Mahindra: ಭಾರತೀಯ ಸೇನೆಗೆ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್, ಭಾರೀ ಸಂಖ್ಯೆಯಲ್ಲಿ ಆರ್ಡರ್.. ವಿಶೇಷತೆಗಳೇನು?

ದೇಶದಲ್ಲಿ ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಎಸ್‌ಯುವಿ ದಶಕಗಳಿಂದ ಖ್ಯಾತಿಗಳಿಸಿದೆ. ಭಾರತೀಯ ಸೇನೆಯು ಸ್ಕಾರ್ಪಿಯೋ ಕ್ಲಾಸಿಕ್ ಬಳಕೆಗೆ ಆಸಕ್ತಿ ತೋರಿಸಿದ್ದು, ದೊಡ್ಡ ಸಂಖ್ಯೆಯಲ್ಲಿ ಆರ್ಡರ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಆರ್ಮಿ ಉಪಯೋಗಿಸಲಿರುವ ಈ ಎಸ್‌ಯುವಿ, ಸಾಮಾನ್ಯ ಸ್ಕಾರ್ಪಿಯೋಗಿಂತ ಭಿನ್ನವಾಗಿರಲಿದೆ.

ಸೇನೆಗೆ 1,850 ಯುನಿಟ್‌ ಸ್ಕಾರ್ಪಿಯೋ ಕ್ಲಾಸಿಕ್‌ ಪೂರೈಸಲು ಆರ್ಡರ್ ಸ್ವೀಕರಿಸಲಾಗಿದೆ ಎಂದು ಮಹೀಂದ್ರಾ ಘೋಷಿಸಿದೆ. ಈ ಮೊದಲು, ಜನವರಿಯಲ್ಲಿ 1,470 ಯುನಿಟ್‌ ಸ್ಕಾರ್ಪಿಯೋ ಕ್ಲಾಸಿಕ್‌ಗಳಿಗೆ ಭಾರತೀಯ ಸೇನೆ ಆರ್ಡರ್ ನೀಡಿತ್ತು. ಈ ಎಸ್‌ಯುವಿಗಳನ್ನು ಇಂಡಿಯನ್ ಆರ್ಮಿ ತನ್ನ ವಿವಿಧ ಘಟಕಗಳಿಗೆ ನಿಯೋಜಿಸಲಿದೆ. ಮಹೀಂದ್ರಾ ಕಂಪನಿ ದೇಶದಲ್ಲಿ ನವೀಕರಿಸಿದ ಸ್ಕಾರ್ಪಿಯೋ ಕ್ಲಾಸಿಕ್‌ ಮಾತ್ರವಲ್ಲದೆ, ಹೊಸ ಸ್ಕಾರ್ಪಿಯೋ ಎನ್ ಎಸ್‌ಯುವಿಯನ್ನು ಮಾರುತ್ತಿದೆ.

Mahindra: ಭಾರತೀಯ ಸೇನೆಗೆ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್, ಭಾರೀ ಸಂಖ್ಯೆಯಲ್ಲಿ ಆರ್ಡರ್.. ವಿಶೇಷತೆಗಳೇನು?

ಈಗಾಗಲೇ, ಇಂಡಿಯನ್ ಆರ್ಮಿ ಟಾಟಾ ಸಫಾರಿ, ಕ್ಸೆನಾನ್, ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಜಿಪ್ಸಿಯನ್ನು ಸೇನಾ ವಾಹನವಾಗಿ ಬಳಕೆ ಮಾಡುತ್ತಿದ್ದು, ಈ ಸಾಲಿಗೆ ಸ್ಕಾರ್ಪಿಯೋ ಕ್ಲಾಸಿಕ್ ಸಹ ಸೇರ್ಪಡೆಗೊಳ್ಳುತ್ತಿದೆ. ಮಹೀಂದ್ರಾ ಸೇನೆಗೆ ನೀಡುತ್ತಿರುವ ಸ್ಕಾರ್ಪಿಯೋ ಕ್ಲಾಸಿಕ್, ಸಾಮಾನ್ಯ ಸ್ಕಾರ್ಪಿಯೋಗಿಂತ ಹೆಚ್ಚಿನ ಕಾರ್ಯಕ್ಷಮತೆ ಹೊಂದಿರಲಿದೆ.

ಭಾರತೀಯ ಸೇನೆ ಬಳಕೆ ಮಾಡಲಿರುವ ಸ್ಕಾರ್ಪಿಯೊ ಕ್ಲಾಸಿಕ್ ಪವರ್ ಫುಲ್ ಆಗಿರಲಿದೆ. 2.2 - ಲೀಟರ್ mHawk ಡಿಸೇಲ್ ಎಂಜಿನ್ ಪಡೆದಿರಲಿದ್ದು, 140 PS ಗರಿಷ್ಠ ಪವರ್ ಹಾಗೂ 320 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಜೊತೆಗೆ 4x4 ಡ್ರೇವಿಂಗ್ ತಂತ್ರಜ್ಞಾನವನ್ನು ಒಳಗೊಂಡಿರಲಿದೆ ಎಂದು ವರದಿಯಾಗಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಎಸ್‌ಯುವಿ, 2.2 - ಲೀಟರ್ mHawk ಡೀಸೆಲ್ ಎಂಜಿನ್ ಹೊಂದಿದ್ದು, 132 PS ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಭಾರತದಲ್ಲಿ ಮಹೀಂದ್ರಾ ಕಳೆದ ಎರಡು ದಶಕದಿಂದ ಸ್ಕಾರ್ಪಿಯೋ ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದು, ಬರೋಬ್ಬರಿ 9 ಲಕ್ಷ ಯುನಿಟ್ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ಸದ್ಯ, ಖರೀದಿಗೆ ದೊರೆಯುವ ನೂತನ ಮಹೀಂದ್ರಾ ಸ್ಕಾರ್ಪಿಯೋ ಎನ್ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಯುವುದಾದರೆ, ಈ ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ ರೂ.13.05 - ರೂ.24.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

ಈ ಸ್ಕಾರ್ಪಿಯೋ ಎನ್ ಎಸ್‌ಯುವಿ, 2.2 ಲೀಟರ್ ಡೀಸೆಲ್ ಹಾಗೂ 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿದಾರರಿಗೆ ಸಿಗುತ್ತದೆ. ಇದಿಷ್ಟೇ ಅಲ್ಲದೆ, ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆದಿದೆ.

ಸ್ಕಾರ್ಪಿಯೊ ಕ್ಲಾಸಿಕ್ ರೂ.13 ಲಕ್ಷದಿಂದ ರೂ.16.81 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗುತ್ತದೆ. ಇದೀಗ, ಈ ಎಸ್‌ಯುವಿ ಬಳಕೆಗೆ ಆಸಕ್ತಿ ತೋರಿಸಿರುವ ಭಾರತೀಯ ಸೇನೆ ಭಾರೀ ಸಂಖ್ಯೆಯಲ್ಲಿ ಆರ್ಡರ್ ಮಾಡಿದ್ದು, ಕೆಲವೇ ದಿನಗಳಲ್ಲಿ ಆರ್ಮಿ ವೆಹಿಕಲ್ ಆಗಿ ಸ್ಕಾರ್ಪಿಯೊ ಕ್ಲಾಸಿಕ್ ರಾರಾಜಿಸಲಿದೆ.

Article Published On: Thursday, July 13, 2023, 12:53 [IST]
English summary
Indian army orders mahindra scorpio classic suvs details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+