ಚಲಿಸುತ್ತಿರುವ ರೈಲಿನಿಂದ ಕೈಜಾರಿ ಮೊಬೈಲ್ ಕೆಳಗೆ ಬಿದ್ದರೆ ಖಂಡಿತ ಮರಳಿ ಪಡೆಯಬಹುದು: ಹೀಗೆ ಮಾಡಿ ಸಾಕು...

ಭಾರತದಲ್ಲಿ ರೈಲ್ವೆಯು ಸಾರಿಗೆಯ ಜೀವಾಳವಾಗಿದೆ. ವಿಶ್ವದ ನಾಲ್ಕನೇ ಹಾಗೂ ಏಷ್ಯಾದ ಅತಿದೊಡ್ಡ ರೈಲ್ವೆ ಜಾಲವಾಗಿರುವ ನಮ್ಮ ಭಾರತವು ನಿಜವಾದ ವೈವಿಧ್ಯಮಯ ವ್ಯವಸ್ಥೆಯಾಗಿದೆ. ದೂರದ ಪ್ರಯಾಣಕ್ಕೂ ಜನರ ಮೊದಲ ಆದ್ಯತೆ ರೈಲುಗಳು. ಇದಕ್ಕೆ ಮುಖ್ಯ ಕಾರಣ ಕಡಿಮೆ ವೆಚ್ಚದಲ್ಲಿ ಸಾವಿರಾರು ಕಿ.ಮೀ ಪ್ರಯಾಣಿಸಬಹುದು.

ರೈಲು ಪ್ರಯಾಣದ ಸಮಯದಲ್ಲಿ ಮನರಂಜನೆಯ ಮುಖ್ಯ ರೂಪವೆಂದರೆ ಈಗ ಮೊಬೈಲ್ ವೀಕ್ಷಣೆ. ಹೀಗಿರುವಾಗ ರೈಲಿನಲ್ಲಿ ಸಮಯ ಕಳೆಯಲು ಜನರು ಮೊಬೈಲ್ ಬಳಸೋದು ಕಾಮನ್ ಆಗಿಬಿಟ್ಟಿದೆ. ಆದರೆ ಚಲಿಸುತ್ತಿರುವ ರೈಲಿನಿಂದ ನಿಮ್ಮ ಮೊಬೈಲ್ ಫೋನ್ ಕೈಜಾರಿ ಬಿದ್ದರೆ ಏನು ಮಾಡುತ್ತೀರಿ? ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಜನರು ಏನೂ ಮಾಡಲಾಗದೇ ಕುಳಿತುಬಿಡುತ್ತಾರೆ ಅಥವಾ ರೈಲಿನ ತುರ್ತು ಬ್ರೇಕ್ (ಅಲಾರ್ಮ್ ಚೈನ್) ಅನ್ನು ಎಳೆಯುವ ಬಗ್ಗೆ ಯೋಚಿಸುತ್ತಾರೆ.

ಚಲಿಸುತ್ತಿರುವ ರೈಲಿನಿಂದ ಮೊಬೈಲ್ ಕೆಳಗೆ ಬಿದ್ದರೆ ಹೀಗೆ ಮಾಡಿದ್ರೆ ಖಂಡಿತ ಮರಳಿ ಪಡೆಯಬಹುದು

ಆದರೆ ಈ ವಿಧಾನಗಳಲ್ಲಿ ಯಾವುದೂ ಸರಿಯಲ್ಲ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಮೊಬೈಲ್ ಕೆಳಗೆ ಬಿದ್ದರೆ ನೀವು ಚಿಂತಿಸಬೇಕಾಗಿಲ್ಲ. ಅದನ್ನು ಮರಳಿ ಪಡೆಯಲು ದಾರಿ ಇದೆ. ಈ ಕೆಳಗಿನವುಗಳನ್ನು ಮಾಡುವುದರಿಂದ ನಿಮ್ಮ ಕಳೆದುಹೋದ ಫೋನ್ ಅನ್ನು ಮರಳಿ ಪಡೆಯಲು ಕೆಲವೊಮ್ಮೆ ನಿಮಗೆ ಸಹಾಯ ಮಾಡಬಹುದು. ರೈಲಿನಲ್ಲಿ ಪ್ರಯಾಣಿಸುವಾಗ ಅಕಸ್ಮಾತ್ ನಿಮ್ಮ ಮೊಬೈಲ್ ಕೆಳಗೆ ಬಿದ್ದರೆ ಮೊದಲು ರೈಲ್ವೇ ಟ್ರ್ಯಾಕ್ ಬದಿಯಲ್ಲಿರುವ ಪಿಲ್ಲರ್ ಮೇಲೆ ಬರೆದಿರುವ ನಂಬರ್ ಅಥವಾ ಸೈಡ್ ಟ್ರ್ಯಾಕ್ ನಂಬರ್ ಅನ್ನು ಗಮನಿಸಬೇಕು.

ಅದರ ನಂತರ, ಈ ಮಾಹಿತಿಯನ್ನು ಸಹ-ಪ್ರಯಾಣಿಕರ ಫೋನ್ ಸಹಾಯದಿಂದ ತಕ್ಷಣವೇ RPF ಮತ್ತು 182 ಸಂಖ್ಯೆಗೆ ನೀಡಬೇಕು. ಈ ಸಮಯದಲ್ಲಿ ನಿಮ್ಮ ಫೋನ್ ಯಾವ ಕಂಬ ಅಥವಾ ಟ್ರ್ಯಾಕ್ ಸಂಖ್ಯೆಗೆ ಹತ್ತಿರದಲ್ಲಿದೆ ಎಂದು ನಿಖರವಾಗಿ ಅವರಿಗೆ ತಿಳಿಸಿ. ಈ ಮಾಹಿತಿಯನ್ನು ನೀಡಿದ ನಂತರ ರೈಲ್ವೆ ಪೊಲೀಸರು ನಿಮ್ಮ ಫೋನ್ ಅನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಈ ಕೆಲಸಗಳನ್ನು ಮಾಡುವುದರಿಂದ, ನಿಮ್ಮ ಕಳೆದುಹೋದ ಫೋನ್ ಪಡೆಯುವ ಸಾಧ್ಯತೆಗಳು ಹಲವು ಪಟ್ಟು ಹೆಚ್ಚಾಗುತ್ತದೆ.

ಚಲಿಸುತ್ತಿರುವ ರೈಲಿನಿಂದ ಮೊಬೈಲ್ ಕೆಳಗೆ ಬಿದ್ದರೆ ಹೀಗೆ ಮಾಡಿದ್ರೆ ಖಂಡಿತ ಮರಳಿ ಪಡೆಯಬಹುದು

ಏಕೆಂದರೆ ನೀವು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಫೋನ್ ಬಿದ್ದ ಸ್ಥಳಕ್ಕೆ ತಕ್ಷಣ ತಲುಪುತ್ತಾರೆ. ಇದಾದ ನಂತರ, ರೈಲ್ವೆ ಪೊಲೀಸರೊಂದಿಗೆ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರೆ ಮೊಬೈಲ್ ಅನ್ನು ಮಾಲೀಕರಿಗೆ ಹಿಂತಿರುಗಿಸಲಾಗುತ್ತದೆ. ನೀವು ಯಾವುದೇ ಸಮಯದಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಅಖಿಲ ಭಾರತ ಭದ್ರತಾ ಸಹಾಯವಾಣಿ ಸಂಖ್ಯೆ ಅಂದರೆ RPF 182 ಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದು. ಅಲ್ಲದೆ GRP ಯ ಸಹಾಯವಾಣಿ ಸಂಖ್ಯೆ 1512 ಅನ್ನು ಸಂಪರ್ಕಿಸುವ ಮೂಲಕ ಭದ್ರತೆಗಾಗಿ ವಿನಂತಿಸಬಹುದು.

ರೈಲು ಪ್ರಯಾಣಿಕರ ಸಹಾಯವಾಣಿ ಸಂಖ್ಯೆ 138. ರೈಲು ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆಯ ಎದುರಾದಲ್ಲಿ, ನೀವು ಈ ಸಂಖ್ಯೆಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದು. ಭಾರತೀಯ ರೈಲ್ವೇ ಕಾಯಿದೆ 1989 ರ ಸೆಕ್ಷನ್ 141 ರ ಪ್ರಕಾರ, ಪ್ರಯಾಣಿಕರು ಯಾವುದೇ ಕಾರಣವಿಲ್ಲದೆ ಸರಪಳಿಯನ್ನು ಎಳೆದರೆ, ರೈಲ್ವೆ ಆಡಳಿತವು ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ರೂ. 1000 ವರೆಗೆ ದಂಡ ವಿಧಿಸಬಹುದು.

ಚಲಿಸುತ್ತಿರುವ ರೈಲಿನಿಂದ ಮೊಬೈಲ್ ಕೆಳಗೆ ಬಿದ್ದರೆ ಹೀಗೆ ಮಾಡಿದ್ರೆ ಖಂಡಿತ ಮರಳಿ ಪಡೆಯಬಹುದು

ಕೆಲವು ಸಂದರ್ಭಗಳಲ್ಲಿ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ಒಟ್ಟಿಗೆ ವಿಧಿಸಬಹುದು. ಜೈಲು ಶಿಕ್ಷೆ ಅಥವಾ ಮೊದಲ ಅಪರಾಧಕ್ಕೆ ರೂ. 500 ದಂಡ ವಿಧಿಸಬಹುದು. ಆದರೆ ಈಗ ದೇಶದಲ್ಲಿ ನ್ಯಾಯಾಲಯವು 10,000 ರೂಪಾಯಿಗಳವರೆಗೆ ದಂಡ ವಿಧಿಸಿರುವ ಪ್ರಕರಣಗಳಿವೆ. ಇಂತಹ ಹಲವಾರು ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ಇದರಲ್ಲಿ ನ್ಯಾಯಾಲಯ 6,000 ದಿಂದ 10,000 ರೂ.ವರೆಗೆ ದಂಡ ವಿಧಿಸಿದೆ. ರೈಲಿನ ಸರಪಳಿಯನ್ನು ಎಳೆಯುವುದನ್ನು ಕೆಲವು ಸಂದರ್ಭಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ.

ನಾವು ಸಹ ಪ್ರಯಾಣಿಕರು ಅಥವಾ ಮಗುವನ್ನು ಕಳೆದುಕೊಂಡರೆ ಚೈನ್ ಅನ್ನು ಎಳೆದು ರೈಲನ್ನು ನಿಲ್ಲಿಸಬಹುದು ಅಥವಾ ರೈಲಿಗೆ ಬೆಂಕಿ ತಗುಲುವುದು, ವಯಸ್ಸಾದವರು ಅಥವಾ ಅಂಗವಿಕಲರು ರೈಲು ಹತ್ತವ ಸಂದರ್ಭದಲ್ಲಿ ರೈಲು ಮುಂದಕ್ಕೆ ಚಲಿಸುವ ಪರಿಸ್ಥಿತಿ ಇದ್ದರೇ ಅಥವಾ ಇದ್ದಕ್ಕಿದ್ದಂತೆ ಪ್ರಯಾಣಿಕರ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಾಗ ಮಾತ್ರ ರೈಲಿನ ತುರ್ತು ಬ್ರೇಕ್ ಅಥವಾ ಅಲಾರಾಂ ಚೈನ್ ಅನ್ನು ಎಳೆಯಬಹುದು ಎಂದು ರೈಲ್ವೇ ಇಲಾಖೆ ಹೇಳುತ್ತದೆ.

More from DriveSpark

Article Published On: Monday, March 20, 2023, 18:29 [IST]
English summary
If a mobile falls down from a moving train it can definitely be recovered
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+