Hyundai Exter: 27 ಕಿ.ಮೀ ಮೈಲೇಜ್‌ನ ಹ್ಯುಂಡೈ ಎಕ್ಸ್‌ಟರ್‌ಗೆ 1 ಲಕ್ಷ ಬುಕ್ಕಿಂಗ್.. 6 ಲಕ್ಷಕ್ಕೆ ಸಿಗುತ್ತೆ!
ದೇಶದ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ಎಕ್ಸ್‌ಟರ್ (Hyundai Exter) ಬಿರುಗಾಳಿ ಎಬ್ಬಿಸುತ್ತಿದೆ. ಆಕರ್ಷಕ ವೈಶಿಷ್ಟ್ಯ, ವಿನ್ಯಾಸ ಹಾಗೂ ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಜನರು ಇಷ್ಟಪಟ್ಟು ಖರೀದಿಸುತ್ತಿದ್ದು, ದಾಖಲೆ ಮಟ್ಟದಲ್ಲಿ ಬುಕ್ಕಿಂಗ್ ಪಡೆದುಕೊಂಡಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಭಾರತದ ಮಾರುಕಟ್ಟೆಯಲ್ಲಿ ಜುಲೈನಲ್ಲಿ ಅದ್ದೂರಿಯಾಗಿ ಬಿಡುಗಡೆಯಾದ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ, ಕೇವಲ ಐದೇ ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಆರ್ಡರ್ ಪಡೆದುಕೊಂಡಿದೆ. ಎಕ್ಸ್‌ಟರ್ ಲಾಂಚ್ ಆಗಿ ಒಂದೇ ತಿಂಗಳಿಗೆ (ಆಗಸ್ಟ್) 50,000ಕ್ಕೂ ಹೆಚ್ಚಿನ ಬುಕ್ಕಿಂಗ್ ಹೊಂದುವ ಮೂಲಕ ದಾಖಲೆ ನಿರ್ಮಿಸಿತ್ತು. ಆ ಬಳಿಕ, ಅಕ್ಟೋಬರ್ ನಲ್ಲಿ 75,000 ಆರ್ಡರ್ ಪಡೆಯುವುದರೊಂದಿಗೆ ಮತ್ತೊಂದು ರೆಕಾರ್ಡ್ ಸೃಷ್ಟಿಸಿತ್ತು.

ಸದ್ಯ, ದೇಶದಲ್ಲಿ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ, ರೂ.6 ಲಕ್ಷದಿಂದ ರೂ.10.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇಎಕ್ಸ್, ಎಸ್, ಎಸ್ಎಕ್ಸ್, ಎಸ್ಎಕ್ಸ್ (ಒ) ಸೇರಿದಂತೆ 5 ರೂಪಾಂತರಗಳು ಹಾಗೂ ರೇಂಜರ್ ಖಾಕಿ, ಸ್ಟಾರಿ ನೈಟ್ ಒಳಗೊಂಡಂತೆ 2 - ಡ್ಯೂಯಲ್ ಟೋನ್ ಹಾಗೂ 5 - ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಈ ಹ್ಯುಂಡೈ ಎಕ್ಸ್‌ಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಗ್ರಾಹಕರಿಗೆ ದೊರೆಯುತ್ತದೆ. ಇದರ 1.2 - ಲೀಟರ್ ಪೆಟ್ರೋಲ್ ಎಂಜಿನ್, 83 PS ಗರಿಷ್ಠ ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ವೀಡ್ ಮ್ಯಾನುವಲ್, 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.

ಸಿಎನ್‌ಜಿ ಕಾರು ಕೂಡ ಇದೇ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಆದರೆ, ಕೊಂಚ ಕಡಿಮೆ 69 PS ಪವರ್ ಹಾಗೂ 95 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಯಲ್ಲಿ ಮಾತ್ರ ಸಿಗುತ್ತದೆ. ಪೆಟ್ರೋಲ್ ರೂಪಾಂತರ 19.2 kmpl - 19.4 kmpl, ಸಿಎನ್‌ಜಿ ವೇರಿಯೆಂಟ್ 27.1 km/kg ಮೈಲೇಜ್ ನೀಡುತ್ತದೆ.
ಹ್ಯುಂಡೈ ಎಕ್ಸ್‌ಟರ್ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ - ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ ಎಸಿ, ಸಿಂಗಲ್-ಪೇನ್ ಸನ್‌ರೂಫ್, ಡ್ಯುಯಲ್ ಕ್ಯಾಮೆರಾ, ಡ್ಯಾಶ್ ಕ್ಯಾಮ್ ರೈನ್ - ಸೆನ್ಸಿಂಗ್ ವೈಪರ್ ಅನ್ನು ಒಳಗೊಂಡಿದೆ.

ಈ ಕಾರು, 6 ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಕ್ಯಾಮೆರಾ, ISOFIX ಚೈಲ್ಡ್ - ಸೀಟ್ ಆಂಕಾರೇಜ್ ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ. ಈ ಎಕ್ಸ್‌ಟರ್‌ಗೆ ಟಾಟಾ ಪಂಚ್, ಮಾರುತಿ ಸುಜುಕಿ ಇಗ್ನಿಸ್, ನಿಸ್ಸಾನ್ ಮ್ಯಾಗ್ನೈಟ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications