ಈ ಕಂಪನಿಯ ಕಾರು ಕೊಳ್ಳುವವರಿಗೆ ಸುವರ್ಣ ಕಾಲ: ಬರೋಬ್ಬರಿ 1 ಲಕ್ಷದವರೆಗೆ ಫ್ಲಾಟ್‌ ಡಿಸ್ಕೌಂಟ್‌

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರು ಕಂಪನಿಗಳಲ್ಲಿ ಹ್ಯುಂಡೈ ಸಹ ಒಂದು. ಹಲವಾರು ಆಕರ್ಷಕ ಡಿಸಯನ್‌ ಮತ್ತು ಫೀಚರ್‌ಗಳಿರುವ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿರುವು ಹ್ಯುಂಡೈ ಕಾರು ಕಂಪನಿಯು ಇತ್ತೀಚೆಗವಷ್ಟೇ ಹ್ಯುಂಡೈ ಎಕ್ಸ್‌ಟರ್‌ ಎಂಬ ಮೈಕ್ರೋ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಸುದ್ದಿಯಾಗಿತ್ತು.

ಇದೀಗ ಹ್ಯುಂಡೈ ಕಂಪನಿಯು ಮತ್ತೆ ಸುದ್ದಿಯಲ್ಲಿದ್ದು, ತನ್ನ ಹೆಸರಾಂತ ಗ್ರಾಹಕ ಪ್ರೇಮಿ ಕಾರುಗಳ ಮೇಲೆ ಭಾರೀ ರಿಯಾಯಯಿತಿಯನ್ನು ಘೋಷಿಸಿದೆ. ಹೌದು ತನ್ನ ಕಾರುಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸುವುದರ ಮೂಲಕ ಇದು ಮತ್ತಷ್ಟು ಹೊಸ ಕಾರುಗಳನ್ನು ತನ್ನತ್ತ ಸೆಳೆಯುವ ತವಕದಲ್ಲಿದೆ ಎಂದರೆ ತಪ್ಪಾಗಲಾರದು.

Hyundai Offers Upto 1 Lakh Discounts On Its Cars

ದೊರೆತಿರುವ ಮಾಹಿತಿಗಳ ಪ್ರಕಾರ ಹ್ಯುಂಡೈ (Hyundai Cars) ಕಂಪನಿಯು ನಿಗದಿಪಡಿಸಿರುವ ಕಾರುಗಳ ಮೇಲೆ ಸುಮಾರು ಒಂದು ಲಕ್ಷ ರೂ ವರೆಗೂ ರಿಯಾಯಿತಿಯನ್ನು ಗೋಷಿಸಿದೆ ಎಂದು ತಿಳಿದು ಬಂದಿದೆ. ಹ್ಯುಂಡೈ ಕಂಪನಿಯ ಸುಮರು 6 ಕಾರುಗಳು ಪಟ್ಟಿಯಲ್ಲಿದ್ದು, ಅವುಗಳ ಕುರಿತಾಗಿನ ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೋಡೊಣ.

ಹ್ಯುಂಡೈ ಗ್ರ್ಯಾಂಡ್‌ i10: ಹ್ಯುಂಡೈ ಕಂಪನಿ ತಯಾರಿಸುತ್ತಿರುವ ಹ್ಯಾಚ್ಬ್ಯಾಕ್‌ಗಳಲ್ಲಿ ಹ್ಯುಂಡೈ ಗ್ರ್ಯಾಂಡ್‌ i10 ಅತ್ಯಂತ ಸಣ್ಣ ಹ್ಯಾಚ್ಬ್ಯಾಕ್‌ ಕಾರಾಗಿದೆ. ಕಾರು ಕೊಳ್ಳುವಾಗ ಸುಮಾರು 38000 ರೂಗಳ ವರೆಗೆ ರಿಯಾಯಿತಿ ಸಿಗುತ್ತಿದೆ. ಇದರಲ್ಲಿ ಸುಮಾರು 25000 ರೂಪಾಯಿಗಳು ಕ್ಯಾಶ್‌ ಡಿಸ್ಕೌಂಟ್‌ ಆಗಿಯೂ 10000 ರೂ ಎಕ್ಸ್‌ಚೇಂಚ್‌ ಬೋನಸ್‌ ರೀತಿಯಲ್ಲಿ ಸಿಗುತ್ತದೆ.

Hyundai Offers Upto 1 Lakh Discounts On Its Cars

ಹ್ಯುಂಡೈ i20 & i20 N Line: ಹ್ಯುಂಡೈ ಕಂಪನಿಯು ಹ್ಯುಂಡೈ i20 & i20 N Line ಎರಡೂ ಮಾಡೆಲ್‌ಗಳಿಗೂ ಒಂದೇ ರೀತಿ ಆಫರ್‌ ಅನ್ನು ನೀಡುತ್ತಿದೆ. 10 ಸಾವಿರ ರೂ ಕ್ಯಾಶ್‌ ಆಗಿಯೂ, ಮತ್ತೊಂದು 10 ಸಾವಿರ ರೂ ಕಾರ್ಫೋರೇಟ್‌ ಡಿಸ್ಕೌಂಟ್‌ ರೀತಿಯಲ್ಲಿ ಕಾರುಗಳಿಗೆ ದೊರಕುತ್ತಿದೆ.

ಹ್ಯುಂಡೈ ಔರಾ: ಹ್ಯುಂಡೈ ಔರಾ ಕಾರನ್ನು ಕೊಳ್ಳುವವರು ಸುಮಾರು 33 ಸಾವಿರ ರೂಗಳ ವರೆಗೆ ಉಳಿತಾಯ ಮಾಡಿಕೊಳ್ಳಬಹುದಾಗಿದೆ. ಹ್ಯುಂಡೈಯು ಕಾರಿನ ಪೆಟ್ರೋಲ್‌ ಮತ್ತು ಸಿಎನ್‌ಜಿ, ಎರಡೂ ವೇರಿಯೆಂಟ್‌ಗಳಿಗೂ ಕ್ಯಾಶ್‌, ಎಕ್ಸ್‌ಚೇಂಜ್‌ ಮಾದರಿಯಲ್ಲಿ ಭರ್ಜರಿ ಆಫರ್‌ ನಿಡುತ್ತಿರುವುದು ಕಾರು ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.

ಹ್ಯುಂಡೈ ಅಲ್‌ಕಝಾರ್‌: ಹ್ಯುಂಡೈನ ಹ್ಯುಂಡೈ ಅಲ್‌ಕಝಾರ್ ಕಾರಿಗೆ ಕಂಪನಿಯು ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಎರಡು ವರ್ಷಗಳ ಹಿಂದೆ ಲಾಂಚ್‌ ಮಾಡಿದ್ದ ಹ್ಯುಂಡೈ ಅಲ್‌ಕಝಾರ್ ಕಾರಿಗೆ ಕಂಪನಿಯು ಈಗ ಸುಮಾರು 20000 ರೂಗಳ ಎಕ್ಸ್‌ಚೇಂಜ್‌ ಆಫರ್‌ ಅನ್ನು ಈಗ ನೀಡುತ್ತಿದೆ.

ಹ್ಯುಂಡೈ ಕೋನಾ ಇವಿ: ಹ್ಯುಂಡೈ ಕಂಪನಿಯು ಭಾರತದಲ್ಲಿ ಲಾಂಚ್‌ ಮಾಡಿದ ಮೊದಲ ಎಲೆಕ್ಟ್ರಿಕ್‌ ಕಾರಾದ ಹ್ಯುಂಡೈ ಕೋನಾ ಇವಿ ಗೆ ಸುಮಾರು ಒಂದು ಲಕ್ಷವರೆಗೆ ಕಂಪನಿಯು ಆಫರ್‌ ಅನ್ನು ಜುಲೈ ತಿಂಗಳಲ್ಲಿ ನೀಡುತ್ತಿದೆ. ಆಫರ್‌ ಹ್ಯುಂಡೈ ಕೋನಾ ಇವಿ ಎಲ್ಲಾ ವೇರಿಯಂಟ್‌ಗಳಿಗೂ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 19, 2023, 8:31 [IST]
English summary
Hyundai offers upto 1 lakh discounts on its cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+