ಹೆಚ್ಚಿನ ರೇಂಜ್, ಆಕರ್ಷಕ ಫೀಚರ್ಸ್‌ಗಳೊಂದಿಗೆ ಬರಲಿದೆ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು

ಜಾಗತಿಕವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ವೇಳೆ ಹ್ಯುಂಡೈ ಮತ್ತು ಕಿಯಾ ಎಲೆಕ್ಟ್ರಿಕ್ ಕಾರುಗಳಿಗೆ ಸಂಬಂಧಿಸಿದಂತೆ ಅಗ್ರೇಸಿವ್ ಆಗಿ ಮುನ್ನಡೆಯುತ್ತಿದೆ. ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಈ ಎರಡು ಸಹೋದರ ಬ್ರ್ಯಾಂಡ್ ಗಳು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಭಾರೀ ವೇಗದಲ್ಲಿ ಮುನ್ನುಗುತ್ತಿದೆ.

ಟೆಸ್ಲಾ ಮತ್ತು BYD ಯಂತಹ ಬ್ರ್ಯಾಂಡ್ ಗಳಿಗೆ ಪೈಪೋಟಿಯಾಗಿ ಹ್ಯುಂಡೈ ಮತ್ತು ಕಿಯಾ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ. ಇನ್ನು ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಕೋನಾ ಎಲೆಕ್ಟ್ರಿಕ್ ಕಾರಿನ ನ್ಯೂ ಜನರೇಷನ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಕೋನಾ ಇವಿ ವಿನ್ಯಾಸವನ್ನು ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಹೊಸ ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ನ ಅಧಿಕೃತ ಬ್ಯಾಟರಿ ಸ್ಪೆಕ್ಸ್ ಮತ್ತು ರೇಂಜ್ ವಿವರಗಳನ್ನು ಬಹಿರಂಗಪಡಿಸಿದೆ.

ಆಕರ್ಷಕ ಫೀಚರ್ಸ್‌ಗಳೊಂದಿಗೆ ಬರಲಿದೆ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು

ನ್ಯೂ ಜನರೇಷನ್ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಮೂಲ ರೂಪಾಂತರವು 48.4 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಪೂರ್ಣ ಚಾರ್ಜ್‌ನಲ್ಲಿ 342 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಟಾಪ್ ರೂಪಾಂತರವು ದೊಡ್ಡದಾದ 65.4 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ ಅದು 490 ಕಿಮೀಗಳ ಡ್ರೈವ್ ರೇಂಜ್ ಅನ್ನು ನೀಡುತ್ತದೆ. ಇನ್ನು ಫಾಸ್ಟ್ ಚಾರ್ಜಿಂಗ್ ಆಯ್ಕೆ ಲಭ್ಯವಿದೆ.

ದೊಡ್ಡ ಬ್ಯಾಟರಿ ಪ್ಯಾಕ್ ಫಾಸ್ಟ್ ಚಾರ್ಜರ್ ಮೂಲಕ 10-80% ರಿಂದ ಚಾರ್ಜ್ ಮಾಡಲು ಕೇವಲ 41 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಹೊಸ ಕೋನಾದೊಂದಿಗೆ ಎರಡೂ ಬ್ಯಾಟರಿ ಪ್ಯಾಕ್ ಆಯ್ಕೆಗಳು ಮುಂಭಾಗದ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆಯುತ್ತವೆ. ಚಿಕ್ಕ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ, ಎಲೆಕ್ಟ್ರಿಕ್ ಮೋಟಾರು 154 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಿದರೆ, ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ನೀವು 214 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಎರಡೂ ರೂಪಾಂತರಗಳ ಟಾರ್ಕ್ ಔಟ್ ಪುಟ್ 255 Nm ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ 39.2 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆಯುತ್ತಿದೆ. ಇದು 452 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಮುಂದಿನ ಜನರೇಷನ್ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದರೆ, ಪ್ರಸ್ತುತ ಮಾದರಿಗಿಂತ ಹೆಚ್ಚಿನ ರೇಂಜ್ ಅನ್ನು ನೀಡುತ್ತದೆ.

ಪ್ರಸ್ತುತ ಕೋನಾದಂತೆಯೇ, ಹೊಸದು ಕೂಡ ವೆಹಿಕಲ್-ಟು-ಲೋಡ್ ಸಾಮರ್ಥ್ಯದೊಂದಿಗೆ ಬರುತ್ತದೆ. ಇದರರ್ಥ ನೀವು ಕೋನಾ ಎಲೆಕ್ಟ್ರಿಕ್ ಕಾರನ್ನು ಬಳಸಿಕೊಂಡು ಗೃಹೋಪಯೋಗಿ ಉಪಕರಣಗಳಂತಹ ಆಂತರಿಕ ಮತ್ತು ಬಾಹ್ಯ ಸಾಧನಗಳನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಈ ಹೊಸ ಹ್ಯುಂಡೈ ಕೋನಾ ಕಾರು ಆಕರ್ಷಕ ವಿನ್ಯಾಸದೊಂದಿಗೆ ಬರುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ ಪ್ಯಾರಾಮೆಟ್ರಿಕ್ ಮತ್ತು ಪಿಕ್ಸೆಲ್ ವಿನ್ಯಾಸದ ತತ್ವಗಳು ಒಂದು ಸುಂದರವಾಗಿ ಕಾಣುವ ಮುಂಭಾಗವನ್ನು ರೂಪಿಸಲು ಸಹಾಯವಾಗಿದೆ.

ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು ಹೆಡ್‌ಲೈಟ್ ಮತ್ತು ಬ್ರೇಕ್ ಲೈಟ್ ಅಂಶಗಳನ್ನು ಪ್ರತ್ಯೇಕ ಪಾಡ್‌ಗಳಲ್ಲಿ ಇರಿಸಲಾಗುತ್ತದೆ, ಈ ಎಲೆಕ್ಟ್ರಿಕ್ ಕಾರು ಎಲ್‌ಇಡಿ ಲೈಟ್ ಬಾರ್‌ಗಳನ್ನುಹೊಂದಿದೆ. ಈ ನ್ಯೂ ಜನರೇಷನ್ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು 139.7mm ಉದ್ದ ಮತ್ತು 22.86 mm ಅಗಲವಿದೆ. ಇನ್ನು ಅದರ ಅದರ ಹಿಂದಿನ ಮಾದರಿಗಿಂತ 58.42 mm ಉದ್ದದ ವೀಲ್‌ಬೇಸ್ ಹೊಂದಿದೆ.

ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರಿನ ಬದಿಗಳಲ್ಲಿನ ಚೂಪಾದ ಲೈನ್ ಗಳು ಮತ್ತು ಅಥ್ಲೆಟಿಕ್ ಆಕರ್ಷಣೆಯನ್ನು ನೀಡುತ್ತವೆ. ಅದರ ಫೆಂಡರ್‌ಗಳ ಹಿಂದೆ ವ್ಹೀಲ್ ಅರ್ಚಾರ್ ಮತ್ತು ಅಂಡರ್‌ಕಟ್‌ಗಳು ಹೊಂದಿವೆ. ಇನ್ನು ಸ್ಮಾರ್ಟ್-ಲುಕಿಂಗ್ 5-ಸ್ಪೋಕ್ ವಿನ್ಯಾಸದ ಅಲಾಯ್ ವ್ಹೀಳ್ ಗಳು ಮತ್ತು ರೂಫ್-ಲೈನ್ ವಿಲೀನಗೊಂಡಿದೆ. ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರಿನ ಒಳಭಾಗದಲ್ಲಿ, ಪ್ರಮುಖ ಆಕರ್ಷಣೆಯೆಂದರೆ ಅದರ ಡ್ಯುಯಲ್ 12.3 ಡಿಜಿಟಲ್ ಡಿಸ್ ಪ್ಲೇಗಳಾಗಿದೆ.

Article Published On: Wednesday, March 8, 2023, 13:52 [IST]
English summary
Hyundai reveals battery specs and details of new kona electrc car details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+