ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಔರಾ ಕಾರು
ಕೊರಿಯಾದ ವಾಹನ ತಯಾರಕರಾದ ಹ್ಯುಂಡೈ 2023ರ ಆಟೋ ಎಕ್ಸ್‌ಪೋದಲ್ಲಿ ತನ್ನ ಸಾರ್ವಜನಿಕ ಚೊಚ್ಚಲ ಪ್ರವೇಶದ ಮೊದಲು ಹೊಸ ಔರಾ ಫೇಸ್‌ಲಿಫ್ಟ್ ಸೆಡಾನ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಹೊಸ ಹ್ಯುಂಡೈ ಔರಾ ಕಾರು ಕೆಲವು ಕಾಸ್ಮೆಟಿಕ್ ವಿನ್ಯಾಸ ಬದಲಾವಣೆಗಳನ್ನು ಮತ್ತು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.
ಹೊಸ ಹ್ಯುಂಡೈ ಔರಾ ಫೇಸ್‌ಲಿಫ್ಟ್ ಕಾರು ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಹ್ಯುಂಡೈ ಔರಾ ಫೇಸ್‌ಲಿಫ್ಟ್ ಕಾರು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಹ್ಯುಂಡೈ ಡೀಲರ್‌ಶಿಪ್‌ಗಳಲ್ಲಿ ರೂ 11,000 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬುಕ್ ಮಾಡಬಹುದು. ಔರಾ ಫೇಸ್‌ಲಿಫ್ಟ್ ಮಾತ್ರವಲ್ಲ, ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಸಹ ಅನಾವರಣಗೊಳಿಸಿದೆ. ಇದು ಆಟೋ ಎಕ್ಸ್‌ಪೋದ 16ನೇ ಆವೃತ್ತಿಯಲ್ಲಿ ಅನಾವರಣಗೊಳ್ಳಲಿದೆ.

ಹೊಸ ಹ್ಯುಂಡೈ ಔರಾ ಫೇಸ್‌ಲಿಫ್ಟ್ ಕಾರು ಮಾದರಿಯು ಪರಿಷ್ಕೃತ ಮುಂಭಾಗದ ಫಾಸಿಕದೊಂದಿಗೆ ಬರುತ್ತದೆ, ಹೆಚ್ಚು ನೇರವಾದ ನೋಸ್ ಮತ್ತು ಎರಡು ಭಾಗಗಳ ಗ್ರಿಲ್ ಅನ್ನು ಒಳಗೊಂಡಿದೆ. ಹ್ಯುಂಡೈ ಲೋಗೋವನ್ನು ಮೇಲಿನ ಗ್ರಿಲ್‌ನಲ್ಲಿ ಇರಿಸಲಾಗಿದೆ, ಆದರೆ ಬಂಪರ್‌ನ ಕೆಳಗಿನ ಭಾಗವು ಗ್ರಿಲ್‌ನ ಎರಡನೇ ಭಾಗದಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಸಂಪೂರ್ಣ ಮುಂಭಾಗವನ್ನು ಒಳಗೊಂಡಿರುವ ಹೊಸ ಎರಡು ಭಾಗಗಳ ಗ್ರಿಲ್ ಇದು ವಿಶಾಲವಾದ ಮತ್ತು ಗಮನಾರ್ಹ ನೋಟವನ್ನು ನೀಡುತ್ತದೆ.
ಈ ಹೊಸ ಕಾರಿನ ಕೆಳಗಿನ ಬಂಪರ್ ಎರಡೂ ಬದಿಗಳಲ್ಲಿ ಇನ್ ವರ್ಟಡ್ ಎಲ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳನ್ನು ಅಳವಡಿಸಿಕೊಂಡಿದೆ. ಆದರೆ ಇದು ಫಾಗ್ ಲ್ಯಾಂಪ್ ಗಳನ್ನು ಹೊಂದಿಲ್ಲ. ಸೆಡಾನ್‌ನ ಪ್ರೊಫೈಲ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ, ಏಕೆಂದರೆ ಇದು ಅಲಾಯ್ ವ್ಹೀಲ್ ಗಳು, ORVM ಗಳನ್ನು ಸಂಯೋಜಿತ ಬ್ಲಿಂಕರ್‌ಗಳು ಮತ್ತು ಸ್ಲೋಪಿಂಗ್ ರೂಫ್‌ಲೈನ್ ಅನ್ನು ಉಳಿಸಿಕೊಂಡಿದೆ. ಹಿಂಬದಿಯ ಪ್ರೊಫೈಲ್ ಹಿಂದಿನ ಮಾದರಿಯಂತೆಯೇ ಕಾಣುತ್ತದೆ, ಏಕೆಂದರೆ ಇದು ಕ್ರೋಮ್ ಬಾರ್‌ನಿಂದ ಸಂಪರ್ಕಿಸಲಾದ ಅದೇ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ.
ಇದರೊಂದಿಗೆ ಈಗ ಬೂಟ್ ಲಿಡ್ ಸ್ಪಾಯ್ಲರ್ ಅನ್ನು ಹೊಂದಿದೆ, ಇದನ್ನು ಈ ಹಿಂದೆ ಆಕ್ಸೆಸರಿಯಾಗಿ ನೀಡಲಾಗಿತ್ತು. ಹ್ಯುಂಡೈ ಹೊಸ ಸ್ಟಾರ್ರಿ ನೈಟ್ ಕಲರ್ ಆಯ್ಕೆಯನ್ನು ಕೂಡ ಸೇರಿಸಿದೆ. ಕ್ಯಾಬಿನ್ ಒಳಗೆ, 2023ರ ಹ್ಯುಂಡೈ ಔರಾ ಫೇಸ್‌ಲಿಫ್ಟ್ ಹೊರಹೋಗುವ ಮಾದರಿಗೆ ಹೋಲುತ್ತದೆ. ಫುಟ್‌ವೆಲ್ ಪ್ರದೇಶಕ್ಕೆ ಹೊಸ ಲೈಟ್ ಮತ್ತು ಲೆದರ್ ಸುತ್ತುವ ಸ್ಟೀಯರಿಂಗ್ ವ್ಹೀಲ್ ನೊಂದಿಗೆ ಬರುತ್ತದೆ. ಇದು ಹೊಸ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳೊಂದಿಗೆ ಬರುತ್ತದೆ ಮತ್ತು ಇನ್ಸ್ ಟ್ರೂಮೆಂಟ್ ಕನ್ಸೋಲ್‌ನಲ್ಲಿ ಹೊಸ 3.5-ಇಂಚಿನ ಡಿಜಿಟಲ್ ಡಿಸ್ ಪ್ಲೇಯನ್ನು ಹೊಂದಿದೆ.
ವೈಶಿಷ್ಟ್ಯಗಳ ವಿಷಯದಲ್ಲಿ, ಸೆಡಾನ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಯೊಂದಿಗೆ ಉಳಿಸಿಕೊಂಡಿದೆ, ಇನ್ನು ಇದರ ಹಿಂಭಾಗದಲ್ಲಿ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಹೊಂದಿದೆ. ಇನ್ನು ಈ ಸೆಡಾನ್ 4 ಏರ್ ಬ್ಯಾಗ್ ಗಳೊಂದಿಗೆ ಬರುತ್ತದೆ, ABS ಮತ್ತು EBD ಸ್ಟ್ಯಾಂಡರ್ಡ್ ಆಗಿ. ಹೈಯರ್-ಸ್ಪೆಕ್ ಮಾಡೆಲ್ ಆರು ಏರ್‌ಬ್ಯಾಗ್‌ಗಳು, ESC, VSM, ಹಿಲ್ ಅಸಿಸ್ಟ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಪಡೆಯುತ್ತದೆ.
ಇದು ಸೆಂಟ್ರಲ್ ಲಾಕಿಂಗ್ ಮತ್ತು ಕೀಲೆಸ್ ಎಂಟ್ರಿ, ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು, ISOFIX ಆಂಕಾರೇಜ್‌ಗಳು ಮತ್ತು IRVM ಆಯ್ಕೆಗಳೊಂದಿಗೆ ಬರುತ್ತದೆ. ಈ ಹೊಸ ಹುಂಡೈ ಔರಾ ಸೆಡಾನ್ ಅದೇ 1.2-ಲೀಟರ್ 4-ಸಿಲಿಂಡರ್ ನ್ಯಾಚುರಲ್-ಆಸ್ಪರರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 113.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಎಎಂಟಿ ಯುನಿಟ್ ಅನ್ನು ಒಳಗೊಂಡಿವೆ.
ಇದು 1.2 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಫ್ಯಾಕ್ಟರಿ-ಅಳವಡಿಕೆಯ CNG ಕಿಟ್‌ನೊಂದಿಗೆ ಬರುತ್ತದೆ. ಈ ಪವರ್‌ಟ್ರೇನ್ 69 ಬಿಹೆಚ್‍ಪಿ ಪವರ್ ಮತ್ತು 95.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹುಂಡೈ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಔರಾ ಮತ್ತು ಗ್ರ್ಯಾಂಡ್ i10 ನಿಯೋಸ್‌ನ ಲೈನ್-ಅಪ್‌ನಿಂದ ತೆಗೆದುಹಾಕಿದೆ. ಇದಲ್ಲದೆ, ಇದು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುವುದಿಲ್ಲ.


Click it and Unblock the Notifications