ಗೌರಿ ಗಣೇಶ ಹಬ್ಬ: ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ತನ್ನ ಪೋರ್ಟ್‌ಫೋಲಿಯೊದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳನ್ನು ಒಳಗೊಂಡಿವೆ. ಹ್ಯುಂಡೈ ಕ್ರೆಟಾ ಮತ್ತು ವೆನ್ಯೂ ನಂತಹ ಬ್ರ್ಯಾಂಡ್‌ನ ಪೋರ್ಟ್‌ಫೋಲಿಯೊದಲ್ಲಿನ ಹೆಚ್ಚಿನ ವಾಹನಗಳು ಹೆಚ್ಚಿನ ಕಾಯುವ ಅವಧಿಯನ್ನು ಹೊಂದಿದೆ. ಈ ನಡುವೆ ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಕಾರುಗಳ ಮೇಲೆ ಭರ್ಜರಿ ರಿಯಾಯಿಗಳನ್ನು ನೀಡಿದೆ.

ಹ್ಯುಂಡೈ (Hyundai) ಕಂಪನಿಯು 202ರ ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ಜನಪ್ರಿಯ ಕಾರುಗಲ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ಮೊದಲಿಗೆ, ಹ್ಯುಂಡೈನಿಂದ ಎಂಟ್ರಿ-ಲೆವೆಲ್ ಹ್ಯಾಚ್‌ಬ್ಯಾಕ್, Grand i10 Nios ಕಾರಿನ ಮೇಲೆ ರೂ.43,000 ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿಗಳು ರೂಪಾಂತರಗಳ ಮೇಲೆ ಅವಲಂಬಿಸಿದೆ. ಇದರಲ್ಲಿ ನಗದು ರಿಯಾಯಿತಿ ರೂ. 30,000 (CNG ಸೇರಿದಂತೆ ಮ್ಯಾನುಯಲ್ ಟ್ರಿಮ್‌ಗಳು), ಎಕ್ಸ್‌ಚೇಂಜ್ ಬೋನಸ್ ರೂ.10,000 ಜೊತೆಗೆ ರೂ.3,000 ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿವೆ.

Hyundai Discounts

ಹ್ಯುಂಡೈ ಗ್ರ್ಯಾಂಡ್ Nios ಕಾರಿನ AMT ಟ್ರಾನ್ಸ್‌ಮಿಷನ್ ಆಯ್ಕೆಯ ಮೇಲೆ ಕೇವಲ ರೂ.13,000 ರಿಯಾಯಿತಿ. ಇದರ ಸೆಡಾನ್ ಹ್ಯುಂಡೈ ಔರಾ ಮಾದರಿಗೂ ಭರ್ಜರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. CNG-ಚಾಲಿತ ಟ್ರಿಮ್‌ಗಳಿಗೆ 33,000 ರೂ. ಆಫರ್ ಇದೆ. ಎಲ್ಲಾ ಇತರ ರೂಪಾಂತರಗಳಿಗೆ ರೂ,23,000 ಗಳವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ.

ಇವುಗಳ ಜೊತೆಗೆ, ನೀವು ಹ್ಯುಂಡೈ i20 ಮತ್ತು i20 N-Line ಅನ್ನು ಖರೀದಿಸುವಾಗ ಉತ್ತಮ ಮೊತ್ತವನ್ನು ಉಳಿಸಬಹುದು. ಜನಪ್ರಿಯ ಹ್ಯುಂಡೈ i20 ಕಾರಿನ DCT ರೂಪಾಂತರಗಳು ರೂ.40,000 ವರೆಗಿನ ಅತ್ಯಧಿಕ ರಿಯಾಯಿತಿಯೊಂದಿಗೆ ಲಭ್ಯವಿದೆ. ಇನ್ನು ಹ್ಯುಂಡೈ ಕಂಪನಿಯು Sportz MT ಟ್ರಿಮ್ ಮಾದರಿಗೆ ರೂ.35,000 ರಿಯಾಯಿತಿ ವರೆಗೂ ರಿಯಾಯಿತಿಗಳನ್ನು ನೀಡಲಾಗುತ್ತದೆ. ಉಳಿದ ಎಲ್ಲಾ ರೂಪಾಂತರಗಳಿಗೆ ರೂ.20,000. ವರೆಗೆ ರಿಯಾಯಿತಿ ಲಭ್ಯವಿದೆ.

ಇನ್ನು ಹ್ಯುಂಡೈ i20 N-ಲೈನ್ ಪರ್ಫಾಮೆನ್ಸ್ ಮಾದರಿಯ ಮೇಲೆ ಭರ್ಜರಿ ರೂ.50,000 ನೇರ ನಗದು ರಿಯಾಯಿತಿಯೊಂದಿಗೆ ಲಭ್ಯವಿದೆ. ಇತ್ತೀಚಿನ ನ್ಯೂ ಜನರೇಷನ್ ವೆರ್ನಾ ಮತ್ತು ಹ್ಯುಂಡೈ ಅಲ್ಕಾಜರ್ ಮಾದರಿಗಳ ಮೇಲೆ ವಿನಿಮಯ ಆಫರ್ ಅನ್ನು ನೀಡುತ್ತದೆ. ಇದರಲ್ಲಿ ನ್ಯೂ ಜನರೇಷನ್ ವೆರ್ನಾ ಮಾದರಿಯ ಮೇಲೆ ರೂ.25,000 ಗಳವರೆಗೆ ಮತ್ತು ಹ್ಯುಂಡೈ ಅಲ್ಕಾಜರ್ ಮೇಲೆ ರೂ.20,000 ರಿಯಾಯಿತಿಗಳನ್ನು ನೀಡುತ್ತದೆ.

ಹ್ಯುಂಡೈ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಹೊರತಾಗಿ, ಹ್ಯುಂಡೈ ಅತಿ ಹೆಚ್ಚು ನಗದು ರಿಯಾಯಿತಿಯನ್ನು ಹ್ಯುಂಡೈ ಎಲೆಕ್ಟ್ರಿಕ್ ಕಾರಿನ ಮೇಲೆ ನೀಡಿದೆ. ಹ್ಯುಂಡೈ ಕೋನಾ ಕಾರಿನ ಮೇಲೆ ರೂ.2 ಲಕ್ಷ ರಿಯಾಯಿತಿಯನ್ನು ನೀಡಿದೆ. ಈ ರಿಯಾಯಿತಿಗಳು ಕೊಡುಗೆಗಳು ಹಲವಾರು ಅಂಶಗಳನ್ನು ಅವಲಂಬಿಸಿ ಬದಲಾಗಬಹುದು. ಹೆಚ್ಚಿನ ಆಫರ್ ವಿವರಗಳಿಗಾಗಿ ಅವರ ಹತ್ತಿರದ ಡೀಲರ್‌ಶಿಪ್‌ಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಿ.

ದೇಶೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯ ಕಾರುಗಳನ್ನು ಮಾರಾಟ ಮಾಡಿ, ಹ್ಯುಂಡೈ (Hyundai) ಭಾರೀ ಜನಪ್ರಿಯತೆ ಗಳಿಸಿದೆ. ಹಬ್ಬದ ಋತುವಿನ ವೇಳೆ, ಹಲವು ನವೀಕರಣಗಳನ್ನು ಪಡೆದುಕೊಂಡಿರುವ ಐ20 (i20) ಹ್ಯಾಚ್‌ಬ್ಯಾಕ್ ಬಿಡುಗಡೆಗೊಳಿಸಲು ಸಾಕಷ್ಟು ಸಿದ್ಧತೆ ನಡೆಸುತ್ತಿದೆ. ಈಗಾಗಲೇ, ದೇಶಾದ್ಯಂತ ಆಯ್ದ ಹ್ಯುಂಡೈ ಡೀಲರ್ಸ್ (Hyundai dealers) ನವೀಕರಿಸಿದ ಐ20 ಹ್ಯಾಚ್‌ಬ್ಯಾಕ್‌ಗಾಗಿ ಪ್ರಿ-ಬುಕ್ಕಿಂಗ್ ಶುರು ಮಾಡಿವೆ.

ಆಸಕ್ತ ಗ್ರಾಹಕರು, ರೂ.5,000 ದಿಂದ ರೂ.21,000. ಪಾವತಿಸಿ, ಆರ್ಡರ್ ಮಾಡಬಹುದು. ಅನೇಕ ಬಾರಿ ಈ ನೂತನ ಐ20 ಕಾರಿನ ಸ್ಪೈ ಚಿತ್ರಗಳು, ಟೀಸರ್ ವಿಡಿಯೋಗಳು ಇಂಟರ್ನೆಟ್ ನಲ್ಲಿ ಕಂಡು ಬಂದಿವೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20 ರೂ.7.46 ಲಕ್ಷದಿಂದ ರೂ.11.88 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಮ್ಯಾಗ್ನಾ, ಸ್ಪೋರ್ಟ್ಜ್ ಸೇರಿದಂತೆ ನಾಲ್ಕು ರೂಪಾಂತರಗಳು ಹಾಗೂ 2 ಡ್ಯೂಯಲ್ ಟೋನ್, 6 ಮೊನೊಟೊನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Monday, September 11, 2023, 11:49 [IST]
English summary
Hyundai september 2023 offer huge discounts details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+