ಲ್ಯಾಂಬೋರ್ಗಿನಿಯ ಈ ಕಾರಿಗೆ ಏಷ್ಟೊಂದು ಡಿಮ್ಯಾಂಡ್: 2026 ರವರೆಗೆ ರೆವುಲ್ಟೋ ಸೋಲ್ಡ್‌ಔಟ್!
ಭಾರತೀಯರ ಫೇವರೀಟ್ ಲಕ್ಷುರಿ ಕಾರುಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಲ್ಯಾಂಬೋರ್ಗಿನಿ. ವಿನ್ಯಾಸ, ಪವರ್ ಮತ್ತು ಪರ್ಫಾಮೆನ್ಸ್ ಭಾರತೀಯರು ಈ ಕಾರನ್ನು ಹೆಚ್ಚು ಇಷ್ಟ ಪಡಲು ಕಾರಣ. ಲ್ಯಾಂಬೋರ್ಗಿನಿಯ ಹಲವಾರು ಮಾಡೆಲ್‌ಗಳು ಭಾರತೀಯರಿಗೆ ಅಚ್ಚು ಮೆಚ್ಚು. ಅದರಲ್ಲಿ ಲ್ಯಾಂಬೋರ್ಗಿನಿ ಉರಸ್ ಮತ್ತು ಲ್ಯಾಂಬೋರ್ಗಿನಿ ಅವೆಂಟಡಾರ್ ಹೆಚ್ಚು ಪ್ರಸಿದ್ದಿ.
ಇದೀಗ ಈ ಸೂಪರ್ ಕಾರ್ ತಯಾರಿಕಾ ಕಂಪನಿಯು ತನ್ನ ಹೊಸ ಲ್ಯಾಂಬೋರ್ಗಿನಿ ಕಾರಿನ ಬಗ್ಗೆ ಅಪ್‌ಡೇಟ್ ಒಂದನ್ನು ಕೊಟ್ಟಿದ್ದು, ಅದೇನು ಎಂದು ಗೊತ್ತಾದರೆ ನಿಮಗೆ ಆಶ್ಚರ್ಯವಾಗುವುದಂತೂ ಖಂಡಿತ. ಲ್ಯಾಂಬೋರ್ಗಿನಿಯ ರೆವುಲ್ಟೋ ಎಂಬ ಹೊಸ ಕಾರಿನ ಬಗ್ಗೆ ಮಾಹಿತಿ ನೀಡಿದ್ದು, ಇವರ ಪ್ರಕಾರ 2026 ರವರೆಗೆ ಈ ಕಾರು ಮಾರಾಟವಾಗಿದೆ ಎಂದು ಹೇಳಿದ್ದಾರೆ.

ಹೌದು, ಲ್ಯಾಂಬೋರ್ಗಿನಿ ರೆವುಲ್ಟೋ (Lamborghini Revulto) ಕಾರಿನ ಆರ್ಡರ್ ಸುಮಾರು 2026 ರ ವರೆಗೆ ಫುಲ್ ಆಗಿದ್ದು, ಇನ್ನು ಈ ಕಾರನ್ನು ಕೊಳ್ಳಬೇಕು ಎಂದುಕೊಳ್ಳುವವರು 2026 ರವರೆಗೆ ಕಾಯಲೇ ಬೇಕು. ಈ ಸೆಗ್ಮೆಂಟ್‌ನ ಲ್ಯಾಂಬೋರ್ಗಿನಿಯ ಮೊದಲ ಪ್ಲಗ್‌ಇನ್ ಹೈಬ್ರಿಡ್ ಸೂಪರ್ ಕಾರ್ ಆಗಿದ್ದು ಇದರಲ್ಲಿ ಹೊಸ hybrid V12 ಎಂಜಿನ್ ಅನ್ನು ಹೊಂದಿದ್ದು, ಈ ಕಾರಣದಿಂದಲೇ ಲ್ಯಾಂಬೋರ್ಗಿನಿ ರೆವುಲ್ಟೋ ಕಾರಿಗೆ ಇಷ್ಟೊಂದು ಬೇಡಿಕೆ ಹೆಚ್ಚಾಗಿದ್ದು ಎಂಬುದು ಎಲ್ಲರ ಅಭಿಪ್ರಾಯ.
ಇದು ಲ್ಯಾಂಬೋರ್ಗಿನಿಯ ಫ್ಲ್ಯಾಗ್‌ಶಿಪ್ ಮಾಡೆಲ್ ಆಗಿದ್ದು, ಈ ಕಾರಿಗೆ ಎಲೆಕ್ಟ್ರಿಕ್ ಅನ್ನು ಸಹ ಸೇರಿಸಿರುವುದರಿಂದ ಈ ಕಾರಿನ ಪರ್ಫಾಮೆನ್ಸ್‌ನಲ್ಲಿ ಭಾರೀ ಬದಲಾವಣೆ ಆಗಲಿದೆ ಎಂಬ ಅಂಶವನ್ನು ನಾವು ಇಲ್ಲಿ ಗಮನಿಸಬೇಕು. ಇನ್ನು ಈ ಕಾರಿನಲ್ಲಿ ಪ್ಲಗ್ ಇನ್ ಹೈಬ್ರಿಡ್ ಕಾರ್ಯ ನಿರ್ವಹಿಸಲು ಬ್ಯಾಟರಿಯನ್ನು ಇಟ್ಟಿದ್ದು, ಇದನ್ನು ರೇರ್ ಮೋಟಾರ್ ಮೂಲಕ ಕೇವಲ ಆರು ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಬಹುದಾಗಿದೆ ಎಂದು ಮಾಹಿತಿಗಳು ತಿಳಿಸಿವೆ.

ಹೈಬ್ರಿಡೀಕರಣವನ್ನು ಈಗಾಗಲೇ ಸಾರ್ವಜನಿಕರು ಎರಡೂ ಕೈಗಳಿಂದ ಸ್ವೀಕರಿಸಿದ್ದು ನಮ್ಮ ಕಂಪನಿಯೂ ಸಹ ಅದಕ್ಕೆ ಒಗ್ಗಿಕೊಳ್ಳುತ್ತಿದೆ. ರೆವುಲ್ಟೋ ಕಾರಿಗೆ ಜನರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ನಮ್ಮೆಲ್ಲರ ನಿರೀಕ್ಷೆಯನ್ನು ಸಹ ಈ ಕಾರು ಮೀರಿದೆ ಎಂದು ಕಂಪನಿ ಮೂಲಗಳಿಂದ ತಿಳಿದು ಬಂದಿದೆ. ನಾವೀಗ 2026 ರ ವರೆಗಿನ ಆರ್ಡರ್‌ಗಳನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದೆ.
ಲ್ಯಾಂಬೋರ್ಗಿನಿಯ ಪ್ರಮುಖರಾದ ವಿಂಕಲ್‌ಮನ್ ಈ ಕುರಿತಾಗಿ ಮಾಹಿತಿ ನೀಡಿದ್ದು ಹೊಸ hybrid V12 ಎಂಜಿನ್ ಗ್ರಾಹಕರಿಸಿಗೆ ಹೊಸ ಅನುಭವ ನೀಡಲಿದೆ. ಹೊಸ ನಿಯಮಗಳಿಗೆ ಅನುಸಾರವಾಗಿ ಈ ಎಂಜಿನ್ ಅನ್ನು ವಿನ್ಯಾಸಗೊಳಿಸುವಲ್ಲಿ ಕಂಪನಿಯು ಸಾಕಷ್ಟು ಶ್ರಮ ವಹಿಸಿದ್ದು, ಅದರ ಪ್ರತಿಫಲ ಈಗ ಗ್ರಾಹಕರಿಂದ ಬಂದಿರುವ ಆರ್ಡರ್ ಬುಕಿಂಗ್‌ನಲ್ಲಿ ನಮಗೆ ಸಿಗುತ್ತಿದೆ ಎಂದು ಹೇಳಿದ್ದಾರೆ.
ಹೊಸ ಟೆಕ್ನಾಲಜಿ ಮತ್ತು ಸಾಂಪ್ರದಾಯಿಕ ವಿಧಾನದಿಂದ ಈ ಹೊಸ hybrid V12 ಎಂಜಿನ್ ಅನ್ನು ತಯಾರಿಸಲಾಗಿದ್ದು, ಇದು ಹೆಚ್ಚಿನ ಪವರ್ ಅನ್ನು ಕಾರಿಗೆ ನೀಡಲಿದೆ. ಇದರಿಂದ ಈ ಹಿಂದೆಂದೂ ಕಂಡಿರದಂತಹ ಹೊಸ ಅನುಭವವನ್ನು ಚಾಲಕರು ಈ ಲ್ಯಾಂಬೋರ್ಗಿನಿ ರೆವುಲ್ಟೋ ಕಾರನ್ನು ಓಡಿಸುವ ಮೂಲಕ ಪಡೆಯಲಿದ್ದಾರೆ ಎಂದು ಅವರು ಇದೇ ಸಂಧರ್ಭದಲ್ಲಿ ಹೇಳಿದ್ದಾರೆ.
ಮಾಹಿತಿಗಳ ಪ್ರಕಾರ ಈ ಹೊಸ hybrid V12 ಎಂಜಿನ್ ಕಳೆದ ಬಾರಿಯ ಎಂಜಿನ್‌ಗಿಂದ ಸುಮಾರು 17 ಕೆಜಿಗಳಷ್ಟು ಕಡಿಮೆ ತೂಕವಿದ್ದು ಇದರಿಂದ ಕಾರು ಹೆಚ್ಚಿನ ಪರ್ಫಾಮೆನ್ಸ್ ನಿಡುತ್ತದೆ. ಹೈಬ್ರಿಡ್ ಎಂಜಿನ್ ಹೊಸ ಎಮಿಷನ್ ನಿಯಮಗಳಿಗೆ ಒಗ್ಗಿಕೊಂಡಿರುವ ಕಾರಣದಿಂದ ಈ ಕಾರಿನಿಂದ ಇತರ ಯಾವುದೇ ರೀತಿಯ ಹಾನಿ ಪರಿಸರಕ್ಕೆ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications