ಭಾರತವೇನು ಕಮ್ಮಿಯಲ್ಲ... ದೇಶದ ಮೊದಲ ಲ್ಯಾಂಬೋರ್ಘಿನಿ ಹುರಾಕನ್ ಸ್ಟೆರಾಟೊ ಡೆಲಿವರಿ

ಲ್ಯಾಂಬೋರ್ಘಿನಿ ಇಂಡಿಯಾವು ಭಾರತದಲ್ಲಿ ಮೊದಲ ಹುರಾಕನ್ ಸ್ಟೆರಾಟೊವನ್ನು ಡೆಲಿವರಿ ನೀಡಿದೆ. ಗರಿಷ್ಠ ಚಾಲನಾ ಆನಂದಕ್ಕಾಗಿ ವಿನ್ಯಾಸಗೊಳಿಸಲಾದ ಮೊದಲ ಸೂಪರ್ ಸ್ಪೋರ್ಟ್ಸ್ ಕಾರ್ ಸ್ಟೆರಾಟೊ ಆಗಿದ್ದು, ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೊಣ.

ಹುರಾಕನ್ ಸ್ಟೆರಾಟೊ ಹೆದ್ದಾರಿಯಿಂದ ಹಿಡಿದು ನಗರ ರಸ್ತೆಗಳವರೆಗೆ ಎಲ್ಲಾ ರಸ್ತೆಗಳಲ್ಲಿ ಪರಿಪೂರ್ಣ ನಿಯಂತ್ರಣ ಸಾಧಿಸಲು ಆಪ್ಟಿಮೈಸ್ಡ್ ಡ್ರೈವಿಂಗ್ ಡೈನಾಮಿಕ್ಸ್ ಅನ್ನು ನೀಡಲಾಗಿದೆ. Huracán EVO ನೊಂದಿಗೆ ಹೋಲಿಸಿದರೆ, ನಿರ್ದಿಷ್ಟ STRADA ಮತ್ತು ಸ್ಪೋರ್ಟ್ ಕ್ಯಾಲಿಬ್ರೇಶನ್‌ಗಳೊಂದಿಗೆ LDVI (ಲ್ಯಾಂಬೋರ್ಘಿನಿ ಇಂಟಿಗ್ರೇಟೆಡ್ ವೆಹಿಕಲ್ ಡೈನಾಮಿಕ್ಸ್) ಸಿಸ್ಟಮ್‌ನ ನವೀಕರಿಸಿದ ಆವೃತ್ತಿಯೊಂದಿಗೆ ಸ್ಟೆರಾಟೊ ಬರುತ್ತದೆ.

lamborghini-hurac-n-sterrato-1st-car-deliverd-india

ಕಡಿಮೆ-ಹಿಡಿತದ (low-grip)ಪರಿಸ್ಥಿತಿಗಳಲ್ಲೂ ನಿಯಂತ್ರಣ ಸಾಧಿಸಲು ರ್ಯಾಲಿ ಮೋಡ್ ಅನ್ನು ಮೊದಲ ಬಾರಿಗೆ Huracán ಲೈನ್‌ಗೆ ಪರಿಚಯಿಸಲಾಗಿದೆ. ಇನ್ನು ಮುಖ್ಯವಾಗಿ ಇದರ ಎಂಜಿನ್ ಬಗ್ಗೆ ಹೇಳಲೇಬೇಕು Huracán Sterrato 5.2 ಲೀಟರ್ V10 ಎಂಜಿನ್‌ನೊಂದಿಗೆ 610CV ಮತ್ತು 560Nm ಟಾರ್ಕ್ (6500 rpm ನಲ್ಲಿ) 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಮತ್ತು ಎಲೆಕ್ಟ್ರಾನಿಕ್ ಕಂಟ್ರೋಲ್ ಆಲ್-ವೀಲ್ ಡ್ರೈವ್ ಜೊತೆಗೆ ಹಿಂಭಾಗದ ಆಟೋ-ಲಾಕಿಂಗ್ ಡಿಫರೆನ್ಷಿಯಲ್‌ನೊಂದಿಗೆ ಬರುತ್ತದೆ.

ಇದು ಕೇವಲ 3.4 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಹಾಗೂ ಗಂಟೆಗೆ ಗರಿಷ್ಟ 260 ಕಿ.ಮೀ ವೇಗವನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇಂಟೀರಿಯರ್ ಬಗ್ಗೆ ಹೇಳುವುದಾದ್ರೆ, ಹುರಾಕನ್ ಲೈನ್‌ಗೆ ಅಳವಡಿಸಿಕೊಂಡಿರುವ "ಪೈಲಟ್‌ ಫೀಲ್" ತತ್ವವನ್ನು ಇದರಲ್ಲೂ ನೋಡಬಹುದು, ಕಾರಿನ ಸಂಪೂರ್ಣ ವೈಶಿಷ್ಟ್ಯಗಳನ್ನು ನಿಯಂತ್ರಣ ಮಾಡಲು ಚಾಲಕನಿಗೆ ಅತ್ಯುತ್ತಮ ಸೌಕರ್ಯವನ್ನು ಒದಗಿಸಲಾಗಿದೆ.

lamborghini-hurac-n-sterrato-1st-car-deliverd-india

ಇದು ಹ್ಯೂಮನ್ ಮೆಷಿನ್ ಇಂಟರ್ಫೇಸ್ (HMI) ಹೊಸ ಗ್ರಾಫಿಕ್ಸ್ ಮತ್ತು ವಿಶೇಷ ಚಾಲನಾ ವೈಶಿಷ್ಟ್ಯಗಳನ್ನು ಹೊಂದಿದೆ. ಮೊದಲ ಬಾರಿಗೆ, ಇನ್‌ಸ್ಟ್ರೂಮೆಂಟ್‌ಗಳು ಪಿಚ್ ಮತ್ತು ರೋಲ್ ಸೂಚಕದೊಂದಿಗೆ ಡಿಜಿಟಲ್ ಇನ್ಕ್ಲಿನೋಮೀಟರ್, ಕಂಪಾಸ್, ಭೌಗೋಳಿಕ ನಿರ್ದೇಶಾಂಕ ಸೂಚಕ (Geographic coordinate indicator) ಮತ್ತು ಸ್ಟೀರಿಂಗ್ ಕೋನ ಸೂಚಕ (Steering angle indicator)ವನ್ನು ಒಳಗೊಂಡಿದೆ.

ಡಿಸೈನ್ ಬಗ್ಗೆ ಹೇಳುವುದಾದ್ರೆ ಮೊದಲ ನೋಟದಲ್ಲೇ ಸ್ಟೆರಾಟೊದ ಸ್ಪೋರ್ಟಿ ಡಿಸೈನ್ ಎಲ್ಲರ ಕಣ್ಸೆಳೆಯುತ್ತದೆ. ಕಾರಿನ ದೇಹದ ರಕ್ಷಣೆಗಾಗಿ ಮುಂಭಾಗದ ಒಳಭಾಗದಲ್ಲಿ ಅಲ್ಯೂಮಿನಿಯಂ ರಕ್ಷಣೆ, ಬಲವರ್ಧಿತ ಸಿಲ್‌ಗಳು, ಹಿಂಭಾಗದ ಡಿಫ್ಯೂಸರ್, ಸ್ಟ್ರುಡಿ ವೀಲ್ ಆರ್ಚ್‌ಗಳು ಅದರ ಮಸ್ಕುಲರ್ ಡಿಸೈನ್ ಅನ್ನು ಸ್ಪೋರ್ಟಿಯಾಗಿಸಿವೆ. ಹಾಗೆಯೇ ಮುಂಭಾಗದ +30mm ಮತ್ತು ಹಿಂಭಾಗದ +34mm ಸಸ್ಪನ್ಷನ್ ಹೊಂದಿರುವ Huracán EVOಗೆ ಹೋಲಿಸಿದರೆ ಇದರಲ್ಲಿ ಗ್ರೌಂಡ್ ಕ್ಲಿಯರೆನ್ಸ್ 44mm ಹೆಚ್ಚಿಸಲಾಗಿದೆ.

lamborghini-hurac-n-sterrato-1st-car-deliverd-india

ಲ್ಯಾಂಬೋರ್ಗಿನಿ ಇಂಡಿಯಾದ ಮುಖ್ಯಸ್ಥ ಶರದ್ ಅಗರ್ವಾಲ್ ಮಾತನಾಡಿ, "ಡಿಸೆಂಬರ್ 2022 ರಲ್ಲಿ ಪ್ರಾರಂಭವಾದಾಗಿನಿಂದ, ಸ್ಟೆರಾಟೊ ಭಾರತದಲ್ಲಿ ಬಿರುಗಾಳಿಯನ್ನು ಹುಟ್ಟುಹಾಕಿದೆ. Huracán Sterrato ರ್ಯಾಲಿ ಕಾರನ್ನು ಚಾಲನೆ ಮಾಡಲು ಆಹ್ಲಾದಕರ ಅನುಭವವನ್ನು ನೀಡುತ್ತದೆ. ಇದರೊಂದಿಗೆ, ಹುರಾಕನ್ ಕುಟುಂಬಕ್ಕೆ ಸ್ಟೆರಾಟೊ ತರುವ ವಿಶಿಷ್ಟ ಗುಣಗಳನ್ನು ಭಾರತೀಯ ಗ್ರಾಹಕರು ಸ್ವೀಕರಿಸುವುದನ್ನು ವೀಕ್ಷಿಸಲು ನಾವು ರೋಮಾಂಚನಗೊಂಡಿದ್ದೇವೆ ಎಂದರು.

ಹೆಚ್ಚುವರಿಯಾಗಿ, ಲ್ಯಾಂಬೋರ್ಘಿನಿ ಆಡ್ ಪರ್ಸನಮ್ ಪ್ರೋಗ್ರಾಂ ಮೂಲಕ ಹೊಸ Huracán Sterrato ಕಾರಿನ ನೋಟವನ್ನು ಕಸ್ಟಮೈಸ್ ಮಾಡಲು ಬಹುತೇಕ ಆಯ್ಕೆಗಳನ್ನು ನೀಡುತ್ತದೆ. ಗ್ರಾಹಕರು 350 ಬಾಹ್ಯ ಬಣ್ಣಗಳನ್ನು ಮತ್ತು 60 ಕ್ಕೂ ಹೆಚ್ಚು ಬಣ್ಣಗಳನ್ನು ಲೆದರ್ ಮತ್ತು ಅಲ್ಕಾಂಟರಾ ಒಳಾಂಗಣಕ್ಕೆ ಆಯ್ಕೆ ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, October 20, 2023, 13:42 [IST]
English summary
Lamborghini huracan sterrato 1st car deliverd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+