Hyundai Ioniq 5: ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರಿದ 631 ಕಿ.ಮೀ ರೇಂಜ್ ನೀಡುವ ಈ ಎಲೆಕ್ಟ್ರಿಕ್ ಎಸ್‍ಯುವಿ

ಹ್ಯುಂಡೈ Ioniq 5 ಎಲೆಕ್ಟ್ರಿಕ್ ಎಸ್‍ಯುವಿ ದೇಶದ ಎಲ್ಲಾ ಏಳು ಅದ್ಭುತಗಳನ್ನು ಒಳಗೊಂಡಿರುವ ಅತ್ಯಂತ ವೇಗದ EV ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿದೆ. ಭಾರತದಲ್ಲಿನ ಎಲ್ಲಾ ಅದ್ಭುತಗಳನ್ನು ಒಳಗೊಂಡಿರುವ 'ವೇಗದ EV ಡ್ರೈವ್' ಶೀರ್ಷಿಕೆಯೊಂದಿಗೆ ಎಲೆಕ್ಟ್ರಿಕ್ ಎಸ್‍ಯುವಿ ಅನ್ನು ನೀಡಲಾಗಿದೆ.

ಹ್ಯುಂಡೈ Ioniq 5 ಭಾರತದಲ್ಲಿ ಬಿಡುಗಡೆಯಾದ ಕೊರಿಯನ್ ಕಾರು ತಯಾರಕರಿಂದ ಎರಡನೇ ಎಲೆಕ್ಟ್ರಿಕ್ ಕಾರು. ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಈ ವರ್ಷದ ಆರಂಭದಲ್ಲಿ 2023ರ ಆಟೋ ಎಕ್ಸ್‌ಪೋದಲ್ಲಿ ರೂ.44.95 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಬೆಲೆಯು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಹ್ಯುಂಡೈ Ioniq 5 ಎಲೆಕ್ಟ್ರಿಕ್ ಎಸ್‍ಯುವಿ 631 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರಿದ ಈ ಎಲೆಕ್ಟ್ರಿಕ್ ಎಸ್‍ಯುವಿ

ಕಳೆದ ವರ್ಷ ನವೆಂಬರ್‌ನಲ್ಲಿ Ioniq 5 ಎಲೆಕ್ಟ್ರಿಕ್ ಎಸ್‌ಯುವಿಯ ದಾಖಲೆಯ ಓಟವನ್ನು ಫ್ಲ್ಯಾಗ್ ಆಫ್ ಮಾಡಿತ್ತು. ಇದು ನವೆಂಬರ್ 18 ರಂದು ಹರಿಯಾಣದ ಗುರುಗ್ರಾಮ್‌ನಲ್ಲಿರುವ ಕಾರ್ಪೋರೇಟ್ ಪ್ರಧಾನ ಕಛೇರಿಯಿಂದ ಪ್ರಾರಂಭವಾಯಿತು. Ioniq 5 ಭಾರತದ ಅದ್ಭುತಗಳನ್ನು ಅನ್ವೇಷಿಸಿ ಹೊರಟಿತು. ಇದರಲ್ಲಿ ಗೋಲ್ಡನ್ ಟೆಂಪಲ್, ತಾಜ್ ಮಹಲ್, ಖಜುರಾಹೋ ದೇವಾಲಯಗಳು, ನಳಂದದ ಪ್ರಾಚೀನ ಅವಶೇಷಗಳು, ಕೋನಾರ್ಕ್ ಸೂರ್ಯ ದೇವಾಲಯ, ಹಂಪಿ ಮತ್ತು ಗೊಮಟೇಶ್ವರ ಮುಂತಾದ ಸ್ಥಳಗಳಿಗೆ ಭೇಟಿ ನೀಡಿತು.

ಇದು ಕಿಯಾ EV6 ಅನ್ನು ಸಹ ಆಧಾರವಾಗಿರುತ್ತದೆ. ಹ್ಯುಂಡೈ Ioniq 5 ಎಲೆಕ್ಟ್ರಿಕ್ ಎಸ್‍ಯುವಿ 4,635 ಎಂಎಂ ಉದ್ದ, 1,890 ಎಂಎಂ ಅಗಲ ಮತ್ತು 1,625 ಎಂಎಂ ಎತ್ತರವಿದೆವನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿ 3,000mm ವೀಲ್‌ಬೇಸ್ ಅನ್ನು ಹೊಂದಿದೆ. ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಮಾದರಿಯು ಆಗಿದ್ದು, ಹೊರಭಾಗದಲ್ಲಿ ಭವಿಷ್ಯದ ವಿನ್ಯಾಸವನ್ನು ಹೊಂದಿದೆ.

ಇದು ಪಿಕ್ಸಲೇಟೆಡ್ LED ಟೈಲ್-ಲೈಟ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳೊಂದಿಗೆ ಡ್ಯುಯಲ್ LED ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಈ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ ಡ್ಯುಯಲ್ ಫ್ಲೋಟಿಂಗ್ ಸ್ಕ್ರೀನ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಆಕರ್ಷಕ ಒಳಾಂಗಣದೊಂದಿಗೆ ಬರುತ್ತದೆ. ಈ ಕಾರಿನಲ್ಲಿ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ.

ಈ ಹ್ಯುಂಡೈ ಕಾರಿನಲ್ಲಿ ಡ್ರೈವರ್ ಡಿಸ್‌ಪ್ಲೇಗಳು, 360 ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್, V2L ಮತ್ತು ಇತರವುಗಳೊಂದಿಗೆ ಸುಸಜ್ಜಿತವಾಗಿರುತ್ತದೆ. ಈ ಹೊಸ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ ಅನ್ನು ಹೊಂದಿದೆ. ಇದರೊಂದಿಗೆ ಲೇನ್ ಕೀಪ್ ಮತ್ತು ಡಿಪಾರ್ಚರ್ ಏಡ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್‌ನಂತಹ ಫೀಚರ್ಸ್ ಗಳೊಂದಿಗೆ ADAS (ಅಡ್ವಾನ್ಸ್ಡ್ ಡ್ರೈವರ ಅಸಿಸ್ಟ್ ಸಿಸ್ಟಂ) ನೊಂದಿಗೆ ಬರುತ್ತದೆ.

ಈ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನಲ್ಲಿ 72.6kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ, ಇದು ಸಿಂಗಲ್ ಚಾರ್ಜ್‌ನಲ್ಲಿ ARAI- ಪ್ರಕಾರ, 631 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಮೋಟರ್ 217 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ RWD (ರೇರ್-ವ್ಹೀಲ್ ಡ್ರೈವ್) ಸಿಸ್ಟಂ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, March 25, 2023, 10:53 [IST]
English summary
Hyundai ioniq 5 ev entered india book of records details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+