ಕಾರು ಮಾರಾಟದಲ್ಲಿ ಹ್ಯುಂಡೈ ಭಾರೀ ಪ್ರಗತಿ: ಹೊಸ ಕಾರು ಬಿಡುಗಡೆಗೊಳಿಸಿ ಸುನಾಮಿ ಎಬ್ಬಿಸಲು ಸಜ್ಜು
ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಕಂಪನಿಯು ತನ್ನ 2023ರ ಜೂನ್ ತಿಂಗಳ ಮಾರಾಟ ವರದಿಯನ್ನು ಬಹಿರಂಗ ಪಡಿಸಿದೆ. ದೇಶದ ಜನಪ್ರಿಯ ಕಾರು ಉತ್ಪಾದಕರಲ್ಲಿ ಒಬ್ಬರಾದ ಹ್ಯುಂಡೈ (Hyundai) ಕಳೆದ ತಿಂಗಳು ಒಟ್ಟು 65,601 ಯುನಿಟ್‌ಗಳ ಮಾರಾಟ ಮಾಡುವ ಮೂಲಕ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ.
2022ರ ಜೂನ್ ತಿಂಗಳಿನಲ್ಲಿ 62,351 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.5.21 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಕಳೆದ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ದೇಶೀಯ ಮಾರಾಟ 50,001 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಇನ್ನೂ 15,600 ಯುನಿಟ್‌ಗಳನ್ನು ರಫ್ತುಗಳನ್ನು ಒಳಗೊಂಡಿದೆ. ಕಳೆದ ವರ್ಷದ ಜೂನ್ ತಿಂಗಳಿನಲ್ಲಿ 49,001 ಯೂನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.2.04 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಇನ್ನು ರಫ್ತಿಗೆ ಸಂಬಂಧಿಸಿದಂತೆ, 2022ರ ಜೂನ್ ತಿಂಗಳಿನಲ್ಲಿ 13,350 ಯುನಿಟ್‌ಗಳನ್ನು ರಫ್ತು ಮಾಡಿದೆ. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.16.85 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. 2023ರ ಜೂನ್ ಮಾರಾಟ ಬಗ್ಗೆ, ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್ ಅವರು ಮಾತನಾಡಿ, 2023ರ ಜೂನ್ ತಿಂಗಳಿನಲ್ಲಿ ಹ್ಯುಂಡೈ 50,000 ಕ್ಕೂ ಹೆಚ್ಚು ದೇಶೀಯ ಮಾರಾಟದ ಪ್ರಮಾಣವನ್ನು ಸಾಧಿಸಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ ಎಂದರು.
ನಮ್ಮ ಎಲ್ಲಾ ಉತ್ಪನ್ನಗಳಿಗೆ ಸಕಾರಾತ್ಮಕ ಗ್ರಾಹಕರನ್ನು ಸೆಳೆದಿದೆ ಮತ್ತು ಹ್ಯುಂಡೈ ವೆರ್ನಾ, ಹುಂಡೈ ಕ್ರೆಟಾ ಮತ್ತು ಹ್ಯುಂಡೈ ಟ್ಯೂಸಾನ್ 23ರ ಮೊದಲಾರ್ಧದಲ್ಲಿ ಆಯಾ ವಿಭಾಗಗಳಲ್ಲಿ ನಾಯಕತ್ವದ ಸ್ಥಾನಗಳನ್ನು ಗಳಿಸಿವೆ. ನಮ್ಮ ಮುಂಬರುವ ಹ್ಯುಂಡೈ ಎಕ್ಸಟರ್ ನಮ್ಮ ಮೌಲ್ಯಯುತ ಗ್ರಾಹಕರಲ್ಲಿ ಹೆಚ್ಚುತ್ತಿರುವ ಉತ್ಸಾಹ ನಿಜವಾಗಿಯೂ ಹರ್ಷದಾಯಕವಾಗಿದೆ ಮತ್ತು ಶೀಘ್ರದಲ್ಲೇ ಈ ಎಸ್‍ಯುವಿಯನ್ನು ರಿಚಯಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ದಕ್ಷಿಣ ಕೊರಿಯಾದ ಆಟೋ ಮೇಜರ್ ಉತ್ತಮ ಮಾರಾಟ ಸಂಖ್ಯೆಗಳನ್ನು ಗಳಿಸಿದೆ. ಜುಲೈ 10 ರಂದು ಎಕ್ಸ್‌ಟರ್ ಮೈಕ್ರೋ ಎಸ್‌ಯುವಿ ಬಿಡುಗಡೆಯಾಗುವುದರಿಂದ ಮುಂಬರುವ ತಿಂಗಳುಗಳಲ್ಲಿ ಬ್ರ್ಯಾಂಡ್ ತನ್ನ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ನೋಡುತ್ತದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಎಕ್ಸ್‌ಟರ್ ಟಾಟಾ ಪಂಚ್, ಸಿಟ್ರನ್ ಸಿ3 ಮತ್ತು ಮಾರುತಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.
ಹೊಸ ಹ್ಯುಂಡೈ ಎಕ್ಸ್‌ಟರ್ ಕಾರು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ 5 ಟ್ರಿಮ್‌ಗಳಲ್ಲಿ ಬಿಡುಗಡೆಯಾಗಲಿದೆ.ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮಿನಿ ಎಸ್‌ಯುವಿಯ ಬಗ್ಗೆ ಮೊದಲಿಗೆ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.2 ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.2 ಲೀಟರ್ ಕಪ್ಪಾ ಪೆಟ್ರೋಲ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಬರುತ್ತದೆ.
ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ ಕನೆಕ್ಟಿವಿಟಿ ಫೀಚರ್ಸ್, 90 ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಮತ್ತು ಓವರ್-ದಿ-ಏರ್ (OTA) ಇನ್ಫೋಟೈನ್‌ಮೆಂಟ್ ಮತ್ತು ಮ್ಯಾಪ್ ನವೀಕರಣಗಳಿಗೆ ಬೆಂಬಲವನ್ನು ನೀಡುತ್ತದೆ. ಈ ಕಾರಿನಲ್ಲಿ ಇನ್‌ಫೋಟೈನ್‌ಮೆಂಟ್ ಯೂನಿಟ್ ಇನ್-ಬಿಲ್ಟ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಿಸ್ಟಂಗಳನ್ನು ಬೆಂಬಲಿಸುತ್ತದೆ. ಇದರೊಂದಿಗೆ 10 ಪ್ರಾದೇಶಿಕ ಮತ್ತು ಎರಡು ಜಾಗತಿಕ ಭಾಷೆಗಳಲ್ಲಿ ಕಸ್ಟಮೈಸ್ ಮಾಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಹೊಸ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್, ರಿವ್ಯೂ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications