Hyundai: 6 ಲಕ್ಷ ಕಾರು ಮಾರಿದ ಹ್ಯುಂಡೈ, 27 ಕಿ.ಮೀ ಮೈಲೇಜ್‌ನ ಎಕ್ಸ್‌ಟರ್‌ಗೆ 1 ಲಕ್ಷ ಬುಕ್ಕಿಂಗ್.. ತುಂಬಿದ ಶೋರೂಂ!

ದೇಶದಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಪ್ರಮುಖ ಕಾರು ಮಾರಾಟ ಕಂಪನಿಯಾಗಿ ಗುರುತಿಸಿಕೊಂಡಿದೆ. ಇದರ ಕಾರುಗಳು ಆಕರ್ಷಕ ವೈಶಿಷ್ಟ್ಯ, ವಿನ್ಯಾಸದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಸದ್ಯ, ಹ್ಯುಂಡೈ ಐತಿಹಾಸಿಕ ಸಾಧನೆ ಮಾಡಿದೆ.

ಹ್ಯುಂಡೈ ಮೋಟಾರ್ ಇಂಡಿಯಾ ಶುಕ್ರವಾರ ಪ್ರಮುಖ ಮಾಹಿತಿಯೊಂದನ್ನು ಹಂಚಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ವರ್ಷ (2023) ಆರು ಲಕ್ಷ ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಮೈಲಿಗಲ್ಲನ್ನು ಸಾಧಿಸಲಾಗಿದೆ ಎಂದು ತಿಳಿಸಿದೆ. ಕಳೆದ ವರ್ಷ (2022) 5.5 ಲಕ್ಷ ಯುನಿಟ್ ಕಾರುಗಳನ್ನು ಸೇಲ್ ಮಾಡಿತ್ತು. ಈ ಬಾರಿ ಅದಕ್ಕಿಂತ ದೊಡ್ಡ ಯಶಸ್ಸು ಸಾಧಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

Hyundai: 6 ಲಕ್ಷ ಕಾರು ಮಾರಿದ ಹ್ಯುಂಡೈ, 27 ಕಿ.ಮೀ ಮೈಲೇಜ್‌ನ ಎಕ್ಸ್‌ಟರ್‌ಗೆ 1 ಲಕ್ಷ ಬುಕ್ಕಿಂಗ್.. ತುಂಬಿದ ಶೋರೂಂ!

ಕಂಪನಿಯು ಉತ್ತಮ ಪ್ರಗತಿ ಸಾಧಿಸಲು ಇದೇ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗದ ಐಯೋನಿಕ್ 5 ಎಲೆಕ್ಟ್ರಿಕ್ ಕಾರು ಹಾಗೂ ಎಕ್ಸ್‌ಟರ್ (Exter) ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಪ್ರಮುಖ ಕಾರಣವಾಗಿವೆ. ಗ್ರಾಹಕರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ, ಹ್ಯುಂಡೈ ತನ್ನ ತಯಾರಿಕಾ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದು, ತಮಿಳುನಾಡಿನ ತನ್ನ ಘಟಕದ ಸಾಮರ್ಥ್ಯವನ್ನು 50,000 ರಿಂದ 820,000 ಯುನಿಟ್‌ಗಳಿಗೆ ಅಧಿಕಗೊಳಿಸಿದೆ.

ಹ್ಯುಂಡೈ ಕಂಪನಿಯ ವೆನ್ಯೂ (Venue), ಕ್ರೆಟಾ (Creta) ಮತ್ತು ನವೀಕರಿಸಿದ ವೆರ್ನಾ (Updated Verna) ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆ, ಈ ಮಟ್ಟಿನ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಜೊತೆಗೆ ಜೂನ್‌ನಲ್ಲಿ ಬಿಡುಗಡೆಯಾದ ಟಾಟಾ ಪಂಚ್ ಪ್ರತಿಸ್ಪರ್ಧಿ ಎಕ್ಸ್‌ಟರ್‌ಗೆ ಗ್ರಾಹಕರಿಂದ ನೀರಿಕ್ಷೆಗೂ ಮೀರಿ ಪ್ರತ್ರಿಕ್ರಿಯೆ ವ್ಯಕ್ತವಾಗಿ, 1 ಲಕ್ಷಕ್ಕೂ ಆರ್ಡರ್‌ ಪಡೆದುಕೊಂಡಿರುವುದು ಸಹ ಹೊಸ ದಾಖಲೆಗೆ ಸಹಾಯಕವಾಗಿದೆ.

Hyundai: 6 ಲಕ್ಷ ಕಾರು ಮಾರಿದ ಹ್ಯುಂಡೈ, 27 ಕಿ.ಮೀ ಮೈಲೇಜ್‌ನ ಎಕ್ಸ್‌ಟರ್‌ಗೆ 1 ಲಕ್ಷ ಬುಕ್ಕಿಂಗ್.. ತುಂಬಿದ ಶೋರೂಂ!

ಭಾರತದಲ್ಲಿ ಹ್ಯುಂಡೈ ಎಕ್ಸ್‌ಟರ್‌ ರೂ.6 ಲಕ್ಷದಿಂದ ರೂ.10 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಈ ಕಾರು, ಇಎಕ್ಸ್, ಎಸ್, ಎಸ್ಎಕ್ಸ್, ಎಸ್ಎಕ್ಸ್ (ಒ), ಹಾಗೂ ಎಸ್ಎಕ್ಸ್ (ಒ) ಕನೆಕ್ಟ್ ಎಂಬ 5 ರೂಪಾಂತರದ ಆಯ್ಕೆಯಲ್ಲಿ ಖರೀದಿದಾರರಿಗೆ ಸಿಗುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ನೊಂದಿಗೂ ಲಭ್ಯವಿದೆ.

ಎಕ್ಸ್‌ಟರ್‌ 1.2 - ಲೀಟರ್, 4 ಸಿಲಿಂಡರ್ ಎಂಜಿನ್‌ ಪೆಟ್ರೋಲ್ ಎಂಜಿನ್, 81.8 bhp ಪವರ್, 113.8 Nm ಪೀಕ್ ಟಾರ್ಕ್, ಸಿಎನ್‌ಜಿ ಕಿಟ್ ಪಡೆದಿರುವ ಕಾರು, 67.7 bhp ಪವರ್ ಹಾಗೂ 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ದೊರೆಯುತ್ತದೆ.

Hyundai: 6 ಲಕ್ಷ ಕಾರು ಮಾರಿದ ಹ್ಯುಂಡೈ, 27 ಕಿ.ಮೀ ಮೈಲೇಜ್‌ನ ಎಕ್ಸ್‌ಟರ್‌ಗೆ 1 ಲಕ್ಷ ಬುಕ್ಕಿಂಗ್.. ತುಂಬಿದ ಶೋರೂಂ!

ಮೈಲೇಜ್ ವಿಚಾರಕ್ಕೆ ಬರುವುದಾದರೆ, ಎಕ್ಸ್‌ಟರ್‌ ಪೆಟ್ರೋಲ್ ರೂಪಾಂತರ 19.2 kmpl, ಸಿಎನ್‌ಜಿ ವೇರಿಯೆಂಟ್ 27.1 km/kg ಇಂಧನ ದಕ್ಷತೆ ಹೊಂದಿದೆ. 8 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆ ಸಲುವಾಗಿ 6 ಏರ್‌ಬ್ಯಾಗ್ ಪಡೆದಿದೆ.

ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆರ್ನಾ ಸೆಡಾನ್, ರೂ.10.96 ಲಕ್ಷದಿಂದ ರೂ.17.38 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಪೆಟ್ರೋಲ್ ಎಂಜಿನ್, ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಜೊತೆಗೆ ದೊರೆಯುತ್ತದೆ. 18.6 - 20.6 kmpl ಮೈಲೇಜ್ ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.

ಹ್ಯುಂಡೈ ವೆನ್ಯೂ, ರೂ.7.89 ಲಕ್ಷದಿಂದ ರೂ.13.48 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ. 8 - ಇಂಚಿನ ಟಚ್‌ಸ್ಕ್ರೀನ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಹ್ಯುಂಡೈ ಕ್ರೆಟಾ ರೂ.10.87 ಲಕ್ಷದಿಂದ ರೂ. 19.20 ಲಕ್ಷ ಶೋರೂಂ ದರದಲ್ಲಿ ಸಿಗಲಿದ್ದು, 5 ಆಸನವನ್ನು ಪಡೆದಿದೆ.

Article Published On: Saturday, November 18, 2023, 16:28 [IST]
English summary
Hyundai 6 lakh car domestic sales 27 km exter breaches 1 lakh bookings
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+