Genesis: ಭಾರತದ ಐಷಾರಾಮಿ ಕಾರು ವಿಭಾಗದ ಮೇಲೆ ಹ್ಯುಂಡೈ ಕಣ್ಣು: ಮರ್ಸಿಡಿಸ್‌ಗೆ ಸೆಡ್ಡು ಹೊಡೆಯಲು ತಯಾರಿ
ಹ್ಯುಂಡೈ ಕಂಪನಿಯ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಹ್ಯುಂಡೈ ಭಾರತದಲ್ಲಿ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಇದೀಗ ಹ್ಯುಂಡೈ ಕಂಪನಿಯು ಐಷಾರಾಮಿ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಹ್ಯುಂಡೈನ ಐಷಾರಾಮಿ ಬ್ರ್ಯಾಂಡ್ ಜೆನೆಸಿಸ್ ಭಾರತದ ಪ್ರವೇಶದ ಬಗ್ಗೆ ಹಲವು ಊಹಾಪೋಹಗಳಿವೆ.
ವರದಿಗಳ ಪ್ರಕಾರ, ಹ್ಯುಂಡೈ ಇಂಡಿಯಾ ತನ್ನ ಉತ್ಪಾದನಾ ಸೌಲಭ್ಯಗಳಲ್ಲಿ ಜೆನೆಸಿಸ್ ಬ್ರಾಂಡ್ ಕಾರುಗಳನ್ನು ಸ್ಪರ್ಧಾತ್ಮಕವಾಗಿ ಬೆಲೆಗೆ ಜೋಡಿಸಲು ಸ್ಥಳೀಯವಾಗಿ ನೋಡುತ್ತಿದೆ ಎಂದು ತೋರುತ್ತಿದೆ. ಜೆನೆಸಿಸ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು, ಆಡಿ, ಲೆಕ್ಸಸ್, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ವೋಲ್ವೋ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಜರ್ಮನ್ ಮೂವರು ತಮ್ಮ ಸ್ಥಳೀಯ ಅಸೆಂಬ್ಲಿ ಕಾರ್ಯಾಚರಣೆಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದಾರೆ. ಏಕೆಂದರೆ ಉತ್ಪನ್ನಗಳು ಸಂಪೂರ್ಣವಾಗಿ ಆಮದು ಮಾಡಿಕೊಳ್ಳುವಲ್ಲಿ ಹೆಚ್ಚಿನ ತೆರಿಗೆಗಳನ್ನು ನೀಡಬೇಕಾಗುತ್ತದೆ. ಆದರೆ ಸ್ಥಳೀಯವಾಗಿ ತಯಾರಿಸಿದರೆ ತೆರಿಗೆ ಹಣ ಉಳಿತಾಯವಾಗುತ್ತದೆ. ಜೆನೆಸಿಸ್ ಆಗಮನದ ನಂತರ ಅದೇ ಮಾರ್ಗವನ್ನು ಅನುಸರಿಸಬಹುದು ಎಂದು ಹೇಳಲಾಗುತ್ತಿದೆ.
ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL), ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಸೂ ಕಿಮ್ ಮಾತನಾಡಿ, ತಮ್ಮ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಅದರ ವಿಶಿಷ್ಟ ಆಕರ್ಷಣೆಯಿಂದಾಗಿ ಜೆನೆಸಿಸ್ ಉತ್ತಮ ಗ್ರಾಹಕರ ಆಸಕ್ತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಜೆನೆಸಿಸ್ ತುಲನಾತ್ಮಕವಾಗಿ ಹೊಸ ಐಷಾರಾಮಿ ಬ್ರಾಂಡ್ ಆಗಿದೆ ಮತ್ತು ವಿಭಿನ್ನ ರೀತಿಯ ಐಷಾರಾಮಿಗಳನ್ನು ನೀಡುತ್ತದೆ. ನಾವು ಆಕರ್ಷಕ ವಿನ್ಯಾಸ ಮತ್ತು ಎಲೆಕ್ಟ್ರಿಕ್ ಮಾದರಿಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸುತ್ತೇವೆ.

ಜೆನೆಸಿಸ್ ಬ್ರ್ಯಾಂಡ್ ಅನ್ನು 2015ರ ಕೊನೆಯಲ್ಲಿ ಸ್ವತಂತ್ರ ಐಷಾರಾಮಿ ಕಾರು ತಯಾರಕ ಎಂದು ಅಧಿಕೃತವಾಗಿ ಘೋಷಿಸಲಾಯಿತು. 2017 ರಲ್ಲಿ ತನ್ನ ಮೊದಲ ಸ್ವತಂತ್ರ ಮಾದರಿಯಾದ ಜೆನೆಸಿಸ್ G90 ಅನ್ನು ಬಿಡುಗಡೆ ಮಾಡಿತು. ಇತ್ತೀಚಿನ ವರ್ಷಗಳಲ್ಲಿ ಇದು ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ G80 ಮಾದರಿಗಳ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಜೆನೆಸಿಸ್ GV70 ಮತ್ತು GV80.ಕಾರುಗಳು ಕೂಡ ಉತ್ತಮವಾಗಿ ಮಾರಾಟವಾಗುತ್ತಿದೆ.
ಇತ್ತೀಚೆಗೆ, ದಕ್ಷಿಣ ಕೊರಿಯಾದ ಬ್ರ್ಯಾಂಡ್ GV70 ಎಲೆಕ್ಟ್ರಿಕ್ ಆವೃತ್ತಿಯನ್ನು ಅನಾವರಣಗೊಳಿಸಿತು. ಭಾರತದಲ್ಲಿ ಐಷಾರಾಮಿ ಕಾರುಗಳ ಮಾರಾಟ ಹೆಚ್ಚಾಗುತ್ತಿದೆ. ಇದರಿಂದ ಹ್ಯುಂಡೈ ಕಂಪನಿಯು ಈ ವಿಭಾಗಕ್ಕೆ ಹೆಚ್ಚು ಪ್ರಮುಖ್ಯಯನ್ನು ನೀಡುತ್ತಿದೆ. ಇನ್ನು ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಜೆನೆಸಿಸ್‌ನ ಚೊಚ್ಚಲ ಪ್ರವೇಶವು ಸಂಭವಿಸುವುದಿಲ್ಲ ಎಂದು ಕಿಮ್ ದೃಢಪಡಿಸಿದ್ದಾರೆ. ಆದ್ದರಿಂದ ಮುಂದಿನ ವರ್ಷಗಳಲ್ಲಿ ಜೆನೆಸಿಸ ಬ್ರ್ಯಾಂಡ್ ಭಾರತಕ್ಕೆ ಬರಲಿದೆ.

ಇನ್ನು ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ. ಹುಂಡೈ ಕಂಪನಿಯು ತನ್ನ ಹೊಸ ಕ್ರೆಟಾ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಹುಂಡೈ ಕ್ರೆಟಾ ಮಾದರಿಯು ಹೊಸ ವೆರ್ನಾ ಸೆಡಾನ್‌ನಿಂದ ಒಳಭಾಗ ಮತ್ತು ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹ್ಯುಂಡೈ ಈಗಾಗಲೇ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಮಾರಾಟ ಮಾಡುತ್ತಿದೆ. ಹೊಸ ಕ್ರೆಟಾ ಹಲವಾರು ಭಾರತ-ನಿರ್ದಿಷ್ಟ ವಿನ್ಯಾಸ ಬದಲಾವಣೆಗಳನ್ನು ಮತ್ತು ಒಳಾಂಗಣವನ್ನು ಸ್ವೀಕರಿಸುತ್ತದೆ ಎಂದು ಕೊರಿಯನ್ ದೈತ್ಯ ಕಂಪನಿಯು ಹೇಳಿದೆ. ಈ ಹೊಸ ಹುಂಡೈ ಕ್ರೆಟಾ ಎಸ್‍ಯುವಿಯು 2023ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಈ ಹೊಸ ಹುಂಡೈ ಕ್ರೆಟಾ ಹೊಸ ವೆರ್ನಾ ಸೆಡಾನ್‌ನೊಂದಿಗೆ ಇಂಟೀರಿಯರ್ ಸ್ಟೈಲಿಂಗ್ ಅನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ.


Click it and Unblock the Notifications