ರಣಭೇಟೆಗಾರ ಜಿಮ್ನಿ ಮಾಲೀಕರಿಗೆ ಸಿಹಿಸುದ್ದಿ: ಬರೋಬ್ಬರಿ 50 bhp ಪವರ್ ಹೆಚ್ಚಿಸುವ ಕಿಟ್ ಪರಿಚಯ
ಮಾರುತಿ ಸುಜುಕಿ ಜಿಮ್ನಿ ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡು ಇದೇ ವರ್ಷ ಜೂನ್‌ನಲ್ಲಿ ಇದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಭಾರತೀಯ ಆಫ್‌ರೊಡಿಂಗ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಭಾರೀ ಸಂಚಲನವನ್ನುಂಟು ಮಾಡಿದ ಈ ಮಾರುತಿ ಸುಜುಕಿ ಜಿಮ್ನಿ ಇದೀಗ ಭಾರತೀಯರ ನೆಚ್ಚಿನ ಆಫ್‌ರೋಡಿಂಗ್ ವಾಹನವಾಗಿ ಬದಲಾಗುತ್ತಿದೆ.
ಸದ್ಯ ಭಾರತೀಯ ಆಫ್‌ರೊಡಿಂಗ್ ಲೈನ್‌ಅಪ್‌ನಲ್ಲಿರುವ ಎಸ್‌ಯುವಿಗಳಲ್ಲೇ ಈ ಜಿಮ್ನಿಯು ಹೊಸದಾಗಿದ್ದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಗುಡ್ಡ ಗಾಡು ಪ್ರದೇಶದಲ್ಲಿ ಓಡಾಡಲು ನೆರವಾಗುವಷ್ಟು ಪವರ್ ಮತ್ತು ಟಾರ್ಕ್ ಇದ್ದರೂ ಮಾಲೀಕರು ಇದರ ಕುರಿತಾಗಿ ಸಂತುಷ್ಟರಾಗಿರಲಿಲ್ಲ ಎಂಬ ಮಾತು ಆಗಾಗ ಅಲ್ಲಲ್ಲಿ ಕೇಳಿ ಬರುತ್ತಿತ್ತು.

ಆದರೆ ಭಾರತದ ಪರ್ಫಾಮೆನ್ಸ್ ಶಾಪ್ ಇದಕ್ಕೊಂದು ಪರಿಹಾರವನ್ನು ಕಂಡು ಹಿಡಿದಿದೆ. ಮಾರುತಿ ಸುಜುಕಿ ಜಿಮ್ನಿಯ (Maruti Suzuki Jimny) ಪವರನ್ನು ಹೆಚ್ಚಿಸುವ ಕಿಟ್ ಒಂದನ್ನು ಭಾರತಕ್ಕೆ ಪರಿಚಯಿಸಿದ್ದು ಇದು ಈಗಿನ ಮಾರುತಿ ಸುಜುಕಿ ಜಿಮ್ನಿ ಮಾಲೀಕರ ಮುಖದಲ್ಲಿ ಸಂತಸವನ್ನುಂಟು ಮಾಡಿದೆ. ಈ ಕುರಿತಾಗಿ ಇಂದಿನ ಲೇಖನದಲ್ಲಿ ನೋಡೋಣ.
ಕೆ ಎಸ್ ಮೋಟೋರ್ ಸ್ಪೋರ್ಟ್ಸ್ ಎಂಬ ಪರ್ಫಾಮೆನ್ಸ್ ಬಿಡಿ ಭಾಗಗಳನ್ನು ಮಾರುವ ಶಾಪ್ ಒಂದರಲ್ಲಿ ಮಾರುತಿ ಸುಜುಕಿ ಜಿಮ್ನಿಯ (Maruti Suzuki Jimny) ಪವರನ್ನು ಅಧಿಕಗೊಳಿಸುವ ಕಿಟ್ ಅನ್ನು ಮಾರಾಟ ಮಾಡುತ್ತಿದ್ದು, ಇದರ ಸಹಾಯದಿಂದ ಮಾರುತಿ ಜಿಮ್ನಿಯ ಪವರ್ ಅನ್ನು ಗಮನಾರ್ಹ ಮಟ್ಟದಲ್ಲಿ ಏರಿಸಬಹುದಾಗಿದೆ ಎಂದು ಕೆ ಎಸ್ ಮೋಟೋರ್ ಸ್ಪೋರ್ಟ್ಸ್ ಸಿಬ್ಬಂದಿಗಳು ತಿಳಿಸಿದ್ದಾರೆ.

ಮಾಹಿತಿಗಳ ಪ್ರಕಾರ ಕೆ ಎಸ್ ಮೋಟೋರ್ ಸ್ಪೋರ್ಟ್ಸ್ ಮಾರಾಟ ಮಾಡುತ್ತಿರುವ ಈ ಕಿಟ್ ನ ಸಹಾಯದಿಂದ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಕಾರಿಗೆ ಸುಮಾರು 50 bhp ವರೆಗೆ ಪವರ್‌ನ್ನು ಹೆಚ್ಚಿಸಬಹುದಾಗಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಈ ಕೆ ಎಸ್ ಮೋಟೋರ್ ಸ್ಪೋರ್ಟ್ಸ್ ಅಂಗಡಿಯು ಈ ಕುರಿತಾದ ಮಾಹಿತಿಯನ್ನು ಹೊರಹಾಕಿದೆ.
ಈ ಕಿಟ್‌ನಲ್ಲಿ ಮಾರುತಿ ಸುಜುಕಿ ಜಿಮ್ನಿಯ (Maruti Suzuki Jimny) ಪವರನ್ನು ಹೆಚ್ಚಿಸಲು ಬಳಸುವ ವಸ್ತುಗಳನ್ನು ಹೆಸರಿಸಲಾಗಿದೆ. ಸೂಪರ್ ಚಾರ್ಜರ್ ಕಿಟ್ ಎಂದು ಘೋಷಿಸಿರುವ ಈ ಕಿಟ್‌ನ ಸಹಾಯದಿಂದ ಸುಮಾರು 50 bhp ಪವರ್ ಅಧಿಕವಾಗಲಿದ್ದು, ಇದಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳು ಮತ್ತು ಅದನ್ನು ಅಳವಡಿಸಲು ಅಗತ್ಯವಿರುವ ಎಲ್ಲದೂ ಈ ಕಿಟ್‌ನಲ್ಲಿ ಸಿಗಲಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಕಿಟ್‌ನ ಸಹಾಯದಿಂದ bhp ಜೊತೆಗೆ ಸುಮಾರು 67 nm ಟಾರ್ಕ್ ಸಹ ಹೆಚ್ಚಾಗಲಿದ್ದು ಇದು ಮಾರುತಿ ಜಿಮ್ನಿಯ ಪರ್ಫಾಮೆನ್ಸ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಯಾವುದೇ ಸಂಶಯವಿಲ್ಲ. ಸದ್ಯಕ್ಕೆ ಮಾರುತಿ ಜಿಮ್ನಿಯು (Maruti Suzuki Jimny) ಸುಮಾರು 103.39bhp ಪವರನ್ನು ಉತ್ಪಾದಿಸುತ್ತಿದ್ದು ಈ ಕಿಟ್‌ನ ಸಹಾಯದಿಂದ ಅದು 153 bhpಗೆ ಏರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications