Hyundai offers: ಹ್ಯುಂಡೈ ಭಾರೀ ರಿಯಾಯಿತಿ... ವರ್ಷಾಂತ್ಯದ ಆಫರ್ ಡೀಟೇಲ್ಸ್

ನೀವು ಹೊಸ ಕಾರು ಖರೀದಿಸಲು ತಯಾರಾಗಿದ್ದೀರಾ? ಹಾಗಾದ್ರೆ ನಿಮಗಿದು ಒಳ್ಳೆಯ ಸುದ್ದಿಯಾಗಿರಬಹುದು. ಹೌದು ಹ್ಯುಂಡೈ ವರ್ಷಾಂತ್ಯದ ದೊಡ್ಡ ರಿಯಾಯಿತಿ ಕೊಡುಗೆ ಲಭ್ಯವಿದೆ. ಲಕ್ಷಾಂತರ ರೂ. ರಿಯಾಯಿತಿ ಕೊಡುಗೆಗಳನ್ನು ಹ್ಯುಂಡೈ ಘೋಷಿಸಿದೆ. ಯಾವೆಲ್ಲಾ ಕಾರುಗಳು ಚಾಲ್ತಿಯಲ್ಲಿರುವ ಆಫರ್‌ಗಳಿಗೆ ಒಳಪಟ್ಟಿವೆ ಎಂದು ಇಲ್ಲಿ ನೊಡೋಣ.

ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಹ್ಯುಂಡೈ ಮೋಟಾರ್ಸ್, ಭಾರಿ ಕೊಡುಗೆಗಳನ್ನು ನೀಡುತ್ತಿದೆ. ಹಾಗಾಗಿ ನೀವು ಹೊಸ ಕಾರು ಖರೀದಿಸಲು ಬಯಸಿದರೆ, ನೀವು ಈ ಕೊಡುಗೆಗಳನ್ನು ಒಮ್ಮೆ ಪರಿಶೀಲಿಸಿ. ಹ್ಯುಂಡೈ ಕೊಡುಗೆಗಳು ಈ ತಿಂಗಳ ಅಂತ್ಯದವರೆಗೆ ಲಭ್ಯವಿರುತ್ತವೆ. ಪ್ರದೇಶ ಮತ್ತು ಡೀಲರ್‌ಶಿಪ್ ಅನ್ನು ಆಧರಿಸಿ ಕಾರು ಕೊಡುಗೆಗಳು ಬದಲಾಗಬಹುದು ಎಂಬುದನ್ನು ಗಮನಿಸಬೇಕು.

hyundai-year-end-offer-details-i20-alcazar-aura-kona-i10

ಆದ್ದರಿಂದ ನೀವು ಕಾರು ಖರೀದಿಸಲು ಬಯಸಿದರೆ ಆಫರ್‌ನ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ನೀವು ಹತ್ತಿರದ ಹುಂಡೈ ಶೋರೂಮ್‌ಗೆ ಹೋಗಬಹುದು. ಹುಂಡೈ ಟಕ್ಸನ್ ಕಾರಿನ ಮೇಲೆ ರೂ. 1.5 ಲಕ್ಷದವರೆಗೆ ನಗದು ರಿಯಾಯಿತಿ ಲಭ್ಯವಿದೆ. ಅಲ್ಲದೆ, ಹುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಮೇಲೆ ನೀವು ರೂ. 3 ಲಕ್ಷದವರೆಗೆ ನಗದು ರಿಯಾಯಿತಿಯನ್ನು ಪಡೆಯಬಹುದು.

ಹ್ಯುಂಡೈ ಔರಾ CNG ಮಾದರಿ ಮೇಲೆ ರೂ. 33 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ ನಗದು ರಿಯಾಯಿತಿ ರೂ. 20 ಸಾವಿರದವರೆಗೆ ಇದೆ. ವಿನಿಮಯ ಬೋನಸ್ ರೂ. 10 ಸಾವಿರ ಬರಲಿದೆ. ಅಲ್ಲದೆ ಕಾರ್ಪೊರೇಟ್ ರಿಯಾಯಿತಿ ರೂ. 3 ಸಾವಿರ ಇದೆ.

hyundai-year-end-offer-details-i20-alcazar-aura-kona-i10

ಹ್ಯುಂಡೈ ಕಂಪನಿಯ ಜನಪ್ರಿಯ ಗ್ರಾಂಡ್ ಐ10 ನಿಯೋಸ್ ಸಿಎನ್‌ಜಿ ಮಾದರಿ ಮೇಲೆ ರೂ. 48 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ ನಗದು ರಿಯಾಯಿತಿ ರೂ. 35 ಸಾವಿರದವರೆಗೆ, ವಿನಿಮಯ ಬೋನಸ್ ರೂ. 10 ಸಾವಿರದವರೆಗೆ ಇದೆ. ನೀವು ರೂ. 3 ಸಾವಿರ ಕಾರ್ಪೊರೇಟ್ ರಿಯಾಯಿತಿಯನ್ನು ಕೂಡ ಪಡೆಯಬಹುದು.

ಹುಂಡೈ ಅಲ್ಕಾಜರ್ ಕಾರಿನ ಮೇಲೆ ರೂ. 35 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ ನಗದು ರಿಯಾಯಿತಿ ರೂ. 15 ಸಾವಿರದವರೆಗೆ, ವಿನಿಮಯ ರಿಯಾಯಿತಿ ರೂ. 20 ಸಾವಿರದವರೆಗೂ ಇದೆ. ಹ್ಯುಂಡೈ ವೆರ್ನಾ ಮಾದರಿಯ ವಿಷಯಕ್ಕೆ ಬಂದರೆ ಈ ಕಾರಿನ ಮೇಲೆ ರೂ. 45 ಸಾವಿರದವರೆಗೆ ರಿಯಾಯಿತಿ ಪಡೆಯಬಹುದು. ಇದರಲ್ಲಿ ನಗದು ರಿಯಾಯಿತಿ ರೂ. 20 ಸಾವಿರದವರೆಗೂ ಇದೆ. ವಿನಿಮಯ ಬೋನಸ್ ರೂ. 25 ಸಾವಿರದವರೆಗೆ ಹೊಂದಬಹುದು.

hyundai-year-end-offer-details-i20-alcazar-aura-kona-i10

ಹ್ಯುಂಡೈ ಐ20 ಮಾದರಿಯ ವಿಷಯಕ್ಕೆ ಬಂದರೆ ಈ ಕಾರಿನ ಮೇಲೆ ರೂ. 40 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ ವಿನಿಮಯ ಬೋನಸ್ ರೂ. 10 ಸಾವಿರ ಬರಲಿದೆ. ನಗದು ರಿಯಾಯಿತಿ ರೂ. 30 ಸಾವಿರ ಲಭ್ಯವಿದೆ. ಹುಂಡೈ ಐ20 ಎನ್ ಲೈನ್ ಮಾದರಿಯ ಮೇಲೆ ರೂ. 50 ಸಾವಿರ ನಗದು ರಿಯಾಯಿತಿ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, December 5, 2023, 8:30 [IST]
English summary
Hyundai year end offer details i20 alcazar aura kona i10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+