ಹುಂಡೈ ಎಕ್ಸ್‌ಟರ್ ಮಾಲೀಕರ ಬಳಿ ಬೀದಿ ಜಗಳಕ್ಕಿಲ್ಲ ಅವಕಾಶ: ಪ್ರತಿಕ್ಷಣದ ದೃಶ್ಯ ರೆಕಾರ್ಡ್!
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ತನ್ನ ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಟರ್ (Hyundai Exter) ಮೈಕ್ರೋ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಹ್ಯುಂಡೈ ಮೋಟಾರ್ ಇಂಡಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎಕ್ಸ್‌ಟರ್ ಕಾರಿನ ಆಕರ್ಷಕ ಟಿವಿಸಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಹ್ಯುಂಡೈ ಕಾರುಗಳ ಸರಣಿಯಲ್ಲಿ ಅತ್ಯಂತ ಕೈಗೆಟುಕುವ ಎಸ್‌ಯುವಿಯಾಗಿ ಸ್ಥಾನ ಪಡೆದಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಇತ್ತೀಚೆಗೆ ಹ್ಯುಂಡೈ ಕಂಪನಿಯು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎಕ್ಸ್‌ಟರ್ ಕಾರಿನ ಆಕರ್ಷಕ ಟಿವಿಸಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ ಟಿವಿಸಿ ವೀಡಿಯೊದಲ್ಲಿ ಎಕ್ಸ್‌ಟರ್‌ನ ಹೊಸ ಡ್ಯಾಶ್‌ಕ್ಯಾಮ್ ವೈಶಿಷ್ಟ್ಯವನ್ನು ಪ್ರದರ್ಶಿಸಿದ್ದಾರೆ.

ಯುವ ಜೋಡಿಯು ಪ್ರಶಾಂತವಾದ ಕಾಡಿನ ರಸ್ತೆಯ ಮೂಲಕ ಪ್ರಯಾಣವನ್ನು ಪ್ರಾರಂಭಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಡ್ರೈವರ್ ತನ್ನ ಸುತ್ತಲಿನ ರಮಣೀಯ ಸೌಂದರ್ಯದಲ್ಲಿ ಆನಂದಿಸುತ್ತಾನೆ, ಆದರೆ ಆತನ ಗೆಳತಿ ತನ್ನ ಫೋನ್‌ನಲ್ಲಿ ಮುಳುಗಿರುತ್ತಾಳೆ. ಕಾರು ಚಲಿಸುತ್ತಿರುವಾಗ ಕಾರು ಡ್ರೈವ್ ಮಾಡುವ ಯುವಕ ತನ್ನ ಗೆಳತಿಗೆ ಒಂದು ಚಿರತೆ ಕಾರಿನ ಹಿಂಭಾಗದಲ್ಲಿ ಹೋಯ್ತು ಎಂದು ಹೇಳುತ್ತಾನೆ. ನಂತರ ಆತ ಚಿರತೆ ಹೋದ ದೃಶ್ಯ ಡ್ಯಾಶ್‌ಕ್ಯಾಮ್ ನಲ್ಲಿ ಸೆರೆಯಾಗಿರುವುದನ್ನು ತೋರಿಸುತ್ತಾನೆ.
ಅವಳು ಅಶ್ಚರ್ಯ ಪಡುತ್ತಾಳೆ. ನಂತರ ಆತ ಆಕೆಯ ಮೊಬೈಲ್ಗೆ ಶೇರ್ ಮಾಡುತ್ತಾನೆ. ನಂತರ ತಮಾಷೆಯಾಗಿ ಅವಳನ್ನು ಚುಡಾಯಿಸುತ್ತಾನೆ. ಈ ಜಾಹಿರಾತು ವೀಡಿಯೊ ಮೂಲಕ ಡ್ಯಾಶ್‌ಕ್ಯಾಮ್ ವೈಶಿಷ್ಟ್ಯದ ಮಹತ್ವವನ್ನು ಒತ್ತಿಹೇಳುತ್ತದೆ. ಇನ್ನು ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಕಂಪನಿಯು ಎಕ್ಸ್‌ಟರ್ ಕಾರಿಗಾಗಿ 50,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸ್ವೀಕರಿಸಿದ್ದಾರೆ.

ಬಿಡುಗಡೆಯಾದ ಕೇವಲ 30 ದಿನಗಳಲ್ಲಿ ಬುಕಿಂಗ್ 10,000 ರಿಂದ 50,000ಕ್ಕೆ ಏರಿತು. ಹ್ಯುಂಡೈ ಕೂಡ ಮೂರನೇ ಒಂದು ಭಾಗದಷ್ಟು ಬುಕ್ಕಿಂಗ್‌ಗಳು AMT ರೂಪಾಂತರಗಳಿಗಾಗಿ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5,99,900 ಆಗಿದೆ. ಹ್ಯುಂಡೈ ಎಕ್ಸ್‌ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ಸಿಟ್ರನ್ ಸಿ3 ಮತ್ತು ಮಾರುತಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.
ಇತ್ತೀಚೆಗೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಹ್ಯುಂಡೈನ ಘಟಕದಲ್ಲಿ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ. ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ 1.2-ಲೀಟರ್, 4-ಸಿಲಿಂಡರ್ ಎಂಜಿನ್‌ನೊಂದಿಗೆ ಬಂದಿದೆ. ಈ ಹ್ಯುಂಡೈ ಎಕ್ಸ್‌ಟರ್ ಪೆಟ್ರೋಲ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‌ಟಿ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ. ಆದರೆ ಸಿಎನ್‌ಜಿ ಆವೃತ್ತಿಯಲ್ಲಿ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡಲಾಗಿದೆ.

ಎಕ್ಸ್‌ಟರ್ ಪೆಟ್ರೋಲ್ ಮಾದರಿಯು 19.4 ಕಿ.ಮೀ ಮೈಲೇಜ್ ನೀಡಿದರೆ, AMT ಮಾದರಿ 19.2 ಕಿ.ಮೀ ಮೈಲೇಜ್ ನೀಡುತ್ತದೆ.ಇನ್ನು CNG ಆವೃತ್ತಿಯು ಭರ್ಜರಿ 27.1 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ ಕೆಲವು ವಿಭಾಗ-ಮೊದಲ ಫೀಚರ್ಸ್ ಗಳಲ್ಲಿ, ಅಂತರ್ನಿರ್ಮಿತ ಡ್ಯಾಶ್‌ಕ್ಯಾಮ್, ಶಾರ್ಕ್ ಫಿನ್ ಆಂಟೆನಾ, ಫುಟ್‌ವೆಲ್ ಲೈಟಿಂಗ್, ಪ್ಯಾಡಲ್ ಶಿಫ್ಟರ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಆನ್‌ಬೋರ್ಡ್ ನ್ಯಾವಿಗೇಷನ್ ಮತ್ತು ಹೆಚ್ಚಿನವು ಸೇರಿವೆ.
ಇತರ ಗಮನಾರ್ಹ ವೈಶಿಷ್ಟ್ಯಗಳೆಂದರೆ 4.2-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, Apple CarPlay ಮತ್ತು Android Auto ಜೊತೆಗಿನ 8-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಒಳಗೊಂಡಿದೆ. ಇದರೊಂದಿಗೆ ಪುಶ್-ಬಟನ್ ಸ್ಟಾರ್ಟ್, ಕೂಲ್ಡ್ ಗ್ಲೋವ್‌ಬಾಕ್ಸ್, ಹಿಂಭಾಗದ AC ವೆಂಟ್‌ಗಳು ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಹೊಂದಿದೆ.
ಈ ಮಾದರಿಯು ಡ್ರೈವರ್, ಪ್ಯಾಸೆಂಜರ್, ಕರ್ಟನ್ ಮತ್ತು ಸೈಡ್ ಏರ್‌ಬ್ಯಾಗ್‌ಗಳು ಸೇರಿದಂತೆ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ದೇಶದ ಮೊದಲ ಸಬ್-ಫೋರ್-ಮೀಟರ್ ಎಸ್‌ಯುವಿ ಆಗಲಿದೆ. ಒಟ್ಟಾರೆಯಾಗಿ, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), VSM ಮತ್ತು HAC (ಹಿಲ್ ಅಸಿಸ್ಟ್ ಕಂಟ್ರೋಲ್) ಸೇರಿದಂತೆ 26 ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ. ಹೊಸ ಹ್ಯುಂಡೈ ಎಕ್ಸ್‌ಟರ್ ಕಾರ 6 ಮೊನೊಟೋನ್ ಮತ್ತು 3 ಡ್ಯುಯಲ್-ಟೋನ್ ಬಾಹ್ಯ ಬಣ್ಣ ಆಯ್ಕೆಗಳಲ್ಲಿ ನೀಡುತ್ತಿದೆ. ಈ ಬಣ್ಣದ ಆಯ್ಕೆಗಳಲ್ಲಿ, ರೇಂಜ್ ಕಾಫಿ ಮತ್ತು ಕಾಸ್ಮಿಕ್ ಬ್ಲೂ ಬಣ್ಣದ ಆಯ್ಕೆಗಳನ್ನು ಪರಿಚಯಿಸಲಾಗಿವೆ.


Click it and Unblock the Notifications