ಸಾಟಿಯಿಲ್ಲದ ಇನ್ನೋವಾಗೆ ಸರಿಯಾದ ಪ್ರತಿಸ್ಪರ್ಧಿಯನ್ನು ಪರಿಚಯಿಸಿದ ಹ್ಯುಂಡೈ

ಬಹುತೇಕ ಕಾರು ತಯಾರಕರು ಪ್ರತಿಯೊಂದು ದೇಶದಲ್ಲೂ ತಮ್ಮ ಜನಪ್ರಿಯ ಕಾರು ಮಾದರಿಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಕೆಲವು ಮಾತ್ರ ಆಯಾ ದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಇನ್ನು ಕೆಲವು ಎಲ್ಲಾ ದೇಶಗಳಲ್ಲಿ ವಿವಿಧ ಹೆಸರುಗಳೊಂದಿಗೆ ಮಾರಾಟವಾಗುತ್ತವೆ. ಈಗಾಗಲೇ ಅಂತರಾಷ್ಟ್ರೀಯವಾಗಿ ಮಾರಾಟದಲ್ಲಿರುವ ಜನಪ್ರಿಯ ಕಾರೊಂದು ಭಾರತಕ್ಕೆ ಎಂಟ್ರಿ ಕೊಡುವ ಸಾದ್ಯತೆಗಳಿವೆ.

ವಿಷಯಕ್ಕೆ ಬಂದರೆ 2021 ರಿಂದ ಚೀನಾದಲ್ಲಿ ಬೀಜಿಂಗ್ ಹುಂಡೈ ಜಂಟಿ ಉದ್ಯಮದ ಮೂಲಕ ಹುಂಡೈ ತಯಾರಿಸಿದ ಏಳು-ಆಸನಗಳ MPV ಹ್ಯುಂಡೈ ಕಸ್ಟೊ ಎಲ್ಲರಿಗೂ ತಿಳಿದಿರಬಹುದು. ಈಗ ಇದು ದಕ್ಷಿಣ ಕೊರಿಯಾದ ವಿಯೆಟ್ನಾಂನಲ್ಲಿ ಕಸ್ಟಿನ್ ಎಂಬ ಹೆಸರಿನಲ್ಲಿ ಪರಿಚಯಿಸಿದೆ. ಇದು ಮುಂದಿನ ದಿನಗಳಲ್ಲಿ ಇತರ ಏಷಿಯಾ ಮಾರುಕಟ್ಟೆಗಳಿಗೂ ಎಂಟ್ರಿ ಕೊಡುವ ನಿರೀಕ್ಷೆಯಿದೆ.

hyundai-custin-mpv-introduced-vietnam

ಇನ್ನೋವಾಗೆ ಸರಿಯಾದ ಪ್ರತಿಸ್ಪರ್ಧಿ: ಸಾಮಾನ್ಯವಾಗಿ ಕೆಲ ದೇಶಗಳಲ್ಲಿ ಜನಪ್ರಿಯತೆ ಪಡೆಯುವ ಕಾರುಗಳು ಮತ್ತೊಂದು ದೇಶದಲ್ಲಿ ಫ್ಲಾಪ್ ಕಂಡ ಉದಾಹರಣೆಗಳು ಇವೆ. ಆದ್ರೆ ಹ್ಯುಂಡೈ ಕಸ್ಟಿನ್ ಹಾಗಲ್ಲ ಭಾರತ ಸೇರಿದಂತೆ ಹೆಚ್ಚಿನ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಯಶಸ್ವಿಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಮುಂದಿನ ಎರಡು-ಮೂರು ವರ್ಷಗಳಲ್ಲಿ ಜನಪ್ರಿಯ ಟೊಯೊಟಾ ಇನ್ನೋವಾವನ್ನು ಹಿಂದಿಕ್ಕುವ ಸಾಧ್ಯತೆಗಳು ಇವೆ.

ಆದರೆ ಭಾರತದಲ್ಲಿ ಬಿಡುಗಡೆ ಕುರಿತು ಅಧಿಕೃತ ದೃಢೀಕರಣವನ್ನು ಇನ್ನೂ ಮಾಡಲಾಗಿಲ್ಲ. ಸದ್ಯ ವಿಯೆಟ್ನಂನಲ್ಲಿ ಪರಿಚಯಿಸಿರುವ ಕಸ್ಟಿನ್ ವಿಶೇಷತೆಗಳನ್ನು ನೋಡೋಣ. ಇದು 1.5L ಟರ್ಬೋಚಾರ್ಜ್ಡ್ ಎಂಜಿನ್‌ನಿಂದ 170 PS ಪವರ್ ಮತ್ತು 253 Nm ಗರಿಷ್ಠ ಟಾರ್ಕ್ ಉತ್ಪಾದನೆ ಮಾಡುತ್ತದೆ. ದೊಡ್ಡ 2.0L ಟರ್ಬೊ ಎಂಜಿನ್ 236 PS ಪವರ್ ಮತ್ತು 353 Nm ಅನ್ನು ಟಾರ್ಕ್ ಹೊರಹಾಕುತ್ತದೆ.

hyundai-custin-mpv-introduced-vietnam

ಎರಡೂ ಪವರ್‌ಟ್ರೇನ್‌ಗಳು 8-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಪರ್ಕ ಹೊಂದಿವೆ. ಹುಂಡೈ ಕಸ್ಟಿನ್ 1.5T ಸ್ಟ್ಯಾಂಡರ್ಡ್, 1.5T ಸ್ಪೆಷಲ್ ಮತ್ತು 2.0T ಪ್ರೀಮಿಯಂ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಮೂಲ ರೂಪಾಂತರದ ಬೆಲೆ 850 ಮಿಲಿಯನ್ ಡಾಂಗ್ (ರೂ. 29.10 ಲಕ್ಷ), ಮಿಡ್-ಸ್ಪೆಕ್ 945 ಮಿಲಿಯನ್ ಡಾಂಗ್ (ರೂ. 32.35 ಲಕ್ಷ) ಮತ್ತು ಟಾಪ್ ಮಾಡೆಲ್ 999 ಮಿಲಿಯನ್ ಡಾಂಗ್ (ರೂ. 34.20 ಲಕ್ಷ).

ಹೊಸ ಕಸ್ಟಿನ್ ವಿಯೆಟ್ನಾಂನಲ್ಲಿ ಕಿಯಾ ಗ್ರ್ಯಾಂಡ್ ಕಾರ್ನಿವಲ್ ವಿರುದ್ಧ ಸ್ಪರ್ಧಿಸುವುದರ ಜೊತೆಗೆ, ಇನ್ನೋವಾ ಹೈಕ್ರಾಸ್ ಅನ್ನು ಎದುರಿಸಲಿದೆ, ಅಂದರೆ ಇದು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇನ್ನೋವಾ ಝೆನಿಕ್ಸ್ ಮತ್ತು ಇನ್ನೋವಾ ಕ್ರಾಸ್ ಎಂಬ ಹೆಸರಿನಿಂದ ಮಾರಾಟವಾಗುತ್ತಿದೆ ಎಂಬುದನ್ನು ಗಮನಿಸಬೇಕು. ಟೊಯೋಟಾ ತನ್ನ ಕಾರುಗಳಿಗೆ ವಿವಿಧ ದೇಶಗಳಲ್ಲಿ ವಿವಿಧ ಹೆಸರುಗಳಿಂದ ಮಾರಾಟ ಮಾಡುತ್ತಿದೆ.

hyundai-custin-mpv-introduced-vietnam

ಕಸ್ಟಿನ್ ವೈಶಿಷ್ಟ್ಯತೆಗಳನ್ನು ನೋಡುವುದಾದರೆ, 10.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಸೀಟುಗಳು, ಪನಾರಮಿಕ್ ಸನ್‌ರೂಫ್, ಟೆಕ್ನೋಲಾಜೀಸ್ ಆಧಾರಿತ ಹ್ಯುಂಡೈ ಸ್ಮಾರ್ಟ್‌ಸೆನ್ಸ್ ಸೂಟ್, ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ. ಹಾಗೆಯೇ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಒಟ್ಟೋಮನ್ ಫಂಕ್ಷನ್‌ನೊಂದಿಗೆ ಕ್ಯಾಪ್ಟನ್ ಸೀಟ್, ಫೋಲ್ಡಿಂಗ್ ಟೇಬಲ್, ಆರಾಮ ಮತ್ತು ಅನುಕೂಲಕ್ಕೆ ಸಂಬಂಧಿಸಿದಂತೆ ರಿಲ್ಯಾಕ್ಸ್/ಸ್ಲೀಪ್ ಮೋಡ್‌ನಂತಹ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

ಹುಂಡೈ ಕಸ್ಟಿನ್ MPV ಅನ್ನು ಸ್ಥಳೀಯವಾಗಿ ವಿಯೆಟ್ನಾಂನಲ್ಲಿ ಜೋಡಿಸಲಾಗುವುದು ಮತ್ತು ಮುಂದಿನ ತಿಂಗಳು ಫಿಲಿಪೈನ್ಸ್‌ನಲ್ಲಿ ಸ್ಟಾರ್‌ಗೇಜರ್ ಎಕ್ಸ್ ಜೊತೆಗೆ ಬಿಡುಗಡೆ ಮಾಡಲಾಗುವುದು. ಭಾರತಕ್ಕೆ ಸಂಬಂಧಿಸಿದಂತೆ, ಇದರ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲದಿದ್ದರೂ, ಭಾರತಕ್ಕೆ ಎಂಟ್ರಿಕೊಡುವ ಹೆಚ್ಚಿನ ಸಾಧ್ಯತೆಗಳಿವೆ. ಇನ್ನು ಹ್ಯುಂಡೈ ಭಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಫೇಸ್‌ಲಿಫ್ಟೆಡ್ ಕ್ರೆಟಾವನ್ನು ತರಲು ಯೋಜಿಸುತ್ತಿದೆ.

hyundai-custin-mpv-introduced-vietnam

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 19, 2023, 11:56 [IST]
English summary
Hyundai custin mpv introduced vietnam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+