ಹೊಸ ಹ್ಯುಂಡೈ ವೆರ್ನಾ ಕಾರಿನ ಒಳಭಾಗದ ಸೌಂದರ್ಯ ಬಹಿರಂಗಪಡಿಸುವ ಟೀಸರ್ ಬಿಡುಗಡೆ

ಜನಪ್ರಿಯ ಮತ್ತು ದೇಶದ ಎರಡಮೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ ತನ್ನ ಬಹುನಿರೀಕ್ಶಿತ 2023ರ ಹ್ಯುಂಡೈ ವೆರ್ನಾ ಸೆಡಾನ್ ಅನ್ನು ಮಾರ್ಚ್ 21 ರಂದು ಬಿಡುಗಡೆಗೊಳಿಸಲಿದೆ. ಇದೀಗ ಹ್ಯುಂಡೈ ಕಂಪನಿಯು ಈ ಹೊಸ ವೆರ್ನಾ ಕಾರಿನ ಮತ್ತೊಂದು ಆಕರ್ಷಕ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಹ್ಯುಂಡೈ ವೆರ್ನಾ ಕಾರಿನ ಟೀಸರ್ ವೀಡಿಯೊದಲ್ಲಿ ಇಂಟಿರಿಯರ್ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಟೀಸರ್ ನಲ್ಲಿ, ಈ ಕಾರಿನ ಸ್ಟೀರಿಂಗ್ ವೀಲ್‌ನಲ್ಲಿ ಲೇನ್ ಅಸಿಸ್ಟ್ ಬಟನ್ ಅನ್ನು ಗಮನಿಸಬಹುದು, ಲೇನ್ ಮಾಡಲಾದ ಮಾದರಿಯು ADAS (ಅಡ್ವೆನ್ಸ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಅನ್ನು ಟಾಪ್-ಸ್ಪೆಕ್ SX (O) ಟ್ರಿಮ್ ಹೊಂದಿರುತ್ತದೆ. 2023ರ ಹ್ಯುಂಡೈ ವೆರ್ನಾ ಕಾರಿನಲ್ಲಿ ಅಲಾಯ್ ವ್ಜೀಲ್ ಗಳು, ಎಲ್ಇಡಿ ಡಿಆರ್ಎಲ್ ಗಳೊಂದಿಗೆ 1.5 ಲೀಟರ್ ಟರ್ಬೊ ಬ್ಯಾಡ್ಜಿಂಗ್ನೊಂದಿಗೆ ಸಜ್ಜುಗೊಂಡಿದೆ.

ಹೊಸ ಹ್ಯುಂಡೈ ವೆರ್ನಾ ಕಾರಿನ ಟೀಸರ್ ಬಿಡುಗಡೆ

ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಕಾರಿನಲ್ಲಿ ಪ್ರಮುಖ ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿದೆ. ಸೆಡಾನ್ ಬ್ರ್ಯಾಂಡ್‌ನ ಹೊಸ ವಿನ್ಯಾಸದ ಭಾಷೆಯನ್ನು ಹೊಂದಿದೆ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಟ್ರೆಪೆಜಾಯ್ಡಲ್ ಫ್ರಂಟ್ ಗ್ರಿಲ್, ಹುಡ್‌ನಲ್ಲಿ ಸಿಗ್ನೇಚರ್ ಬ್ಯಾಡ್ಜ್ ಮತ್ತು ಮುಂಭಾಗದಲ್ಲಿ ಪೂರ್ಣ ಉದ್ದದ ಎಲ್‌ಇಡಿ ಡಿಆರ್‌ಎಲ್‌ಗಳ ಸ್ಟ್ರಿಪ್ ಗಳನ್ನು ಹೊಂದಿದೆ. ಸ್ಲೋಪಿಂಗ್ ರೂಫ್ ಲೈನ್, ಸನ್‌ರೂಫ್ ಮತ್ತು ವಿಭಿನ್ನವಾಗಿ ವಿನ್ಯಾಸಗೊಳಿಸಲಾದ ಸಿ ಪಿಲ್ಲರ್‌ಗಳನ್ನು ಹೊಂದಿವೆ.

ಇದರೊಂದಿಗೆ ಸನ್‌ರೂಫ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.ಈ ಕಾರಿನಲ್ಲಿ ಬ್ಲ್ಯಾಕ್ ಔಟ್ ಬಿ ಪಿಲ್ಲರ್‌ಗಳು ಮತ್ತು ದೊಡ್ಡ ಗ್ಲಾಸ್ ಪ್ರದೇಶವನ್ನು ಹೊಂದಿದೆ. ಈ ಕಾರಿನ ಹಿಂಭಾಗದಲ್ಲಿ ಹೊಸ ಹೈಟೆಕ್ "H-ಟೈಲ್ ಲ್ಯಾಂಪ್" ಅನ್ನು ಹೊಂದಿದ್ದು. ಅದು H ಲೋಗೋ ತರಹದ ಆಕಾರವನ್ನು ಹೊಂದಿದೆ, ಈ ಕಾರಿನಲ್ಲಿ ವಿಂಗ್ ತರಹದ ಆಕಾರವನ್ನು ರಚಿಸುತ್ತದೆ.

ಹೊಸ 2023ರ ಹ್ಯುಂಡೈ ವೆರ್ನಾ ಕಾರಿನಲ್ಲಿ 4535 ಎಂಎಂ ಉದ್ದ, 1765 ಎಂಎಂ ಅಗಲ ಮತ್ತು 1475 ಎಂಎಂ ಎತ್ತರವನ್ನು ಹೊಂದಿದೆ. ಈ ಹೊಸ ಸೆಡಾನ್ 2670 ಎಂಎಂ ವೀಲ್‌ಬೇಸ್‌ ಅನ್ನು ಹೊಂದಿದೆ. ಈ ಕಾರಿನ ವ್ಹೀಲ್ ಅರ್ಚಾರ್ ಅನ್ನು ಹೊಂದಿದೆ. ಈ 2023ರ ಹ್ಯುಂಡೈ ವೆರ್ನಾ ಮಾದರಿಯು ಹೋಂಡಾ ಸಿಟಿಗಿಂತ ವಿಶಾಲವಾಗಿದೆ ಮತ್ತು ಹೆಚ್ಚು ವಿಶಾಲವಾಗಿದೆ .ಹೊಸ ವೆರ್ನಾ ಕಾರಿನಲ್ಲಿ ಹೆಚ್ಚಿನ ಬೂಟ್ ಸ್ಪೇಸ್ ಹೊಂದಿದೆ.

ಈ ಹೊಸ ಹ್ಯುಂಡೈ ವೆರ್ನಾ ಕಾರಿನ ಪವರ್‌ಟ್ರೇನ್ ಆಯ್ಕೆಗಳ ವಿಷಯದಲ್ಲಿ, ಮುಂಬರುವ 2023ರ ಹ್ಯುಂಡೈ ವೆರ್ನಾ ಸೆಡಾನ್ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ. ಈ ಕಾರಿನ 1.5-ಲೀಟರ್, ನ್ಯಾಚುರಲ್ ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಆಗಿರುತ್ತದೆ. ಈ ಎಂಜಿನ್ 113.18 ಬಿಹೆಚ್‍ಪಿ ಪವರ್ ಮತ್ತು 143.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು CVT ಗೇರ್ ಬಾಕ್ಸ್ ನಡುವೆ ಆಯ್ಕೆ ಮಾಡಬಹುದು. ಎರಡನೇ ಎಂಜಿನ್ ಆಯ್ಕೆಯು ಹೆಚ್ಚು ಪವರ್ ಫುಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಕಾರಿನ ಹಿಂದಿನ ಟೀಸರ್ ವೀಡಿಯೊ ಎಲ್ಇಡಿ ಹೆಡ್ ಲೈಟ್ ಗಳೊಂದಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಪೂರ್ಣ ಅಗಲದ ಎಲ್ಇಡಿ ಲೈಟ್ಬಾರ್ ಅನ್ನು ಹೈಲೈಟ್ ಮಾಡಿದೆ,

ಆಶ್ಚರ್ಯಕರ ಸಂಗತಿಯೆಂದರೆ, ದಕ್ಷಿಣ ಕೊರಿಯಾದ ವಾಹನ ತಯಾರಕರು ಮುಂಬರುವ ವೆರ್ನಾ ಸೆಡಾನ್‌ನ ಹಿಂಭಾಗದ ಲೆಗ್‌ರೂಮ್ ಅನ್ನು ಹೈಲೈಟ್ ಮಾಡಿದ್ದಾರೆ. ಹ್ಯುಂಡೈ ವೆರ್ನಾ ಸೆಡಾನ್‌ನ ಹಿಂದಿನ ಮಾದರಿಗಳು ಅದರ ಹಿಂದಿನ ಸೀಟಿನ ಪ್ರಯಾಣಿಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿಲ್ಲ. ಹೊಸ ಹ್ಯುಂಡೈ ವೆರ್ನಾ ಯುವ ಖರೀದಿದಾರರನ್ನು ಆಕರ್ಷಿಸುವ ವೈಶಿಷ್ಟ್ಯಗಳು ಮತ್ತು ಪಂಚ್ ಪವರ್‌ಟ್ರೇನ್‌ಗಳಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಹೊಸ ವೆರ್ನಾ ಸೆಡಾನ್ ಅತ್ಯಂತ ವಿಶಾಲವಾದ ಹಿಂಬದಿಯ ಸೀಟಿನೊಂದಿಗೆ ಬರಲಿದೆ.

Article Published On: Monday, March 6, 2023, 16:15 [IST]
English summary
Hyundai teased for upcoming new verna sedan interior revealed details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+