ್ತ ರೂ.1 ಲಕ್ಷವಾಗಿದೆ. ಹ್ಯುಂಡೈ ಕಂಪನಿಯು ರಂಭದಲ್ಲಿ ವಾರ್ಷಿಕ ಆಧಾರದ ಮೇಲೆ 250-300 ಯುನಿಟ್‌ಗಳನ್ನು ವಿತರಿಸಲು ಯೋಜಿಸಿದ್ದರೂ, ಅದರ ಈ ಮಾದರಿಗೆ ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಆಗುತ್ತಿದೆ. ಈ ಐಯೊನಿಕ್ 5 ಎಲೆಕ್ಟ್ರಿಕ್ ಕಾರಿಗೆ ಇದುವರೆಗೆ 650 ಬುಕಿಂಗ್‌ಗಳನ್ನು ಪಡೆದುಕೊಂಡಿದೆ.

ಈ ಐಷಾರಾಮಿ ಐಯೊನಿಕ್ 5 ಎಲೆಕ್ಟ್ರಿಕ್ ಕಾರಿನ ವಿತರಣೆಗಳು 2023ರ ಮಾರ್ಚ್ ಅಂತ್ಯದ ವೇಳೆಗೆ ಪ್ರಾರಂಭವಾಗುತ್ತದೆ. ಈ ಬಹುನಿರೀಕ್ಷಿತ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ ದಕ್ಷಿಣ ಕೊರಿಯಾದ ವಾಹನ ತಯಾರಕರ ಪ್ರಸಿದ್ಧ ಮತ್ತು ಸುಧಾರಿತ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ಅನ್ನು ಒಳಗೊಂಡಿದೆ. ಈ ಹ್ಯುಂಡೈ ಎಲೆಕ್ಟ್ರಿಕ್ ಕ್ರಾಸ್ಒವರ್ ಇತ್ತೀಚೆಗೆ ಬಿಡುಗಡೆಯಾದ ಕಿಯಾ ಇವಿ6 ಎಲೆಕ್ಟ್ರಿಕ್ ಕ್ರಾಸ್ಒವರ್ ವಾಹನಕ್ಕೆ ಬಹುತೇಕ ಹೋಲುತ್ತದೆ.

ಈ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರು 5 4,635 ಎಂಎಂ ಉದ್ದ, 1,890 ಅಗಲ ಮತ್ತು 1,625 ಎತ್ತರ ಮತ್ತು 3,000 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಮಾದರಿಯು ಆಗಿದ್ದು, ಹೊರಭಾಗದಲ್ಲಿ ಭವಿಷ್ಯದ ವಿನ್ಯಾಸವನ್ನು ಹೊಂದಿದೆ. ಇದು ಪಿಕ್ಸಲೇಟೆಡ್ LED ಟೈಲ್-ಲೈಟ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳೊಂದಿಗೆ ಡ್ಯುಯಲ್ LED ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ.

ಈ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ ಡ್ಯುಯಲ್ ಫ್ಲೋಟಿಂಗ್ ಸ್ಕ್ರೀನ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಆಕರ್ಷಕ ಒಳಾಂಗಣದೊಂದಿಗೆ ಬರುತ್ತದೆ. ಈ ಕಾರಿನಲ್ಲಿ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ, ಈ ಹ್ಯುಂಡೈ ಕಾರಿನಲ್ಲಿ ಡ್ರೈವರ್ ಡಿಸ್‌ಪ್ಲೇಗಳು, 360 ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್, V2L (ವಾಹನ 2 ಲೋಡ್) ವೈಶಿಷ್ಟ್ಯಗಳು ಮತ್ತು ಇತರವುಗಳೊಂದಿಗೆ ಸುಸಜ್ಜಿತವಾಗಿರುತ್ತದೆ. ಈ ಹೊಸ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ ಅನ್ನು ಹೊಂದಿದೆ.

ಇದರೊಂದಿಗೆ ಲೇನ್ ಕೀಪ್ ಮತ್ತು ಡಿಪಾರ್ಚರ್ ಏಡ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್‌ನಂತಹ ಫೀಚರ್ಸ್ ಗಳೊಂದಿಗೆ ADAS (ಅಡ್ವಾನ್ಸ್ಡ್ ಡ್ರೈವರ ಅಸಿಸ್ಟ್ ಸಿಸ್ಟಂ) ನೊಂದಿಗೆ ಬರುತ್ತದೆ. ಈ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನ ಪವರ್‌ಟ್ರೇನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ 72.6kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ, ಇದು ಸಿಂಗಲ್ ಚಾರ್ಜ್‌ನಲ್ಲಿ ARAI- ಪ್ರಕಾರ, 631 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಈ ಎಲೆಕ್ಟ್ರಿಕ್ ಮೋಟರ್ 217 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ RWD (ರೇರ್-ವ್ಹೀಲ್ ಡ್ರೈವ್) ಸಿಸ್ಟಂ ಅನ್ನು ಹೊಂದಿದೆ. ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು ಸೂಪರ್‌ಫಾಸ್ಟ್ 800V ಚಾರ್ಜಿಂಗ್ ಸೌಲಭ್ಯವಿದೆ. ಇದು 18 ನಿಮಿಷಗಳಲ್ಲಿ ಅದರ ಬ್ಯಾಟರಿ ಪ್ಯಾಕ್ ಅನ್ನು 10 ರಿಂದ 80 ಪ್ರತಿಶತದವರೆಗೆ ಜಾರ್ಚ್ ಮಾಡಬಹುದು.

Article Published On: Wednesday, February 8, 2023, 11:34 [IST]
English summary
Hyndai ioniq 5 bookings cross 650 units deliveries details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+