Hyundai Car: ಬಹುನೀರಿಕ್ಷಿತ ಹ್ಯುಂಡೈ ಹೊಸ SUV ಹೆಸರು ಬಹಿರಂಗ.. ಟಾಟಾ ಪಂಚ್, ಮಾರುತಿ ಫ್ರಾಂಕ್ಸ್‌ಗೆ ಪ್ರತಿಸ್ಪರ್ಧಿ
ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸುವ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL), ತನ್ನ ಹೊಸ ಎಸ್‌ಯುವಿ ಟೀಸರ್ ಬಿಡುಗಡೆಯೊಂದಿಗೆ ಅದರ ಹೆಸರನ್ನು ಬಹಿರಂಗಪಡಿಸಿದೆ. ಈ ಎಸ್‌ಯುವಿ, ಟಾಟಾ ಪಂಚ್, ಮಾರುತಿ ಸುಜುಕಿ ಫ್ರಾಂಕ್ಸ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ ಎಂದು ವರದಿಯಾಗಿದೆ.
ಹ್ಯುಂಡೈ, ನೂತನ ಎಸ್‌ಯುವಿಗೆ ಎಕ್ಸ್‌ಟರ್ (EXTER) ಎಂದು ಹೆಸರಿಟ್ಟಿದ್ದು, ಇದು ಕಂಪನಿಯ ಎಸ್‌ಯುವಿ ವಿಭಾಗಕ್ಕೆ ಎಂಟನೇ ಸೇರ್ಪಡೆಯಾಗಿದೆ. ಮುಂಬರಲಿರುವ ಈ ಕಾರಿನ ಬಗ್ಗೆ ಯಾವುದೇ ವಿವರಗಳು ತಿಳಿದುಬಂದಿಲ್ಲ. ಆದರೆ, ದಕ್ಷಿಣ ಕೊರಿಯಾ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ 'Ai3' (ಕ್ಯಾಸ್ಪರ್) ಕಾಂಪ್ಯಾಕ್ಟ್ ಎಸ್‌ಯುವಿ ವಿನ್ಯಾಸವನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಸದ್ಯ, ಈ ಎಸ್‌ಯುವಿ ಮೇಲೆ ಗ್ರಾಹಕರಿಗೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿವೆ.

ಹ್ಯುಂಡೈ, ಎಕ್ಸ್‌ಟರ್ ಎಸ್‌ಯುವಿ, ಒಳಭಾಗದಲ್ಲಿ ಸಾಕಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆ ಇದೆ. ಪ್ರಮುಖವಾಗಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಬ್ಲೂಲಿಂಕ್ ಕನೆಕ್ಟಿವಿಟಿ ಸೂಟ್, ಕ್ಲೇಮೇಟ್ ಕಂಟ್ರೋಲ್, ಅಂಬಿಯೇಟ್ ಲೈಟಿಂಗ್ ಹಾಗೂ ನ್ಯಾವಿಗೇಶನ್ ನಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ನೀರಿಕ್ಷೆಯಿದೆ. ಪ್ರತಿಯೊಬ್ಬ ಖರೀದಿದಾರರ ಆದ್ಯತೆಯಾಗಿರುವ ಸುರಕ್ಷತೆಯ ದೃಷ್ಟಿಯಿಂದಲೂ ನವೀನ ಫೀಚರ್ಸ್ ಹೊಂದಿರಲಿದೆ.
ಈ ಎಸ್‌ಯುವಿ, ಹ್ಯುಂಡೈ ಗ್ರಾಂಡ್ ಐ10 ನಿಯೋಸ್ (Hyundai Grand i10 Nios) ಹ್ಯಾಚ್‌ಬ್ಯಾಕ್ ಪಡೆದಿರುವಂತೆ ಕಂಪನಿಯ ಕೆ1 ಸ್ಮಾಲ್ ಕಾರ್ ಪ್ಲಾಟ್‌ಫಾರ್ಮ್ ಆಧರಿಸಿರುವುದರಿಂದ ಅದೇ ರೀತಿಯ ಸೈಜ್ ನಲ್ಲಿ ಇರಬಹುದು. ಜೊತೆಗೆ ಅದೇ ಕಾರಿನಂತೆಯೇ 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿರಬಹುದು. ಆದರೆ, ಕಂಪನಿ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಸದ್ಯ, ಭಾರತದಲ್ಲಿ ಖರೀದಿಗೆ ದೊರೆಯುವ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಹೊಂದಿದ್ದು, 82 bhp ಗರಿಷ್ಠ ಪವರ್ ಹಾಗೂ 113.8 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಹಾಗೂ 5-ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಹ್ಯುಂಡೈ, ಎಕ್ಸ್‌ಟರ್ ಎಸ್‌ಯುವಿಗೆ ಪ್ರತಿಸ್ಪರ್ಧಿ ಎಂದು ಬಿಂಬಿಸಲಾಗಿರುವ ಟಾಟಾ ಪಂಚ್ ಬಗ್ಗೆ ಹೇಳುವುದಾದರೆ, ರೂ.6 ಲಕ್ಷದಿಂದ ರೂ.9.47 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 18.8 - 20.09 kmpl ಮೈಲೇಜ್ ನೀಡುತ್ತದೆ.
ಕೆಲವೇ ದಿನಗಳಲ್ಲಿ ಬಹುಬೇಡಿಕೆಯ ಮಾರುತಿ ಸುಜುಕಿ ಫ್ರಾಂಕ್ಸ್ ಬಿಡುಗಡೆಯಾಗಲಿದ್ದು, ರೂ.10 ಲಕ್ಷದೊಳಗೆ ಬೆಲೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆ ಇದ್ದು, ಈಗಾಗಲೇ ಗರಿಷ್ಠ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿದೆ. ಜೊತೆಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಒಟ್ಟಾರೆ, ಹ್ಯುಂಡೈ, ಎಕ್ಸ್‌ಟರ್ ಎಸ್‌ಯುವಿ, ಟಾಟಾ ಪಂಚ್ ಹಾಗೂ ಮಾರುತಿ ಸುಜುಕಿ ಫ್ರಾಂಕ್ಸ್‌ಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಈಗಾಗಲೇ ಮಾರುಕಟ್ಟೆ ತಜ್ಞರು ಬಿಂಬಿಸುತ್ತಿದ್ದು, ಕೆಲವೇ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳುವ ಸಾಧ್ಯತೆ ಇದ್ದು, ಆ ನಂತರವೇ ಎಕ್ಸ್‌ಟರ್ ಎಸ್‌ಯುವಿಯ ನಿಜವಾದ ಕಾರ್ಯಕ್ಷಮತೆ, ವಿನ್ಯಾಸ ಹಾಗೂ ವೈಶಿಷ್ಟ್ಯದ ಕುರಿತು ನಿಖರವಾದ ಮಾಹಿತಿ ಸಿಗಲಿದೆ. ಅಲ್ಲಿಯವರೆಗೆ ಕಾಯಬೇಕು.


Click it and Unblock the Notifications