ಡಿಸೈನ್ ಇಂಡಿಯಾದಲ್ಲಿ 2023 ರ ಅತ್ಯುತ್ತಮ ವಿನ್ಯಾಸ ಪ್ರಶಸ್ತಿ ಗೆದ್ದು ಮಿಂಚಿದ ಹ್ಯುಂಡೈ ಎಕ್ಸ್‌ಟರ್
ಪ್ರಖ್ಯಾತ 'ಭಾರತದ ಅತ್ಯುತ್ತಮ ವಿನ್ಯಾಸ ಯೋಜನೆ' ಪ್ರಶಸ್ತಿಯನ್ನು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ EXTER SUV ಪಡೆದುಕೊಂಡಿದೆ. ಹಾಗೆಯೇ 'ಭಾರತದ ಅತ್ಯುತ್ತಮ ಇನ್-ಹೌಸ್ ಸ್ಟುಡಿಯೋ' ಅನ್ನು ಹ್ಯುಂಡೈ ಅಡ್ವಾನ್ಸ್ಡ್ ಡಿಸೈನ್ ಇಂಡಿಯಾ ತಂಡಕ್ಕೆ ನೀಡಲಾಯಿತು. ಈ ಪ್ರವೇಶ-ಮಟ್ಟದ SUV ತನ್ನ ಕ್ರಿಯಾತ್ಮಕ ವಿನ್ಯಾಸದಿಂದಾಗಿ ಹಲವಾರು ಮನ್ನಣೆಗಳನ್ನು ಗಳಿಸಿದೆ.
ಹುಂಡೈ EXTER ವಿನ್ಯಾಸಕ್ಕೆ ಸ್ಫೂರ್ತಿಯು ಹೊರಾಂಗಣ ಪ್ರಯಾಣದ ಶಕ್ತಿಯುತ ಮತ್ತು ಉತ್ತೇಜಕ ಅಂಶಗಳಿಂದ ಬಂದಿದೆ. EXTER ಟ್ರೆಂಡಿ, ಜೀವನಶೈಲಿಯ SUV ಪ್ರಸ್ತುತ ಪ್ರವೇಶ ಮಟ್ಟದ ಕಾರುಗಳನ್ನು ಹುಡುಕುವವರಿಗೆ ಹೊಸ ಆಯ್ಕೆಯಾಗಿ ಮಾರ್ಪಟ್ಟಿದೆ. ಕಮಾಂಡಿಂಗ್ ಮುಂಭಾಗದ ನೋಟ, ವಿಶಿಷ್ಟ ಸಿಗ್ನೇಚರ್ H-LED DRL ಗಳೊಂದಿಗೆ SUV ವಿನ್ಯಾಸದೊಂದಿಗೆ ಗ್ರಾಹಕರ ನಿರೀಕ್ಷೆಗಳನ್ನು ಮೀರಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹೇಗಿದೆ ಕಾರು: ಈ ಹ್ಯುಂಡೈ ಎಕ್ಸ್‌ಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇದರ 1.2 - ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್, 81.8 bhp ಪವರ್, 113.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
ಭಾರತದಲ್ಲಿ ಹ್ಯುಂಡೈ ಎಕ್ಸ್‌ಟರ್ ರೂ.6 ಲಕ್ಷದಿಂದ ರೂ.10 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಇಎಕ್ಸ್, ಎಸ್, ಎಸ್ಎಕ್ಸ್, ಎಸ್ಎಕ್ಸ್ (ಒ), ಹಾಗೂ ಎಸ್ಎಕ್ಸ್ (ಒ) ಕನೆಕ್ಟ್ ಎಂಬ ಐದು ರೂಪಾಂತರ ಆಯ್ಕೆಯಲ್ಲಿ ದೊರೆಯುತ್ತದೆ. ಸದ್ಯ, ಸಿಕ್ಕಿರುವ ಮಾಹಿತಿ ಪ್ರಕಾರ, ಎಂಟ್ರಿ ಲೆವೆಲ್ ಮಾದರಿಗಳಾದ ಇಎಕ್ಸ್, ಎಸ್ 9 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ.

ಈ ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯ ಒಳಭಾಗದಲ್ಲಿ HD ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 4.2-ಇಂಚಿನ ಬಣ್ಣದ TFT ಮಲ್ಟಿ-ಇನ್‌ಫರ್ಮೇಶನ್ ಡಿಸ್‌ಪ್ಲೇಯೊಂದಿಗೆ ಸುಧಾರಿತ ಡಿಜಿಟಲ್ ಕ್ಲಸ್ಟರ್‌ನೊಂದಿಗೆ ಸಜ್ಜುಗೊಂಡಿದೆ. ಜೊತೆಗೆ ಬ್ಲೂಲಿಂಕ್ ತಂತ್ರಜ್ಞಾನವನ್ನು ಸಂಪೂರ್ಟ್ ಮಾಡುತ್ತದೆ. ಈ ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ ಕನೆಕ್ಟಿವಿಟಿ ಫೀಚರ್ಸ್, 90 ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಮತ್ತು ಓವರ್-ದಿ-ಏರ್ (OTA) ಇನ್ಫೋಟೈನ್‌ಮೆಂಟ್ ಮತ್ತು ಮ್ಯಾಪ್ ನವೀಕರಣಗಳಿಗೆ ಬೆಂಬಲವನ್ನು ನೀಡುತ್ತದೆ.
ಈ ಕಾರಿನಲ್ಲಿ ಇನ್‌ಫೋಟೈನ್‌ಮೆಂಟ್ ಯೂನಿಟ್ ಇನ್-ಬಿಲ್ಟ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಿಸ್ಟಂಗಳನ್ನು ಬೆಂಬಲಿಸುತ್ತದೆ. ಇದರೊಂದಿಗೆ 10 ಪ್ರಾದೇಶಿಕ ಮತ್ತು ಎರಡು ಜಾಗತಿಕ ಭಾಷೆಗಳಲ್ಲಿ ಕಸ್ಟಮೈಸ್ ಮಾಡಬಹುದು. ಇನ್ನು ಹ್ಯುಂಡೈ ಎಕ್ಸ್‌ಟರ್ ಕಾರಿನ ಒಳಗಿನ ಕನೆಕ್ಟಿವಿಟಿ ಫೀಚರ್ಸ್ ಸುರಕ್ಷತೆ ಮತ್ತು ಭದ್ರತೆ, ರಿಮೋಟ್ ಸೇವೆಗಳು, ಸ್ಥಳ ಆಧಾರಿತ ಫಂಕ್ಷನ್ ಮತ್ತು ವಾಯ್ಸ್ ಅಸಿಸ್ಟ್ ಗೆ ಸಂಬಂಧಿಸಿವೆ.

ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಇಂಟರ್ನೆಟ್ ಸಂಪರ್ಕವಿಲ್ಲದೆ ಸಹ ಕಾರ್ಯನಿರ್ವಹಿಸುತ್ತವೆ. ಈ ಕಮಾಂಡ್‌ಗಳು ಹಿಂಗ್ಲಿಷ್‌ನಲ್ಲಿರಬಹುದು, ಇದು ಭಾರತೀಯ ಡ್ರೈವರ್‌ಗಳಿಗೆ ಸೂಕ್ತವಾಗಿದೆ. ಈ ಕಾರಿನಲ್ಲಿ "ಸನ್‌ರೂಫ್ ಖೋಲೋ", "ಟೆಂಪರೇಚರ್ ಕಾಮ್ ಕಾರ್ದೋ ಮತ್ತು ಇನ್ನೂ ಹೆಚ್ಚಿನ ಪದಗಳನ್ನು ಬಳಸಲಾಗುತ್ತದೆ. ಈ ಹ್ಯುಂಡೈ ಎಕ್ಸ್‌ಟರ್ ಮಿನಿ ಎಸ್‌ಯುವಿಯಲ್ಲಿ 1.2 ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.2 ಲೀಟರ್ ಕಪ್ಪಾ ಪೆಟ್ರೋಲ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಒಳಗೊಂಡಿರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications