Hyundai Exter: ಟಾಟಾ ಪಂಚ್ ಎದುರಾಳಿ ಹ್ಯುಂಡೈ ಎಕ್ಸ್‌ಟರ್‌ ಐತಿಹಾಸಿಕ ಮೈಲಿಗಲ್ಲು ನಿರ್ಮಾಣ.. ಬೆಲೆ ಮೊದಲೇ ಕಮ್ಮಿ!

ದೇಶದ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ರಾಜನಾಗಿ ಮೆರೆಯುತ್ತಿದ್ದ ಟಾಟಾ ಪಂಚ್ (Tata Punch)ಗೆ ಟಫ್ ಫೈಟ್ ನೀಡಲು ಹ್ಯುಂಡೈ (Hyundai) ಜುಲೈ ತಿಂಗಳಲ್ಲಿ ಎಕ್ಸ್‌ಟರ್‌ (Exter) ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಅಂದಿನಿಂದ ದಿನಕ್ಕೊಂದು ಹೊಸ ದಾಖಲೆಯನ್ನು ಈ ಕಾರು ಬರೆಯುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಹ್ಯುಂಡೈ ಕಂಪನಿಯ ಪ್ರಮುಖ ಸಬ್-ಫೋರ್-ಮೀಟರ್ ಎಸ್‌ಯುವಿಯಾಗಿರುವ ಎಕ್ಸ್‌ಟರ್‌ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಮೇ.8 ರಂದು (2023) ಈ ಕಾರಿಗಾಗಿ ಪ್ರಿ ಬುಕ್ಕಿಂಗ್ ಪಡೆಯುವುದನ್ನು ಕಂಪನಿ ಆರಂಭಿಸಿತ್ತು. ಈವರೆಗೆ 65,000ಕ್ಕೂ ಹೆಚ್ಚಿನ ಆರ್ಡರ್ ಪಡೆದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದೆ. ಬುಕ್ಕಿಂಗ್ ಆರಂಭಿಸಿದ ಒಂದು ತಿಂಗಳೊಳಗೆ 10,000 ರಿಂದ 50,000 ಗ್ರಾಹಕರು ಕಾಯ್ದಿರಿಸಿದ್ದರು.

Hyundai Exter: ಟಾಟಾ ಪಂಚ್ ಎದುರಾಳಿ ಹ್ಯುಂಡೈ ಎಕ್ಸ್‌ಟರ್‌ ಐತಿಹಾಸಿಕ ಮೈಲಿಗಲ್ಲು ನಿರ್ಮಾಣ.. ಬೆಲೆ ಮೊದಲೇ ಕಮ್ಮಿ!

ಜುಲೈನಲ್ಲಿ ಕಂಪನಿ, 7,000 ಯುನಿಟ್ ಎಕ್ಸ್‌ಟರ್‌ ಎಸ್‌ಯುವಿಗಳನ್ನು ಮಾರಾಟ ಮಾಡಿತ್ತು. ಸದ್ಯ, ಆಗಸ್ಟ್ ತಿಂಗಳ ಸೇಲ್ಸ್ ವಿವರಗಳು ಲಭ್ಯವಾಗಿಲ್ಲ. ಬೇಡಿಕೆ ಹೆಚ್ಚಾದಂತೆ ಬಹುತೇಕ ಪೆಟ್ರೋಲ್ ರೂಪಾಂತರಗಳು ವಿತರಣೆಯಾಗಲು 48 ರಿಂದ 50 ವಾರ (11 ತಿಂಗಳು), ಸಿಎನ್‌ಜಿ ರೂಪಾಂತರಗಳು 18 ರಿಂದ 24 ವಾರಗಳು ಸಮಯಾವಕಾಶ ಬೇಕಾಗಿದೆ. ಆದರೆ, ರಾಜ್ಯದಿಂದ ರಾಜ್ಯಕ್ಕೆ ಈ ಅವಧಿ ಬೇರೆಯಾಗಿದೆ.

ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ, ಇಎಕ್ಸ್, ಇಎಕ್ಸ್ (ಒ), ಎಸ್, ಎಸ್ (ಒ), ಎಸ್ಎಕ್ಸ್, ಎಸ್ಎಕ್ಸ್ (ಒ) ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗುತ್ತದೆ. ಅದಕ್ಕೆ ಅನುಗುಣವಾಗಿ, ರೂ.6 ರಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಜೊತೆಗೆ, ಗ್ರಾಹಕರನ್ನು ಆಕರ್ಷಿಸುವ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

ಈ ಹ್ಯುಂಡೈ ಎಕ್ಸ್‌ಟರ್‌ ಎರಡು ಪವರ್ ಟ್ರೈನ್ ಆಯ್ಕೆಗಳನ್ನು ದೊರೆಯುತ್ತದೆ. ಮೊದಲಿಗೆ ಪೆಟೋಲ್ ಎಂಜಿನ್ ಬಗ್ಗೆ ತಿಳಿಯೋಣ. ಇದರ 1.2-ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್, 81.8 bhp ಗರಿಷ್ಠ ಪವರ್ ಮತ್ತು 113.8 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 19.2kmpl ರಿಂದ 19.4kmpl ಮೈಲೇಜ್ ನೀಡುತ್ತವೆ.

ಸಿಎನ್‌ಜಿ ಕಿಟ್ ಪಡೆದಿರುವ ಕಾರು, ಇದೇ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದರೆ, ಕಡಿಮೆ ಕಾರ್ಯಕ್ಷಮತೆ, ಹೆಚ್ಚಿನ ಇಂಧನ ದಕ್ಷತೆ ಪಡೆದಿದೆ. 67.7 bhp ಪವರ್ ಹಾಗೂ 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಕೇವಲ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಸಿಗುತ್ತದೆ. 27.1 km/kg ಮೈಲೇಜ್ ನೀಡುತ್ತದೆ.

ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಹೊಂದಿದೆ. ಸುರಕ್ಷತೆ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್ ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.

ಇನ್ನು, ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿಗೆ ಟಾಟಾ ಪಂಚ್ ಮಾತ್ರವಲ್ಲದೆ, ಮಾರುತಿ ಸುಜುಕಿ ಇಗ್ನಿಸ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಸಿಟ್ರಸ್ ಸಿ3 ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಕಂಪನಿಯು ಕೂಡ ಎಕ್ಸ್‌ಟರ್‌ ಈ ಮಟ್ಟದಲ್ಲಿ ಬುಕ್ಕಿಂಗ್ ಪಡೆಯುತ್ತದೆ ಎಂದು ಅಂದಾಜಿಸಿರಲಿಲ್ಲ ಎನ್ನಿಸುತ್ತದೆ. ಮುಂಬರುವ ಹಬ್ಬದ ಋತುವಿನಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, September 2, 2023, 8:35 [IST]
English summary
Hyundai exter suv 65000 bookings milestone details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+