Hyundai: ಟಾಟಾ ಪಂಚ್ ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್‌ಟರ್‌ನಿಂದ ಬುಕ್ಕಿಂಗ್‌ನಲ್ಲಿ ಸುನಾಮಿ... ಪ್ರತಿದಿನವು ದಾಖಲೆ!

ಭಾರತದಲ್ಲಿ ಕೆಲವೇ ದಿನಗಳ ಹಿಂದೆ, ಬಿಡುಗಡೆಯಾದ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ (Hyundai Exter SUV)ಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಬಂದಿದ್ದು, ಗರಿಷ್ಠ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಂಡಿದೆ. ಈವರೆಗೆ 16,000 ಹೆಚ್ಚಿನ ಆರ್ಡರ್ ಪಡೆಯಲಾಗಿದೆ ಎಂದು ಹ್ಯುಂಡೈ ಕಂಪನಿ ಸಿಒಒ ತರುಣ್ ಗಾರ್ಗ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರಿಂದಿಗೆ ಮಾತನಾಡಿರುವ ಅವರು, 'ಪ್ರತಿ ದಿನವು ಸುಮಾರು 1,800 ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ. ಅದರಲ್ಲೂ ಪೆಟ್ರೋಲ್ (ಮ್ಯಾನುವಲ್) ಆವೃತ್ತಿಗೆ ಫುಲ್ ಡಿಮ್ಯಾಂಡ್ ಇದೆ. ಶೇಕಡ 40% ಗ್ರಾಹಕರು ಅದನ್ನೇ ಆರ್ಡರ್ ಮಾಡುತ್ತಿದ್ದಾರೆ. ಸಿಎನ್‌ಜಿ ಆವೃತ್ತಿಗೂ ಹೆಚ್ಚಿನ ಬೇಡಿಕೆಯಿದ್ದು, ಶೇಕಡ 22% ಖರೀದಿದಾರರು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

Hyundai Exter: ಟಾಟಾ ಪಂಚ್ ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್‌ಟರ್‌ನಿಂದ ಬುಕ್ಕಿಂಗ್‌ನಲ್ಲಿ ಸುನಾಮಿ... ಪ್ರತಿದಿನವು ದಾಖಲೆ!

ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿಗೆ ಈ ಪರಿಪ್ರಮಾಣದಲ್ಲಿ ಡಿಮ್ಯಾಂಡ್ ಬರುತ್ತದೆ ಎಂದು ಕಂಪನಿ ಊಹಿಸಿರಲಿಲ್ಲ. ಬುಕ್ಕಿಂಗ್ ಸಂಖ್ಯೆ ದ್ವಿಗುಣಗೊಳುತ್ತಿರುವುದರಿಂದ ಕಾಯುವಿಕೆ ಅವಧಿಯು ಅಧಿಕಗೊಳ್ಳುತ್ತಿದೆ. ಸದ್ಯ ಲಭ್ಯವಾಗಿರುವ ವಿವರಗಳ ಪ್ರಕಾರ, ಈ ಕಾರು 12 ವಾರ (ಎರಡು ತಿಂಗಳು) ಕಾಯುವಿಕೆ ಅವಧಿಯನ್ನು ಹೊಂದಿದೆ. ಸಿಎನ್‌ಜಿ ಆವೃತ್ತಿ 6 - 8 ವಾರ, AMT ವೇರಿಯೆಂಟ್ 10 ರಿಂದ 12 ವಾರದೊಳಗೆ ವಿತರಣೆಯಾಗಲಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹ್ಯುಂಡೈ ಎಕ್ಸ್‌ಟರ್‌ ರೂ.5,99 ಲಕ್ಷದಿಂದ ರೂ.9.32 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಈ ಕಾರು, ಎರಡು ಎಂಜಿನ್ ಆಯ್ಕೆಯಲ್ಲಿ ದೊರೆಯಲಿದೆ. ಮೊದಲಿಗೆ ಇದರ ಪೆಟ್ರೋಲ್ ಪವರ್ ಟ್ರೈನ್ ಬಗ್ಗೆ ತಿಳಿಯೋಣ. ಇದು, 1.2-ಲೀಟರ್, 4 ಸಿಲಿಂಡರ್ ಎಂಜಿನ್‌ ಹೊಂದಿದ್ದು, 81.8 bhp ಪವರ್ ಹಾಗೂ 113.8 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

5 ಸ್ಪೀಡ್ ಮ್ಯಾನುವಲ್/ AMT ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಸಿಎನ್‌ಜಿ ಪವರ್ ಟ್ರೈನ್ ಪಡೆದಿರುವ ಕಾರು, 67.7 bhp ಗರಿಷ್ಠ ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಸಿಗುತ್ತದೆ. ಈ ಹ್ಯುಂಡೈ ಎಕ್ಸ್‌ಟರ್‌ ಯಾವುದೇ ಬೈಕಿಗೂ ಕಮ್ಮಿವೆಂಬಂತೆ ರೂಪಾಂತರಗಳಿಗೆ ಅನುಗುಣವಾಗಿ 19.2 ರಿಂದ 27.1 kmpl ಮೈಲೇಜ್ ನೀಡುತ್ತದೆ.

ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ ವೈಶಿಷ್ಟ್ಯದ ವಿಚಾರವಾಗಿ ಮಾತನಾಡುವುದಾದರೆ, 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ವಾಯ್ಸ್ ಆಕ್ಟಿವೇಟೆಡ್ ಕಮಂಡ್ಸ್, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಗ್ರಾಹಕರು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಸುರಕ್ಷತೆಯ ದೃಷ್ಟಿಯಿಂದ ಎಕ್ಸ್‌ಟರ್‌ 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಸೀಟ್‌ಬೆಲ್ಟ್ ರಿಮೈಂಡರ್‌, ISOFIX ಚೈಲ್ಡ್ ಸೀಟ್ ಆಂಕರ್‌ ಅನ್ನು ಹೊಂದಿದೆ. ಕಂಪನಿಯು ಈ ಕಾರಿಗೆ ಸೇಫ್ಟಿಯಲ್ಲಿ 4 ಅಥವಾ 5 ಸ್ಟಾರ್ ರೇಟಿಂಗ್ ಸಿಗಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಹ್ಯುಂಡೈ ಎಕ್ಸ್‌ಟರ್‌ಗೆ ಪ್ರಬಲ ಪ್ರತಿಸ್ಪರ್ಧಿ ಎನ್ನುತ್ತಿರುವ ಟಾಟಾ ಪಂಚ್ ಬಗ್ಗೆ ಮಾತನಾಡುವುದಾದರೆ, ಕಳೆದ ತಿಂಗಳು ಕಂಪನಿಯು ಬರೋಬ್ಬರಿ 10,990 ಯುನಿಟ್ ಪಂಚ್ ಕಾರುಗಳನ್ನು ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 5.5% ಪ್ರಗತಿ ಸಾಧಿಸಿದೆ. ಈ ಪಂಚ್ ಕಾರು, ರೂ.6 ಲಕ್ಷದಿಂದ ರೂ.9.52 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದ್ದು, 18.8 - 20.09 kmpl ಮೈಲೇಜ್ ನೀಡುತ್ತದೆ.

Article Published On: Monday, July 17, 2023, 15:24 [IST]
English summary
Hyundai exter suv waiting period 12 weeks details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+