ಕ್ರೆಟಾ ಎನ್ ಲೈನ್ ಜನಪ್ರಿಯವಾದ ಬಳಿಕ ಇದರ ನೈಟ್ ಎಡಿಷನ್ ಪರಿಚಯಿಸಿದ ಹ್ಯುಂಡೈ
ಹ್ಯುಂಡೈ ಕ್ರೆಟಾ ಎಸ್‍ಯುವಿಯು ಹಲವು ಮಾರುಕಟ್ಟೆಗಳಲ್ಲಿ ಜನಪ್ರಿಯವಾದ ಎಸ್‍ಯುವಿಯಾಗಿದೆ. ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ.
ಇದೀಗ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ 2022ರ ಬ್ರೆಜಿಲ್ ಮಾರುಕಟ್ಟೆಯಲ್ಲಿ ಕ್ರೆಟಾ ಎನ್ ಲೈನ್ ಎಸ್‍ಯುವಿಯನ್ನು ಪರಿಚಯಿಸಿತ್ತು. ಈ ಆವೃತ್ತಿಯು ಖರೀದಿದಾರರಿಂದ ಭಾರೀ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದರಿಂದ ಕಂಪನಿಯು ಇದೀಗ ಹುಂಡೈ ಕ್ರೆಟಾ ಎನ್ ಲೈನ್ ನೈಟ್ ಎಡಿಷನ್ ಅನ್ನು ಬ್ರೆಜಿಲ್‌ನಲ್ಲಿ ಪರಿಚಯಿಸಿದೆ. ಹುಂಡೈ ಕ್ರೆಟಾ ಎನ್ ಲೈನ್ ನೈಟ್ ಎಡಿಷನ್ ಎಸ್‍ಯುವಿಯ ಕೇವಲ 900 ಯುನಿಟ್‌ಗಳು ಮಾತ್ರ ಲಭ್ಯವಿದೆ.

ಇದು ಸಾಮಾನ್ಯ ಎನ್ ಲೈನ್ ಮಾದರಿಗೆ ಹೋಲಿಸಿದರೆ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ ಮತ್ತು ನ್ಯಾಚುರಲ್ ಆಸ್ಪೈರರ್ಡ್ 2.0 ಎಂಜಿನ್ ಅನ್ನು ಹೊಂದಿದೆ. R$ 181,490 (ಅಂದಾಜು ರೂ.29 ಲಕ್ಷ) ಬೆಲೆಯಲ್ಲಿ ಹ್ಯುಂಡೈ ಕ್ರೆಟಾ ಎನ್ ಲೈನ್ ನೈಟ್ ಆವೃತ್ತಿಯನ್ನು ಪರಿಚಯಿಸಿದೆ. ಹುಂಡೈ ಕ್ರೆಟಾ ಎನ್ ಲೈನ್ ನೈಟ್ ಎಡಿಷನ್ ಎಸ್‍ಯುವಿಯಲ್ಲಿ 2.0-ಲೀಟರ್ 4-ಸಿಲಿಂಡರ್ ನ್ಯಾಚುರಲ್-ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.
ಈ ಎಂಜಿನ್ 157 bhp ಮತ್ತು 188 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಫ್ಲೆಕ್ಸ್-ಇಂಧನ ಆವೃತ್ತಿಯು 167 bhp ಪವರ್ ಮತ್ತು 202 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಮೂಲಕ ಮುಂಭಾಗದ ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ನೈಟ್ ಆವೃತ್ತಿಯು ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಅನ್ನು ಸಹ ಹೊಂದಿದೆ.
ADAS ತಂತ್ರಜ್ಞಾನವು ಅಡಾಪ್ಟಿವ್ ಆಟೊಪೈಲಟ್, ಲೇನ್ ಅಸಿಸ್ಟೆಂಟ್, ಸ್ವಯಂಚಾಲಿತ ಬ್ರೇಕಿಂಗ್‌ನೊಂದಿಗೆ ಕೊಲಿಷನ್ ಮತ್ತು ಮತ್ತು ಸೈಡ್ ಕ್ಯಾಮೆರಾಗಳಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ಎನ್ ಲೈನ್ ನೈಟ್ ಎಡಿಷನ್ ಮಾದರಿಯು ಕ್ರೆಟಾ ಎನ್ ಲೈನ್ 1.0 ಟರ್ಬೊಗೆ ಹೋಲುತ್ತದೆ. ಇದು ವಿಶೇಷವಾದ ಎನ್-ಲೈನ್ ಬಂಪರ್‌ಗಳು, ಡಾರ್ಕ್ ಕ್ರೋಮ್‌ನಲ್ಲಿ ಮುಂಭಾಗದ ಗ್ರಿಲ್, ಡಬಲ್ ಎಕ್ಸಾಸ್ಟ್, ಸೈಡ್ ಸ್ಕರ್ಟ್‌ಗಳು ಮತ್ತು ಸ್ಪಾಯ್ಲರ್‌ಗಳೊಂದಿಗೆ ಬರುತ್ತದೆ.
ಈ ನೈಟ್ ಎಡಿಷನ್ ಹಿಂಭಾಗದ ಗುರುತಿನ ಲೋಗೋಗಳೊಂದಿಗೆ ಬರುತ್ತದೆ. ಇನ್ನು ಈ ಎಸ್‍ಯುವಿಯು ಎಲ್‌ಇಡಿ ಲೈಟಿಂಗ್ ಸಿಸ್ಟಮ್ ಮತ್ತು ವಿಶೇಷ 18-ಇಂಚಿನ ಬ್ಲ್ಯಾಕ್ ಫಿನಿಶಿ ವ್ಹೀಲ್ ಗಳನ್ನು ಪಡೆಯುತ್ತದೆ. ಕ್ರೆಟಾ ಎನ್ ಲೈನ್ ನೈಟ್ ಎಡಿಷನ್ ಕ್ಯಾಬಿನ್ ಬ್ಕ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯ ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್, ಅಲ್ಯೂಮಿನಿಯಂ ಪೆಡಲ್ ಮತ್ತು ಸಿಲ್‌ಗಳಲ್ಲಿ ಡಾರ್ಕ್ ಫಿನಿಶ್ ಅನ್ನು ಹೊಂದಿದೆ,
ಇನ್ನು ಈ ಎಸ್‍ಯುವಿಯ ಬೋಸ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಡ್ರೈವಿಂಗ್ ಮೋಡ್ ಸೆಲೆಕ್ಟರ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಡ್ರೈವರ್ ಸೀಟ್, ಆನ್-ಸೈಟ್ ಕೀಯೊಂದಿಗೆ ಆಟೋಮ್ಯಾಟಿಕ್ ಎಸಿ ಮತ್ತು ಪುಶ್-ಬಟನ್ ಸ್ಟಾರ್ಟ್ ಅನ್ನು ಹೊಂದಿದೆ. ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಆರಂಭಿಕ ಬೆಲೆಯು ರೂ.10.84 ಲಕ್ಷವಾಗಿದೆ. 2023ರ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ಪವರ್‌ಟ್ರೇನ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಇನ್ನು ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಫೇಸ್‌ಲಿಫ್ಟೆಡ್ ಮಾಡೆಲ್ ಅನ್ನು ಬಿಡುಗಡೆ ಮಾಡಿಲ್ಲ. ಹ್ಯುಂಡೈ ಕ್ರೆಟಾ ಎಸ್‍ಯುವಿಯ ಫೇಸ್‌ಲಿಫ್ಟೆಡ್ ಮಾದರಿಯನ್ನು 2024 ರಲ್ಲಿ ಬಿಡುಗಡೆಗೊಳಿಸಲು ಯೋಜಿಸಲಾಗಿದೆ. 2023ರ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಬೆಲೆಯು ರೂ.45,000 ವರೆಗೆ ಏರಿಕೆಯನ್ನು ಪಡೆದುಕೊಂಡಿದೆ. ನವೀಕರಿಸಿದ ಕ್ರೆಟಾ ಎಸ್‍ಯುವಿಯ ಎಲ್ಲಾ ರೂಪಾಂತರಗಲು ಸ್ಟ್ಯಾಂಡರ್ಡ್ ಆಗಿ ಹೊಸ ಸುರಕ್ಷತಾ ಫೀಚರ್ಸ್ ಗಳೊಂದಿಗೆ ಬರುತ್ತದೆ.


Click it and Unblock the Notifications