Hyundai Exter: ಟಾಟಾ ಪಂಚ್ ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್ಟರ್ ಫಸ್ಟ್ ಲುಕ್ ಬಿಡುಗಡೆ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಇಂದು ತನ್ನ ಮುಂಬರುವ SUV ಆದ ಹ್ಯುಂಡೈ EXTER ನ ವಿನ್ಯಾಸವನ್ನು ಅನಾವರಣಗೊಳಿಸಿದೆ. ಇದು ಹ್ಯುಂಡೈ ಎಕ್ಸ್‌ಟರ್ ಮೈಕ್ರೋ-ಎಸ್‌ಯುವಿಯ ಮೊದಲ ಸ್ಕೆಚ್ ಆಗಿದ್ದು, ಹೊಸ ಕಾರು ಹೇಗೆ ಕಾಣುತ್ತದೆ ಎಂಬುದನ್ನು ಬಹಿರಂಗಪಡಿಸಿದೆ.

ಎಕ್ಸ್‌ಟರ್ ಈ ವಿಭಾಗದಲ್ಲಿ ಹ್ಯುಂಡೈನ ಮೊದಲ ಕಾರಾಗಿದ್ದು, ಮಾರುತಿ ಸುಜುಕಿ ಫ್ರಾಂಕ್ಸ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದ ಒಂದು ದಿನದ ನಂತರ ಹುಂಡೈ ಎಕ್ಸ್‌ಟರ್‌ನ ಸ್ಕೆಚ್ ಅನ್ನು ಬಹಿರಂಗಪಡಿಸಲಾಗಿದೆ. ಒಟ್ಟಾರೆ ಮುಂಭಾಗದ ಡಿಸೈನ್ ಕುರಿತು ಹೇಳುವುದಾದರೆ ಬ್ರಾಂಡ್‌ನ ಇತರ ಜನಪ್ರಿಯ ಮಾದರಿಗಳಾದ ವೆನ್ಯೂ, ಕ್ರೆಟಾ, ಟಕ್ಸನ್ ಮತ್ತು ಅಲ್ಕಾಜರ್ ಸೇರಿದಂತೆ ಇತರ ಹುಂಡೈ ಎಸ್‌ಯುವಿಗಳಲ್ಲಿ ಕಂಡುಬರುವ ಅದೇ ಮಸ್ಕುಲರ್ ಡಿಸೈನ್‌ ಅನ್ನು ನೆನಪಿಸುತ್ತದೆ.

Hyundai Showcases Unique and Modern Design of Hyundai EXTER

ಉಳಿದಂತೆ ಮುಂಭಾಗದಲ್ಲಿ ಕಾರು ಹೊಸ i10 ನಿಯೋಸ್‌ನಲ್ಲಿ ಕಂಡುಬರುವಂತಹ H- ಆಕಾರದ LED DRL ಗಳನ್ನು ಪಡೆದಿದೆ. SUV ಹ್ಯುಂಡೈ ಲೋಗೋ, ಚೌಕಾಕಾರದ ಹೆಡ್‌ಲ್ಯಾಂಪ್‌ಗಳು ಮತ್ತು ಮುಂಭಾಗದಲ್ಲಿ ಬ್ಲ್ಯಾಕ್ಡ್ ಔಟ್ ಗ್ರಿಲ್ ಅನ್ನು ಸಹ ಪಡೆದಿದೆ. ಹುಂಡೈ ಎಕ್ಸ್‌ಟರ್ ಒಂದು ಮೈಕ್ರೋ-ಎಸ್‌ಯುವಿ ಆಗಿದ್ದು ಪ್ರಸ್ತುತ ಕೊರಿಯನ್ ವಾಹನ ತಯಾರಕರು ನೀಡುವ ಚಿಕ್ಕ SUV ಆಗಿದೆ. ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿಯು ಟಾಟಾ ಪಂಚ್ ಮತ್ತು ಸಿಟ್ರನ್ ಸಿ 3 ಮಾದರಿಗಳ ವಿರುದ್ಧ ಸೆಗ್ಮೆಂಟ್‌ನಲ್ಲಿ ಸ್ಪರ್ಧಿಸಲಿದೆ.

ಹ್ಯುಂಡೈ ಎಕ್ಸ್‌ಟರ್ ಯೋಗ್ಯವಾದ ಗ್ರೌಂಡ್ ಕ್ಲಿಯರೆನ್ಸ್ ಮತ್ತು ರೂಫ್ ರೈಲ್‌ಗಳೊಂದಿಗೆ ಮಸ್ಕುಲರ್ ಆಗಿ ಕಾಣುತ್ತಿದ್ದು, ಸಿಲ್ವರ್ ಬಣ್ಣದ ಫ್ರಂಟ್ ಸ್ಕಿಡ್ ಪ್ಲೇಟ್ ಅನ್ನು ಸಹ ಪಡೆಯಬಹುದೆಂದು ಚಿತ್ರವು ಸುಳಿವು ನೀಡುತ್ತಿದೆ. ಸದ್ಯಕ್ಕೆ, ಕಾರಿನ ಹಿಂಭಾಗವು ಹೇಗೆ ಕಾಣುತ್ತದೆ ಎಂಬುದು ತಿಳಿದಿಲ್ಲ ಆದರೆ ವರದಿಗಳನ್ನು ನಂಬುವುದಾದರೆ, ಇದು ಹುಂಡೈ ವೆನ್ಯೂಗೆ ಹೋಲುತ್ತದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹ್ಯುಂಡೈ ನೀಡುವ ಮುಂದಿನ ಅಪ್‌ಡೇಟ್‌ವೆರೆಗು ಕಾಯಬೇಕಿದೆ.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್ ಮಾತನಾಡಿ, "ನಮ್ಮ SUV ಶ್ರೇಣಿಗೆ ಇತ್ತೀಚಿನ ಮತ್ತು ಅತ್ಯಂತ ಪ್ರಮುಖವಾದ ಸೇರ್ಪಡೆಯಾದ ಹ್ಯುಂಡೈ EXTER ನ ಕ್ರಿಯಾತ್ಮಕ ವಿನ್ಯಾಸವನ್ನು ನಾವು ಪ್ರಸ್ತುತಪಡಿಸಲು ಸಂತೋಷವಾಗಿದೆ. ಪ್ಯಾರಾಮೆಟ್ರಿಕ್ ಡೈನಾಮಿಸಂನ ಅಂಶಗಳನ್ನು ಹೊರಸೂಸುತ್ತಾ, ಹ್ಯುಂಡೈ EXTER ಆಧುನಿಕ ಮತ್ತು ಯುವ SUV ಅನ್ನು ಹೊಂದಲು ಬಯಸುವ ಯುವ ಗ್ರಾಹಕರ ಹೊಸ ಆಕಾಂಕ್ಷೆಗಳನ್ನು ಪೂರೈಸಲು ಇದನ್ನು ತರಲಾಗುತ್ತಿದೆ ಎಂದರು.

ಹ್ಯುಂಡೈನ ಗ್ಲೋಬಲ್ ಡಿಸೈನ್ ಐಡೆಂಟಿಟಿಯ 'ಸೆನ್ಸುಯಸ್ ಸ್ಪೋರ್ಟಿನೆಸ್' ಅನ್ನು ಅಭಿವೃದ್ಧಿಪಡಿಸಲಾಗಿದೆ. ಹ್ಯುಂಡೈ ಎಕ್ಸ್‌ಟರ್ ಹೊರಾಂಗಣ, ಪ್ರಯಾಣ ಮತ್ತು ನಗರ ಜೀವನಶೈಲಿಗಾಗಿ ರೂಪಿಸಲಾಗಿದೆ. ಮುಂಭಾಗದ ನೋಟ ಮತ್ತು ವಿಭಿನ್ನ ಸಿಗ್ನೇಚರ್ H ಡಿಸೈನ್ ಹೊಂದಿರುವ LED DRL ಗಳೊಂದಿಗೆ, ಹ್ಯುಂಡೈ EXTER ಒಂದು SUV ಆಧಾರಿತ ವಿನ್ಯಾಸವನ್ನು ಹೊಂದಿದೆ. SUV ಯ ವಿಶಿಷ್ಟವಾದ ಮುಂಭಾಗದ ಮುಖವು ಡೈನಾಮಿಕ್ ಪ್ಯಾರಾಮೆಟ್ರಿಕ್ ಮಾದರಿಗಳೊಂದಿಗೆ ಆಕರ್ಷಕ ನೋಟವನ್ನು ಒಳಗೊಂಡಿದೆ ಎಂದರು.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಪ್ರಸ್ತುತ ಭಾರತದಾದ್ಯಂತ 1336 ಮಾರಾಟ ಕೇಂದ್ರಗಳು ಮತ್ತು 1498 ಸೇವಾ ಕೇಂದ್ರಗಳ ಜಾಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸ್ಟ್ರಾಂಗ್ ಮಾಡೆಲ್ ಲೈನ್-ಅಪ್ ವಿಭಾಗಗಳಾದ್ಯಂತ 12 ಕಾರು ಮಾದರಿಗಳನ್ನು ಒಳಗೊಂಡಿದೆ, ಗ್ರಾಂಡ್ i10 NIOS, i20, i20 N-Line, AURA, VENUE, VENUE N-Line, VERNA, CRETA, ALCAZAR, TUCSON, KONA Electric ಮತ್ತು ಆಲ್-ಎಲೆಕ್ಟ್ರಿಕ್ SUV IONIQ 5 ಅನ್ನು ಮಾರಾಟ ಮಾಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, April 25, 2023, 17:50 [IST]
English summary
Hyundai exter first look design release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+