Hyundai Bluelink: ಭಾರತದಲ್ಲಿ ಹ್ಯುಂಡೈ ಕನೆಕ್ಟೆಡ್ ಕಾರ್ ಕ್ರಾಂತಿ: ಬರೋಬ್ಬರಿ 5 ಲಕ್ಷ ಕಾರುಗಳ ಮಾರಾಟ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಹ್ಯುಂಡೈ ಬ್ಲೂಲಿಂಕ್ ಸುಸಜ್ಜಿತ ಕಾರುಗಳ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಸಂಪರ್ಕಿತ ಕಾರ್ (connected car)ಗಳು 2019 ರಲ್ಲಿ ಶೇ5 ರಿಂದ 2023 ರಲ್ಲಿ ಶೇ30 ಕ್ಕೆ ವ್ಯಾಪಕವಾಗಿ ಹೆಚ್ಚಾಗಿದೆ. 4 ವರ್ಷಗಳಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಸಂಪರ್ಕಿತ ಕಾರುಗಳು ಮಾರಾಟವಾಗಿವೆ.

ಏನೀ ಬ್ಲೂಲಿಂಕ್: ಬ್ಲೂಲಿಂಕ್ ಎಂಬುದು ಹ್ಯುಂಡೈ ನೀಡುವ ಸಂಪರ್ಕಿತ ಕಾರ್ ಪ್ಲಾಟ್‌ಫಾರ್ಮ್ ಆಗಿದ್ದು, ಇದು ಕಾರ್ ಮತ್ತು ಕಾರ್ ಮಾಲೀಕರ ನಡುವೆ ನಿರ್ಣಾಯಕ ಮಾಹಿತಿಯ ಸುಲಭ ಹರಿವನ್ನು ಸಕ್ರಿಯಗೊಳಿಸುತ್ತದೆ. ಭಾರತದಲ್ಲಿ 2019 ರಲ್ಲಿ ಪ್ರಾರಂಭವಾದ ಬ್ಲೂಲಿಂಕ್ AI ಆಧಾರಿತ ತಂತ್ರಜ್ಞಾನವು, ಅಂತರ್ಗತ SIM ಕಾರ್ಡ್ ಮತ್ತು ಸುರಕ್ಷತೆ, ಭದ್ರತೆ ಮತ್ತು ಅನುಕೂಲತೆಯನ್ನು ಹೆಚ್ಚಿಸುವ 24x7 ಕಾಲ್ ಸೆಂಟರ್ ಹೊಂದಿದೆ.

hyundai-bluelink-5-lakh-connected-cars-sold-in-4-years

SOS/ತುರ್ತು ಸಹಾಯ, ಆಟೋ-ಕ್ರ್ಯಾಶ್ ವಾರ್ನಿಂಗ್, ಟ್ರಿಪ್ ಹಿಸ್ಟರಿ, ರಿಮೋಟ್ ವೆಹಿಕಲ್ ಕಂಡಿಷನ್, VR, ಮೌಲ್ಯವರ್ಧಿತ ಸೇವೆಗಳು ಸೇರಿದಂತೆ 60 ಕ್ಕೂ ಹೆಚ್ಚು ಸಂಪರ್ಕಿತ ಕಾರ್ಯಗಳನ್ನು ನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಸದ್ಯ ಬ್ಲೂಲಿಂಕ್ ಸುಸಜ್ಜಿತ ಕಾರು ಮಾರಾಟಗಳಲ್ಲಿ, ಹ್ಯುಂಡೈ ಕ್ರೆಟಾ, ಹ್ಯುಂಡೈ ವೆನ್ಯೂ ಮತ್ತು ಹ್ಯುಂಡೈ ಐ20 ಸಂಪರ್ಕಿತ ಕಾರ್ ಟ್ರೆಂಡ್ ಅನ್ನು ವರ್ಧಿಸುವಲ್ಲಿ ಹೆಚ್ಚಿನ ಕೊಡುಗೆ ನೀಡಿವೆ.

ಹ್ಯುಂಡೈ ಬ್ಲೂಲಿಂಕ್ ಟೆಕ್ನಾಲಜಿಗೆ ಹೆಚ್ಚುತ್ತಿರುವ ಆದ್ಯತೆಯ ಕುರಿತು ಪ್ರತಿಕ್ರಿಯಿಸಿದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಅನ್ಸೂ ಕಿಮ್, "ಹುಂಡೈ ಮೋಟಾರ್ ಇಂಡಿಯಾ ತನ್ನ ಸಂಪರ್ಕಿತ ಕಾರ್ ಪ್ಲಾಟ್‌ಫಾರ್ಮ್‌ನೊಂದಿಗೆ ಫ್ಯೂಚರಿಸ್ಟಿಕ್ ತಂತ್ರಜ್ಞಾನ ಮತ್ತು ಸ್ಮಾರ್ಟ್ ಮೊಬಿಲಿಟಿಯಲ್ಲಿ ಪ್ರವರ್ತಕನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ ಎಂದರು.

hyundai-bluelink-5-lakh-connected-cars-sold-in-4-years

2019 ರಲ್ಲಿ ಮೊದಲು ಪರಿಚಯಿಸುವ ಮೂಲಕ, ಹ್ಯುಂಡೈ ಮೋಟಾರ್ ಇಂಡಿಯಾ ಸಮೂಹ ವಿಭಾಗದಲ್ಲಿ ಸಂಪರ್ಕಿತ ಕಾರ್ ಸೇವೆಗಳ ಸಮಗ್ರ ಪರಿಸರ ವ್ಯವಸ್ಥೆಯನ್ನು ಒದಗಿಸಿದ ಮೊದಲ ಸಂಸ್ಥೆಯಾಗಿದೆ. ಹ್ಯುಂಡೈ ಗ್ರಾಹಕರಲ್ಲಿ ಬ್ಲೂಲಿಂಕ್ ಗಮನಾರ್ಹ ಹೆಚ್ಚಳಕ್ಕೆ ಸಾಕ್ಷಿಯಾಗಿದೆ, ಈ ಮಹತ್ವದ ಬೆಳವಣಿಗೆಯು ಎಲ್ಲಾ ಪ್ರಯಾಣಗಳಿಗೆ ತಡೆರಹಿತ ಸಂಪರ್ಕವನ್ನು ನೀಡುವ ಬ್ಲೂಲಿಂಕ್ ತಂತ್ರಜ್ಞಾನದ ಬಗ್ಗೆ ಗ್ರಾಹಕರು ತೋರಿದ ಆಳವಾದ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು.

ಬ್ಲೂಲಿಂಕ್ ಚಂದಾದಾರಿಕೆ ಪ್ರಾರಂಭ: ಬ್ಲೂಲಿಂಕ್ ಚಂದಾದಾರಿಕೆಯನ್ನು ಮೊದಲ ಮೂರು ವರ್ಷಗಳಲ್ಲಿ ಗ್ರಾಹಕರಿಗೆ ಉಚಿತವಾಗಿ ನೀಡಲಾಗುತ್ತಿದೆ. ಆ ಅವಧಿಯ ನಂತರ ಪಾವತಿಸಿದ ಆಧಾರದ ಮೇಲೆ ಲಭ್ಯವಿರುತ್ತದೆ. 15ನೇ ಡಿಸೆಂಬರ್ 2023 ರಿಂದ, ಸಬ್‌ಸ್ಕ್ರಿಪ್ಶನ್ ಮುಕ್ತಾಯಗೊಳ್ಳಲಿರುವ ಗ್ರಾಹಕರು ಬ್ಲೂಲಿಂಕ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ತಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಆಫ್‌ಲೈನ್‌ನಲ್ಲಿ ನವೀಕರಿಸಬಹುದು.

hyundai-bluelink-5-lakh-connected-cars-sold-in-4-years

ಬ್ಲೂಲಿಂಕ್ ಮೂಲಕ, ಹ್ಯುಂಡೈ ಗ್ರಾಹಕರಿಗೆ ಅವರ ಸುರಕ್ಷತೆ, ಭದ್ರತೆ ಮತ್ತು ಅನುಕೂಲಕ್ಕೆ ಬಂದಾಗ ಮನಸ್ಸಿನ ಶಾಂತಿಯನ್ನು ನೀಡುತ್ತಿದೆ. ಗ್ರಾಹಕರು ವಿಶೇಷವಾದ ಹುಂಡೈ ಕೊಡುಗೆಗಳು, ಮೌಲ್ಯವರ್ಧಿತ ಸೇವೆಗಳು, ಡ್ರೈವಿಂಗ್ ಸ್ಕೋರ್, ವಾಹನ ಆರೋಗ್ಯ ವರದಿಗಳು ಮತ್ತು ಹೆಚ್ಚಿನದನ್ನು ಆನಂದಿಸಬಹುದು. ಬ್ಲೂಲಿಂಕ್ ಚಂದಾದಾರಿಕೆ ಯೋಜನೆಯು 1 ವರ್ಷ, 2 ವರ್ಷಗಳು ಮತ್ತು 3 ವರ್ಷಗಳವರೆಗೆ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, December 15, 2023, 12:02 [IST]
English summary
Hyundai bluelink 5 lakh connected cars sold in 4 years
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+