Hyundai ಕಾರು ಖರೀದಿಸಬೇಕೇ.. ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಭಾರತದಲ್ಲಿ 'ಹ್ಯುಂಡೈ' ಕಾರುಗಳನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ದೇಶೀಯ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದರೂ ತನ್ನ ಮಾರಾಟವನ್ನು ದ್ವಿಗುಣಗೊಳಿಸಲು ಕಂಪನಿ ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ತನ್ನ ವಿವಿಧ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಆ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಸಿಕೊಡುವ ಪ್ರಯತ್ನ ಮಾಡಿದ್ದೇವೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್, ಗ್ರ್ಯಾಂಡ್ ಐ10 ನಿಯೋಸ್, ಐ20 ಹಾಗೂ ಔರಾ ಸೆಡಾನ್‌ಗಳು ರೂ.50,000 ವರೆಗೆ ಡಿಸ್ಕೌಂಟ್ ಪ್ರಯೋಜನವನ್ನು ಹೊಂದಿವೆ. ಅದರಲ್ಲಿಯೇ ನಗದು ರಿಯಾಯಿತಿ, ಎಕ್ಸ್ಚೇಂಜ್ ಬೋನಸ್ ಹಾಗೂ ಕಾರ್ಪೊರೇಟ್ ಪ್ರಯೋಜನಗಳು ಒಳಗೊಂಡಿದೆ. ಹ್ಯುಂಡೈ ಕಂಪನಿ ಕಳೆದ ಏಪ್ರಿಲ್ ತಿಂಗಳಲ್ಲಿ 49,701 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಶೇಕಡ 13% ಪ್ರಗತಿ ಸಾಧಿಸಿದರೂ ಕೋನಾ ಎಲೆಕ್ಟ್ರಿಕ್ ಹೊರತುಪಡಿಸಿ, ಯಾವುದೇ ಎಸ್‌ಯುವಿ ಮೇಲೆ ರಿಯಾಯಿತಿ ಪ್ರಯೋಜನವನ್ನು ಘೋಷಿಸಿಲ್ಲ.

Hyundai ಕಾರು ಖರೀದಿಸಬೇಕೇ.. ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಬಹುನೀರಿಕ್ಷಿತ ಎಲೆಕ್ಟ್ರಿಕ್ ಎಸ್‌ಯುವಿ 'ಕೋನಾ' ಗರಿಷ್ಠ ರಿಯಾಯಿತಿ ಪ್ರಯೋಜನವನ್ನು ಹೊಂದಿದ್ದು, ಕಂಪನಿ ರೂ.50,000 ವರೆಗೆ ಡಿಸ್ಕೌಂಟ್ ನೀಡುತ್ತಿದೆ. ಈ ಕಾರು, ಎಂಜಿ ZS ಇವಿ ಹಾಗೂ ಬಿವೈಡಿ ಆಟ್ಟೋ 3 ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ. ಇದು 39.2 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, 136 hp ಗರಿಷ್ಠ ಪವರ್ ಹಾಗೂ 395 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಕೋನಾ ಎಲೆಕ್ಟ್ರಿಕ್ ಎಸ್‌ಯುವಿಯ ಬ್ಯಾಟರಿ, 50kW DC ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಕೇವಲ 57 ನಿಮಿಷದಲ್ಲಿ 0-80 ಚಾರ್ಜ್ ಆಗಲಿದೆ. ಜೊತೆಗೆ ಸಂಪೂರ್ಣ ಚಾರ್ಜಿನಲ್ಲಿ 452 km (ARAI) ರೇಂಜ್ ನೀಡಲಿದ್ದು, ಭಾರತದ ಗ್ರಾಹಕರಿಗೆ ಈ ಕಾರು, ರೂ.23.84 ಲಕ್ಷ ಬೆಲೆಯಲ್ಲಿ ಲಭ್ಯವಿದೆ. ಜೊತೆಗೆ ಹೊಸ ಖರೀದಿದಾರರನ್ನು ಸೆಳೆಯುವಂತಹ ಹತ್ತು ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.

Hyundai ಕಾರು ಖರೀದಿಸಬೇಕೇ.. ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಹ್ಯುಂಡೈ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಗ್ರ್ಯಾಂಡ್ ಐ10 ನಿಯೋಸ್ ಕೂಡ ಭರ್ಜರಿ ರಿಯಾಯಿತಿ ಪ್ರಯೋಜನಗಳನ್ನು ಹೊಂದಿದ್ದು, ಗ್ರಾಹಕರಿಗೆ ರೂ.38,000ವರೆಗೆ ಡಿಸ್ಕೌಂಟ್ ಸಿಗಲಿದೆ. ಇದರಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ 83 hp ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 5 ಸ್ವೀಡ್ ಮ್ಯಾನುವಲ್ ಅಥವಾ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ರೂ. 5.73 ಲಕ್ಷದಿಂದ ರೂ. 8.51 ಲಕ್ಷ ಬೆಲೆಯನ್ನು ಹೊಂದಿದೆ.

ಕಂಪನಿಯ ಪ್ರಮುಖ ಸೆಡಾನ್ ಆಗಿರುವ 'ಔರಾ' ರೂ.33,000ವರೆಗೆ ರಿಯಾಯಿತಿ ಸೌಲಭ್ಯವನ್ನು ಹೊಂದಿದೆ. ಪ್ರಸ್ತುತ ರೂ.6.33 ಲಕ್ಷದಿಂದ ರೂ. 8.90 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಇದು ಕೂಡ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಪವರ್ ಉತ್ಪಾದಿಸುತ್ತದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಹ್ಯುಂಡೈ ಐ20 ಕಾರು ಈ ಏಪ್ರಿಲ್ ತಿಂಗಳಲ್ಲಿ ರೂ.20,000 ರಿಯಾಯಿತಿ ಪ್ರಯೋಜನವನ್ನು ಹೊಂದಿದ್ದು, 1.2 ಲೀಟರ್ ಪೆಟ್ರೋಲ್ ಹಾಗೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ರೂ.7.46 ಲಕ್ಷದಿಂದ ರೂ.11.88 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. RDE ಮಾನದಂಡಗಳಿಗೆ ಅನುಗುಣವಾಗಿ ಇದರ ಎಂಜಿನ್ ನವೀಕರಿಸಿದ ಹಿನ್ನೆಲೆ, ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಲಾಯಿತು. ಜೊತೆಗೆ ಹುಂಡೈ ಐ20 ಎನ್ ಲೈನ್ ರೂ.15,000 ಡಿಸ್ಕೌಂಟ್ ಆಫರ್ ಹೊಂದಿದೆ.

ಇನ್ನು, ಕೋನಾ ಎಲೆಕ್ಟ್ರಿಕ್, ಗ್ರ್ಯಾಂಡ್ ಐ10 ನಿಯೋಸ್, ಐ20 ಹಾಗೂ ಔರಾ ಸೆಡಾನ್‌ ಮೇಲೆ ನೀಡುತ್ತಿರುವ ರಿಯಾಯಿತಿ ಪ್ರಯೋಜನಗಳನ್ನು ಗಮನಿಸಿದಾಗ ಕಂಪನಿಯು ತನ್ನ ಮಾರಾಟವನ್ನು ದ್ವಿಗುಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಸುಲಭವಾಗಿ ತಿಳಿಯುತ್ತದೆ. ಈ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಜೊತೆಗೆ ಇತರೆ ಕಂಪನಿಗಳಿಗೆ ಪೈಪೋಟಿ ನೀಡಲು ಮುಂದಾಗಿದೆ.

Article Published On: Thursday, May 4, 2023, 19:54 [IST]
English summary
Hyundai discounts kona i20 aura grand i10 nios in may details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+