ಬಹುನೀರಿಕ್ಷಿತ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್‌ನ ಹೊಸ ರೂಪಾಂತರ ಬಿಡುಗಡೆ

ಭಾರತದಲ್ಲಿ 'ಹ್ಯುಂಡೈ' ಕಂಪನಿಯ ಗ್ರ್ಯಾಂಡ್ ಐ10 ನಿಯೋಸ್ ಅಗ್ಗದ ಬೆಲೆಯ ಹ್ಯಾಚ್‌ಬ್ಯಾಕ್‌ ಎಂದೇ ಜನಪ್ರಿಯತೆ ಗಳಿಸಿದೆ. ಅದರ ಕೈಗೆಟುಕುವ ಬೆಲೆ, ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತದೆ ಎಂದು ಹೇಳಬಹುದು. ಇದೀಗ, ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್‌ನ ಹೊಸ ರೂಪಾಂತರವನ್ನು ಬಿಡುಗಡೆಯಾಗಿದೆ.

ಎರಡು ತಿಂಗಳ ಹಿಂದೆ, ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ, ಗ್ರ್ಯಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್‌ (Grand i10 NIOS facelift) ಆವೃತ್ತಿಯನ್ನು ಲಾಂಚ್ ಮಾಡಿತ್ತು. ಸದ್ಯ, ಸ್ಪೋರ್ಟ್ಜ್ ಎಕ್ಸಿಕ್ಯೂಟಿವ್ (Sportz Executive) ಎಂಬ ಹೊಸ ರೂಪಾಂತರವನ್ನು ಪರಿಚಯಿಸಿದೆ. ಮ್ಯಾಗ್ನಾ ರೂಪಾಂತರಕ್ಕಿಂತ ಕೊಂಚ ಅಧಿಕ ಬೆಲೆಯನ್ನು ಹೊಂದಿದೆ. ಮ್ಯಾನುವಲ್ ಮತ್ತು ಆಟೋಮೆಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂ.7.16 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಪಡೆದಿದೆ.

ಬಹುನೀರಿಕ್ಷಿತ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್‌ನ ಹೊಸ ರೂಪಾಂತರ ಬಿಡುಗಡೆ

ವಾಹನ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸ್ಪೋರ್ಟ್ಜ್ (Sportz) ರೂಪಾಂತರಕ್ಕೆ ಹೋಲಿಸಿದರೆ, ಇದರಲ್ಲಿ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ವೈಶಿಷ್ಟ್ಯವನ್ನು ಕೈಬಿಡಲಾಗಿದೆ. ಆದರೆ, ಪ್ರಮುಖ ಎಲ್ಲ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅವುಗಳೆಂದರೆ, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಕೀಲೆಸ್ ಎಂಟ್ರಿ, ರೇರ್ ಎಸಿ ವೆಂಟ್ಸ್, 15-ಇಂಚಿನ ಅಲಾಯ್ ವೀಲ್ಸ್, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್‌.

ನೂತನ ಹ್ಯುಂಡೈ, ಗ್ರ್ಯಾಂಡ್ ಐ10 ನಿಯೋಸ್ ಸ್ಪೋರ್ಟ್ಜ್ ಎಕ್ಸಿಕ್ಯೂಟಿವ್ ರೂಪಾಂತರದ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು 4 ಏರ್ ಬಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯುಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಹೈ ಸ್ವೀಡ್ ಅಲರ್ಟ್ ಸಿಸ್ಟಮ್ ಅನ್ನು ಹೊಂದಿದೆ.

ಬಹುನೀರಿಕ್ಷಿತ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್‌ನ ಹೊಸ ರೂಪಾಂತರ ಬಿಡುಗಡೆ

ಈ ಹೊಸ ರೂಪಾಂತರದ ಎಂಜಿನ್ ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇದು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5-ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಆಟೋಮೆಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು, ಹ್ಯುಂಡೈ, ಗ್ರಾಂಡ್ ಐ10 ನಿಯೋಸ್ ವಿವಿಧ ರೂಪಾಂತರಗಳಿಗೆ ಅನುಗುಣವಾಗಿ ರೂ.5.68 ಲಕ್ಷದಿಂದ 8.46 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಪಡೆದಿದೆ.

ಗ್ರ್ಯಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್‌ನ 'ಮ್ಯಾಗ್ನಾ' ರೂಪಾಂತರದ ಬಗ್ಗೆ ಮಾತನಾಡುವುದಾದರೆ, ಇದು, ರೂ.6.61 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ವಿತರಣೆಗೆ ಎರಡು ತಿಂಗಳ ಸಮಯ ಹಿಡಿಯುತ್ತದೆ. ಪೋಲಾರ್ ವೈಟ್, ಟೈಫೂನ್ ಸಿಲ್ವರ್, ಆಕ್ವಾ ಟೀಲ್, ಟೈಟಾನ್ ಗ್ರೇ ಸೇರಿದಂತೆ ಆರು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದ್ದು, 1197 ಸಿಸಿ ಎಂಜಿನ್ 81.80 bhp ಗರಿಷ್ಠ ಪವರ್ ಹಾಗೂ 113.8 nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಹುನೀರಿಕ್ಷಿತ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್‌ನ ಹೊಸ ರೂಪಾಂತರ ಬಿಡುಗಡೆ

ಸ್ಪೋರ್ಟ್ಜ್ ರೂಪಾಂತರವು ರೂ.7.20 ಲಕ್ಷ ದರದಲ್ಲಿ ಗ್ರಾಹಕರಿಗೆ ಸಿಗಲಿದ್ದು, ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ರೇರ್ ವ್ಯೂ ಮಿರರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ABS (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಫ್ರಂಟ್ & ರೇರ್ ಪವರ್ ವಿಂಡೋಸ್ ವೀಲ್ ಕವರ್ಸ್ ಹಾಗೂ ಏರ್‌ಬಾಗ್ ಗಳನ್ನು ಹೊಂದಿದೆ.

ಒಟ್ಟಾರೆಯಾಗಿ ಹ್ಯುಂಡೈ ಕಂಪನಿ ಗ್ರ್ಯಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್‌ನ ಸ್ಪೋರ್ಟ್ಜ್ ಎಕ್ಸಿಕ್ಯೂಟಿವ್ ರೂಪಾಂತರವನ್ನು ಬಿಡುಗಡೆ ಮಾಡುವ ಮೂಲಕ ಮಾರುತಿ ಸುಜುಕಿ ಸ್ವಿಫ್ಟ್, ಇಗ್ನಿಸ್ ಮತ್ತು ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್ ಗಳಿಗೆ ಭಾರೀ ಪೈಪೋಟಿ ನೀಡಲು ಹೊರಟಿಸಿದೆ. ಇದರ ಬೆಲೆಯು ಕಡಿಮೆಯೇ ಇದ್ದು, ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು. ಈ ಕಾರಿನ ವಿತರಣೆ ಆರಂಭವಾದ ಮೇಲೆ ಅದರ ಕಾರ್ಯಕ್ಷಮತೆ ಬಗ್ಗೆ ತಿಳಿಯಲಿದೆ.

Article Published On: Thursday, March 16, 2023, 10:48 [IST]
English summary
Hyundai grand i10 nios sportz executive variant launched india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+