27 ಕಿ.ಮೀ ಮೈಲೇಜ್, ಅದ್ಬುತ ವಿನ್ಯಾಸ, ಕ್ರೇಜಿ ಫೀಚರ್ಸ್... ಡೆಲಿವರಿಗೆ ಕಾಯುತ್ತಿದ್ದಾರೆ 1 ಲಕ್ಷ ಜನ!
ಹ್ಯುಂಡೈನ ಬಹುನಿರೀಕ್ಷಿತ ಹೊಸ ಎಸ್‌ಯುವಿ ಎಕ್ಸ್‌ಟರ್ (hyundai exter) ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಕಂಪನಿಯು ತನ್ನ ಬುಕಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದು, ಹ್ಯುಂಡೈ ಎಕ್ಸೆಟರ್ ಜುಲೈನಲ್ಲಿ ಬಿಡುಗಡೆಗೆ ಮುಂಚಿತವಾಗಿಯೇ 10,000 ಯುನಿಟ್‌ಗಳಿಗೆ ಬುಕಿಂಗ್‌ಗಳನ್ನು ಸ್ವೀಕರಿಸಿತ್ತು. ಇದೀಗ 1 ಲಕ್ಷಕ್ಕೂ ಅಧಿಕ ಬುಕಿಂಗ್‌ಗಳು ದಾಖಲಾಗಿವೆ ಎಂದು ಕಂಪನಿ ಬಹಿರಂಗಪಡಿಸಿದೆ.
ಮೂಲಗಳ ಪ್ರಕಾರ ಹೊಸ hyundai exter ಮಿನಿ ಎಸ್‌ಯುವಿಗೆ ಕಾಯುವ ಅವಧಿಯು ಕೆಲವು ನಗರಗಳಲ್ಲಿ 4 ತಿಂಗಳುಗಳನ್ನು ತಲುಪುತ್ತದೆ ಎಂದು ತಿಳಿದುಬಂದಿದೆ. 'ಕಾರ್ ದೇಖೋ' ಪ್ರಕಾರ, ಎಕ್ಸೆಟರ್ ದೆಹಲಿ, ಮುಂಬೈ, ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಡೆಲಿವರಿ ಮಾಡಲು 4 ತಿಂಗಳು ತೆಗೆದುಕೊಳ್ಳುತ್ತದೆ. ಪುಣೆ, ಹೈದರಾಬಾದ್ ಮತ್ತು ಸೂರತ್‌ನಂತಹ ನಗರಗಳಲ್ಲಿ 2-3 ತಿಂಗಳ ಕಾಯುವ ಅವಧಿ ಇದೆ.

ಏಕೆ ಈ ಪರಿಸ್ಥಿತಿ? ಕಾರಿನ ವಿಶೇಷತೆಗಳೇನು?: ಹ್ಯುಂಡೈ ಎಕ್ಸೆಟರ್ (hyundai exter) ತನ್ನ ಮೂಲ ವೇರಿಯೆಂಟ್‌ನಲೇ ಸಾಕಷ್ಟು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಮೈಕ್ರೋ ಎಸ್‌ಯುವಿಯ ಎಕ್ಸ್ ಶೋ ರೂಂ ಬೆಲೆ ರೂ. 6 ಲಕ್ಷದಿಂದ ರೂ. 10 ಲಕ್ಷದವರೆಗೆ ಇದೆ. ಹುಂಡೈ ಎಕ್ಸ್‌ಟರ್ ಒಟ್ಟು 7 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಒಟ್ಟಾರೆ ಕಡಿಮೆ ಬೆಲೆ, ತುಂಬು ವೈಶಿಷ್ಟ್ಯಗಳು, ಅಧಿಕ ಮೈಲೇಜ್‌ನಿಂದಾಗಿ ಕಾರಿಗೆ ಬೇಡಿಕೆ ಹೆಚ್ಚಾಗಿದೆ.
ಎಕ್ಸ್‌ಟರ್ ವೇರಿಯೆಂಟ್‌ಗಳನ್ನು ನೋಡುವುದಾದ್ರೆ- EX, EX(O), S, S(O), SX, SX(O), SX(O). ಕಂಪನಿಯು ಈ SUV ಮೇಲೆ 3 ವರ್ಷಗಳ ಅನಿಯಮಿತ ಕಿ.ಮೀ ವಾರಂಟಿಯನ್ನು ನೀಡುತ್ತಿದೆ. 7 ವರ್ಷಗಳ ವಿಸ್ತೃತ ವಾರಂಟಿ ಆಯ್ಕೆಯೂ ಇದೆ. ಈ ಮೈಕ್ರೋ SUV ಒಟ್ಟು 6 ಮೊನೊಟೋನ್, 3 ಡ್ಯುಯಲ್ ಟೋನ್ ಬಾಹ್ಯ ಬಣ್ಣಗಳಲ್ಲಿ ಲಭ್ಯವಿದೆ.

ವೈಶಿಷ್ಟ್ಯಗಳು: ಹುಂಡೈ ಎಕ್ಸೆಟರ್ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 4.2 ಇಂಚಿನ ಡ್ರೈವರ್ ಡಿಸ್ಪ್ಲೇ ಹೊಂದಿದೆ. ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ನೀಡಲಾಗುವ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಇದು ಮೊದಲ ಕಾರು. ಕಾರು ಎಲ್ಲಾ ರೂಪಾಂತರಗಳಲ್ಲಿ ಪ್ರಮಾಣಿತವಾಗಿರುವ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಇದರ ಪ್ರಮಾಣಿತ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಡ್ಯಾಶ್ ಕ್ಯಾಮ್, 6 ಏರ್ ಬ್ಯಾಗ್‌ಗಳು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, TPMS, ಮೂರು ಪಾಯಿಂಟ್ ಸೀಟ್‌ಬೆಲ್ಟ್ ಕೂಡ ಸೇರಿವೆ. ಹ್ಯುಂಡೈ ಎಕ್ಸಟರ್ ಕಾರು 60 ಕ್ಕೂ ಹೆಚ್ಚು ಸಂಪರ್ಕಿತ ಕಾರ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಎಂಜಿನ್ ಮತ್ತು ಮೈಲೇಜ್: ಹುಂಡೈ ಎಕ್ಸೆಟರ್ 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಗರಿಷ್ಠ 81 bhp ಪವರ್ ಮತ್ತು 114 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಂಪನಿಯು ಇದನ್ನು ಸಿಎನ್‌ಜಿ ಆವೃತ್ತಿಯಲ್ಲೂ ಪರಿಚಯಿಸಿದೆ.
ಹ್ಯುಂಡೈ ಎಕ್ಸಟರ್ CNG ಆವೃತ್ತಿಯ ಎಂಜಿನ್ 68 BHP ಪವರ್ ಮತ್ತು 95 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ರೂಪಾಂತರದಲ್ಲಿ ಎಕ್ಸೆಟರ್ ಮೈಲೇಜ್ ನೋಡಿಕೊಂಡರೆ ಲೀ.ಗೆ 19.4 ಕಿ.ಮೀ ಮೈಲೇಜ್ ನೀಡಿದ್ರೆ, CNG ನಲ್ಲಿ ಈ SUV 27.1 kmpl ಮೈಲೇಜ್ ನೀಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಟರ್ ಟಾಟಾ ಪಂಚ್, ಮಾರುತಿ ಇಗ್ನಿಸ್, ರೆನಾಲ್ಟ್ ಕೈಗರ್, ನಿಸ್ಸಾನ್ ಮ್ಯಾಗ್ನೈಟ್ ನಂತಹ ಬಜೆಟ್ ಎಸ್‌ಯುವಿಗಳೊಂದಿಗೆ ಸ್ಪರ್ಧಿಸುತ್ತದೆ. ಎಕ್ಸೆಟರ್ ಭಾರತದಲ್ಲಿ ಹ್ಯುಂಡೈನ ಅತ್ಯಂತ ಕೈಗೆಟುಕುವ SUV ಕೂಡ ಹೌದು. ಬೇಡಿಕೆ ಹೆಚ್ಚಾಗಿ ದಾಖಲೆ ಮಟ್ಟದ ಬುಕಿಂಗ್ಸ್ ಬರಲು ಇದೂ ಕೂಡ ಒಂದು ಕಾರಣವಾಗಿದೆ.


Click it and Unblock the Notifications