Hyundai Exter: ಟಾಟಾ ಪಂಚ್ ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್‌ಟರ್‌ ಭಾರತೀಯರ ಮೆಚ್ಚಿನ ಕಾರಾಯ್ತು!

ದೇಶದ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಟಾಟಾ ಪಂಚ್ (Tata Punch) ಕಾರಿಗೆ ಪ್ರಬಲ ಪೈಪೋಟಿ ನೀಡಲು ಹ್ಯುಂಡೈ (Hyundai) ಕಳೆದ ತಿಂಗಳು ಎಕ್ಸ್‌ಟರ್‌ (Exter) ಎಸ್‌ಯುವಿ ಬಿಡುಗಡೆಗೊಳಿಸಿತ್ತು. ಅಂದಿನಿಂದಲೇ ಈ ಕಾರಿಗೆ ದೇಶದಲ್ಲಿ ದೊಡ್ಡಮಟ್ಟದ ಬೇಡಿಕೆ ಸೃಷ್ಟಿಯಾಗಿದ್ದು, ಗ್ರಾಹಕರು, ಭರ್ಜರಿಯಾಗಿ ಬುಕ್ಕಿಂಗ್ ಮಾಡಿದ್ದರು.

ಹ್ಯುಂಡೈ ಎಕ್ಸ್‌ಟರ್‌ ಲಾಂಚ್ ಆಗಿ ತಿಂಗಳು ಕಳೆಯುವುದರಲ್ಲಿ 50,000ಕ್ಕೂ ಹೆಚ್ಚಿನ ಆರ್ಡರ್ ಸ್ವೀಕರಿಸಿತ್ತು. ಕಂಪನಿಯು (ಜುಲೈ) 7,000 ಯುನಿಟ್ ಎಸ್‌ಯುವಿಗಳನ್ನು ಖರೀದಿದಾರರಿಗೆ ಪೂರೈಸಿದೆ. ಸದ್ಯ, ಈ ಕಾರಿನ ಬೇಡಿಕೆ ಎಷ್ಟಿದೆ ಅಂದರೆ, ರೂಪಾಂತರಗಳಿಗೆ ಅನುಗುಣವಾಗಿ ವಿತರಣೆಯಾಗಲು 11 ತಿಂಗಳು ಸಮಯಾವಕಾಶ ಬೇಕು. ನಿಮಗೆ ಗೊತ್ತಿರಲಿ.. ಈ ಕಾಲಾವಧಿ ರಾಜ್ಯದಿಂದ ರಾಜ್ಯಕ್ಕೆ ಒಂದಷ್ಟು ಮಟ್ಟಿಗೆ ಬೇರೆಯಾಗಲಿದೆ. ಹೆಚ್ಚಿನ ಮಾಹಿತಿಗೆ ಡೀಲರ್‌ಶಿಪ್ ಅನ್ನು ಸಂಪರ್ಕಿಸಿರಿ.

Hyundai Exter: ಟಾಟಾ ಪಂಚ್ ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್‌ಟರ್‌ ಭಾರತೀಯರು ಮೆಚ್ಚಿನ ಕಾರಾಯ್ತು!

ಹ್ಯುಂಡೈ ಎಕ್ಸ್‌ಟರ್‌, ಇಎಕ್ಸ್, ಇಎಕ್ಸ್ (ಒ), ಎಸ್, ಎಸ್ (ಒ), ಎಸ್ಎಕ್ಸ್, ಎಸ್ಎಕ್ಸ್ (ಒ) ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಎಂಟ್ರಿ ಲೆವೆಲ್ ಮಾದರಿಗಳು ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿವೆ. ಅದರಲ್ಲೂ ಇಎಕ್ಸ್ (ಒ), ಎಸ್, ಎಸ್ (ಒ) ವೇರಿಯೆಂಟ್ಸ್ ವಿತರಣೆಯಾಗಲು 48 ರಿಂದ 50 ವಾರ (11 ತಿಂಗಳು) ಹಿಡಿಯಲಿದೆ. ಸಿಎನ್‌ಜಿ ರೂಪಾಂತರಗಳು 18 ರಿಂದ 24 ವಾರಗಳಲ್ಲಿ ಡಿಲೆವರಿಯಾಗಲಿದೆ.

ಸದ್ಯ, ಭಾರತ ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ, ರೂ.6 ರಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಈ ಕಾರು, ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೈನ್ ಆಯ್ಕೆಗಳನ್ನು ಹೊಂದಿದೆ. ಇದರ 1.2-ಲೀಟರ್, 4 ಸಿಲಿಂಡರ್ ಎಂಜಿನ್‌ ಪೆಟ್ರೋಲ್ ಎಂಜಿನ್, 81.8 bhp ಗರಿಷ್ಠ ಪವರ್ ಮತ್ತು 113.8 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 5 ಸ್ಪೀಡ್ ಮ್ಯಾನುವಲ್/AMT ಗೇರ್‌ಬಾಕ್ಸ್‌ ನೊಂದಿಗೆ ಲಭ್ಯವಿದೆ.

ಸಿಎನ್‌ಜಿ ಕಿಟ್ ಹೊಂದಿರುವ ಕಾರು, ಅದೇ ರೀತಿಯ ಎಂಜಿನ್ ಪಡೆದಿದೆ. ಆದರೆ, 67.7 bhp ಪವರ್ ಹಾಗೂ 95.2 Nm ಪೀಕ್ ಟಾರ್ಕ್ ಉತ್ಪಾದಿಸಲು ಶಕ್ತವಾಗಿದೆ. ಕೇವಲ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಮಾತ್ರ ಸಿಗುತ್ತದೆ. ಈ ಹ್ಯುಂಡೈ ಎಕ್ಸ್‌ಟರ್‌, ಪೆಟ್ರೋಲ್ ರೂಪಾಂತರಗಳು, 19.2kmpl ರಿಂದ 19.4kmpl ಮೈಲೇಜ್ ನೀಡುತ್ತವೆ. ಸಿಎನ್‌ಜಿ ವೇರಿಯೆಂಟ್ಸ್ 27.1 km/kg ಇಂಧನ ದಕ್ಷತೆ ಹೊಂದಿದೆ.

ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ, ಪ್ರತಿಸ್ಪರ್ಧಿಗಳಿಗೆ ಭಾರೀ ಪೈಪೋಟಿ ನೀಡಲು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ಆಕರ್ಷಕ ಫೀಚರ್ಸ್ ಪಡೆದಿದೆ.

ಸುರಕ್ಷತೆಯ ದೃಷ್ಟಿಯಿಂದ ಎಕ್ಸ್‌ಟರ್‌ ಅತ್ಯುತ್ತಮವಾಗಿದ್ದು, ಗ್ಲೋಬಲ್ NCAPನಿಂದ ಉತ್ತಮ ಸೇಫ್ಟಿ ರೇಟಿಂಗ್ ಪಡೆಯುತ್ತದೆ ಎಂಬ ವಿಶ್ವಾಸವನ್ನು ಹ್ಯುಂಡೈ ಹೊಂದಿತ್ತು. ಪ್ರಸ್ತುತ, ಭಾರತದಲ್ಲಿಯೇ ಕಾರುಗಳ ಸುರಕ್ಷತಾ ಪರೀಕ್ಷೆ ಆರಂಭವಾಗಿದ್ದು, ಎಷ್ಟು ರೇಟಿಂಗ್ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಕಾರು 6 ಏರ್‌ಬ್ಯಾಗ್ಸ್ ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಒಳಗೊಂಡಿದೆ.

ಇದರೊಟ್ಟಿಗೆ ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಸೀಟ್‌ಬೆಲ್ಟ್ ರಿಮೈಂಡರ್‌, ISOFIX ಚೈಲ್ಡ್ ಸೀಟ್ ಆಂಕರ್‌ ಅನ್ನು ಹೊಂದಿದೆ. ಇನ್ನು, ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ ಈಗ ಪಡೆದುಕೊಂಡಿರುವ ಬೇಡಿಕೆಯನ್ನು ಗಮನಿಸಿದಾಗ, ಮುಂಬರುವ ಹಬ್ಬದ ಸೀಸನ್ ನಲ್ಲಿ ಅದು ಮತ್ತಷ್ಟು ಹೆಚ್ಚಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, August 26, 2023, 10:32 [IST]
English summary
Hyundai exter suv waiting period august details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+