ಹೊಸ TVCಯಲ್ಲಿ ಸದ್ದು ಮಾಡುತ್ತಿದೆ ಕಿಯಾ ಸೆಲ್ಟೋಸ್ ಪೇಸ್‌ಲಿಫ್ಟ್ 2023: ವಿಡಿಯೋ ನೋಡಿ
ಭಾರತದಲ್ಲಿ ಇದೇ ತಿಂಗಳ ಅಂದರೆ ಜುಲೈ ೪ ರಂದು ಪ್ರಸಿದ್ದ ಕೊರಿಯನ್ ಕಾರು ನಿರ್ಮಾಣ ಕಂಪನಿಯಾದ ಕಿಯಾ ತನ್ನ ಸೆಲ್ಟೋಸ್ ಫೇಸ್ ಲಿಫ್ಟ್ ಅನ್ನು ಬಿಡುಗಡೆಗೊಳಿಸಿತ್ತು. ಕಳೆದ ಬಾರಿಯ ಸೆಲ್ಟೋಸ್ ಕಾರಿಗಿಂತಲೂ ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆಯಾದ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದೀಗ ಕಿಯಾ ಈ ಕಾರಿನ ಟಿವಿಸಿ ಯನ್ನು ಬಿಡುಗಡೆಗೊಳಿಸಿದೆ. ತುಂಬಾ ಆಕರ್ಷಕವಾಗಿ ಮೂಡಿ ಬಂದಿರುವ ಕಿಯಾ ಸೆಲ್ಟೋಸ್ ನ (Seltos Facelift 2023) ಈ ಟಿವಿ ಕಮರ್ಷಿಯಲ್ ನೊಡುಗರಲ್ಲಿ ಹೆಚ್ಚಿನ ಆಕರ್ಷನೆಯನ್ನು ಉಂಟು ಮಾಡುತ್ತದೆ. ಕಿಯಾ ಸದ್ಯಕ್ಕೆ ಭಾರತದಲ್ಲಿರುವ ಪ್ರಸಿದ್ದ ಮಿಡ್ ಸೈಝ್ ಎಸ್‌ಯುವಿಗಳಲ್ಲಿ ಒಂದಾಗಿದ್ದು, ಹಲವಾರು ಬದಲಾವಣೆಗಳೊಂದಿಗೆ ಬಂದಿದ್ದು ಗ್ರಾಹಕರಿಗೆ ಭರಪೂರ ಫೀಚರ್‌ಗಳನ್ನು ನೀಡುತ್ತಿದೆ.

ಈ ಹೊಸ ಟಿವಿ ಕಮರ್ಷಿಯಲ್ ಅನ್ನು ಕಿಯಾವು ತನ್ನ ಯ್ಯೂಟ್ಯೂಬ್ ಚಾನಲ್‌ನಲ್ಲಿ ಹಾಕಿದ್ದು ಇದು ಹಲವೆಡೆ ಹರಿದಾಡುತ್ತಿದೆ. ವಿಡಿಯೋವನ್ನು ಗಮನಿಸಿದರೆ ಇದು ಯಾವುದೋ ಸೈ-ಫೈ ಚಿತ್ರದ ತುಣುಕೇನೋ ಎಂದು ಭಾಸವಾಗುವಷ್ಟರ ಮಟ್ಟಿಗೆ ಕಿಯಾ ಈ ಹೊಸ ಸೆಲ್ಟೋಸ್ ಪೇಸ್‌ಲಿಫ್ಟ್ 2023 ರ ವಿಡಿಯೋವನ್ನು ನಿರ್ಮಿಸಿದೆ.
ಇನ್ನು ಹೊಸ ಸೆಲ್ಟೋಸ್ ಫೇಸ್‌ಲಿಫ್ಟ್ 2023 ರಲ್ಲಿ ಹಲವಾರು ಹೊಸ ಅವಶ್ಯಕ ಫೀಚರ್‌ಗಳು ಸೇರಿಕೊಂಡಿವೆ. ಇದರಲ್ಲಿ ಗಮನಿಸಬೇಕಾದ ಫೀಚರ್ ಎಂದರೆ ಅದು ಅಡಾಸ್. ಈ ಸೆಗ್ಮೆಂಟ್‌ನಲ್ಲಿ ಅಡಾಸ್(ADAS) ಫೀಚರ್ ಬಂದಿರುವುದು ಇದೇ ಮೊದಲೇನಲ್ಲ. ಈ ಫೆಸ್‌ಲಿಫ್ಟ್ ಕಿಯಾ ಸೆಲ್ಟೋಸ್‌ನಲ್ಲಿ ಅಡಾಸ್(ADAS) ಫೀಚರ್ ಇದೆ.
ಇದರಿಂದ ಪ್ರಯಾಣ ಇನ್ನೂ ಆರಾಮದಾಯಕವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತದಲ್ಲಿ ಈ ಫೀಚರ್ ಅಷ್ಟೊಂದು ಉಪಯೋಗಕ್ಕೆ ಬರದೇ ಇದ್ದರು, ಹೆದ್ದಾರಿಗಳಲ್ಲಿ ಉಪಯೋಗವಾಗಲಿದೆ. ಈಗಾಗಲೇ ಹೊರದೇಶಗಳಲ್ಲಿ ಈ ಫೀಚರ್ ತುಂಬಾ ಹೆಸರುವಾಸಿಯಾಗಿದ್ದು ಅಲ್ಲಿ ಟೆಸ್ಲಾ ಕಾರುಗಳಲ್ಲಿ ಈ ಫೀಚರ್ ಅನ್ನು ಹೆಚ್ಚು ಬಳಸಲಾಗುತ್ತಿದೆ.
ಇನ್ನು ಈ ಕಾರಿನಲ್ಲಿ ಇದಲ್ಲದೇ ಇನ್ನೂ ಹಲವಾರು ಫೀಚರ್‌ಗಳನ್ನು ಈ ಹೊಸ ಕಾರ್‌ನಲ್ಲಿದೆ. ಅದರಲ್ಲಿ ಪಾನೋರಾಮಿಕ್ ಸನ್‌ರೂಫ್, ಟ್ವಿನ್ ಸ್ಕ್ರೀನ್ ಕರ್ವ್ ಡಿಸ್ಪ್ಲೇ, ಅಡಾಸ್(ADAS), ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ / ಆ್ಯಂಡ್ರಾಯ್ಡ್ ಆಟೋ ಮುಂತಾದವುಗಳು ಪ್ರಮುಖವಾದವು.
ಮೇಲೆ ತಿಳಿಸಿದ ಫೀಚರ್‌ಗಳ ಆಗಮನದಿಂದ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಮತ್ತಷ್ಟು ಐಷಾರಾಮಿಯಾಗಿದೆ ಎಂಬುದು ಗ್ರಾಹಕರ ಅಭಿಪ್ರಾಯ. ಇನ್ನು ಈ ಹೊಸ ಕಾರಿನ ಬೆಲೆ ಎಷ್ಟೆಂದು ಕೆಲವೇ ದಿನಗಳಲ್ಲಿ ಹೊರಬರಲಿದ್ದು, ಇದು ಈ ಕಾರಿನ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬುದು ಹಲವರ ಲೆಕ್ಕಾಚಾರ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








