ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ 130 ಬೆಲೆ ಬಹಿರಂಗ

ಲ್ಯಾಂಡ್ ರೋವರ್ ತನ್ನ ಡಿಫೆಂಡರ್ 130 ರೂಪಾಂತರವನ್ನು ಭಾರತದಲ್ಲಿ ಪರಿಚಯಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 1.31 ಕೋಟಿ ರೂ. ಇದೆ. ಈ SUV ಯ ದೀರ್ಘವಾದ ಪುನರಾವರ್ತನೆಯು HSE ಮತ್ತು X ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಎರಡು ಪವರ್‌ಟ್ರೇನ್ ಆಯ್ಕೆಗಳನ್ನು ಸಹ ಹೊಂದಿದೆ.

ಬಾನೆಟ್ ಅಡಿಯಲ್ಲಿ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ 3.0-ಲೀಟರ್, ಆರು-ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ನೀಡಲಾಗುತ್ತದೆ. P400 ನಲ್ಲಿ ಪೆಟ್ರೋಲ್ ಮೋಟಾರ್ 394bhp ಮತ್ತು 550Nm ಟಾರ್ಕ್ ಅನ್ನು ಹೊರಹಾಕುತ್ತದೆ. ಹಾಗೆಯೇ D300 ನಲ್ಲಿರುವ ಡೀಸೆಲ್ ಆವೃತ್ತಿಯು 296bhp ಮತ್ತು 600Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ರೂಪಾಂತರಗಳು ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಮತ್ತು ಆಲ್-ವೀಲ್-ಡ್ರೈವ್ ಅನ್ನು ಶ್ರೇಣಿಯಾದ್ಯಂತ ಪ್ರಮಾಣಿತವಾಗಿ ಪಡೆಯುತ್ತವೆ.

ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ 130 ಬೆಲೆ ಬಹಿರಂಗ

ಇದರ 110 ಮಾದರಿಗಳಿಗೆ ಹೋಲಿಸಿದರೆ, ಡಿಫೆಂಡರ್ 130 ಹೆಚ್ಚಾಗಿ ಬದಲಾಗಿಲ್ಲ, ಕೇವಲ 340 ಮಿ.ಮೀ ಹೆಚ್ಚಾಗಿದೆ. ವೀಲ್‌ಬೇಸ್ ಮಾತ್ರ ಹಾಗೇ ಇದೆ. ಮೂರನೇ ಸಾಲಿನ ಪ್ರಯಾಣಿಕರಿಗೆ ಸರಿಹೊಂದಿಸಲು ಎಲ್ಲಾ ಹೆಚ್ಚುವರಿ ಸ್ಥಳವು ಹಿಂಭಾಗದಲ್ಲಿ ಕೇಂದ್ರೀಕೃತವಾಗಿದೆ ಎಂದು ಹೇಳಬಹುದು. ಕೆಲವು ಗಮನಾರ್ಹ ವೈಶಿಷ್ಟ್ಯಗಳಲ್ಲಿ ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳು, ಫಾಗ್ ಟೈಲ್ ಲೈಟ್‌ಗಳು, 20 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು ಮತ್ತು ಪೂರ್ಣ-ಗಾತ್ರದ ಬಿಡಿ ಚಕ್ರಗಳು ಸೇರಿವೆ.

2023 ಲ್ಯಾಂಡ್ ರೋವರ್ ಡಿಫೆಂಡರ್ 130 ನ ಒಳಭಾಗವು ಪನಾರಮಿಕ್ ಸನ್‌ರೂಫ್, ಕೀಲೆಸ್ ಎಂಟ್ರಿ, 11.4-ಇಂಚಿನ ಪಿವಿ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಮತ್ತು ಎಚ್‌ಯುಡಿಯೊಂದಿಗೆ ಸಜ್ಜುಗೊಂಡಿದೆ. ಇದು ಸರೌಂಡ್-ವ್ಯೂ ಕ್ಯಾಮೆರಾ, ಮೆರಿಡಿಯನ್ ಮೂಲದ ಮ್ಯೂಸಿಕ್ ಸಿಸ್ಟಮ್, 4 ಝೋನ್ ಕ್ಲೈಮೆಟ್ ಕಂಟ್ರೋಲ್, ಆರ್ಮ್‌ರೆಸ್ಟ್‌ನೊಂದಿಗೆ ಸೆಂಟರ್ ಕನ್ಸೋಲ್ ಮತ್ತು ಮೆಮೊರಿ, 14-ವೇ ಎಲೆಕ್ಟ್ರಿಕಲಿ ಅಡ್ಜಸ್ಬಬಲ್ ಫ್ರಂಟ್ ಸೀಟ್‌ಗಳನ್ನು ಪಡೆದಿದೆ.

ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ 130 ಬೆಲೆ ಬಹಿರಂಗ

ಡಿಫೆಂಡರ್‌ನ ದೊಡ್ಡ ಮಾದರಿಯು ಎಂಟು ಪ್ರಯಾಣಿಕರಿಗೆ ಆಸನಗಳನ್ನು ಹೊಂದಿದೆ, ಮೊದಲ ಸಾಲಿನಲ್ಲಿ ಇಬ್ಬರು, ಎರಡನೇ ಸಾಲಿನಲ್ಲಿ ಇಬ್ಬರು ಮತ್ತು ಮೂರನೇ ಸಾಲಿನಲ್ಲಿ ಮೂವರು ಕುಳಿತು ಪ್ರಯಾಣಿಸಬಹುದು. ಎರಡು ಮತ್ತು ಮೂರನೇ ಸಾಲುಗಳನ್ನು ಮಡಚಿದರೆ 2,291 ಲೀಟರ್ ಲಗೇಜ್ ಜಾಗವನ್ನು ಕಾಣಬಹುದು. ವೇರಿಯಂಟ್-ವಾರು ಬೆಲೆಗೆ ಸಂಬಂಧಿಸಿದಂತೆ, ಹೊಸ ಡಿಫೆಂಡರ್ 130 ಪೆಟ್ರೋಲ್ ಹೆಚ್‌ಎಸ್‌ಇ ರೂಪಾಂತರವು 1.30 ಕೋಟಿ ರೂ. ಮತ್ತು ಡಿಫೆಂಡರ್ 130 ಪೆಟ್ರೋಲ್ ಎಕ್ಸ್ ಮಾದರಿಯು 1.41 ಕೋಟಿ ರೂ. ಬೆಲೆಯನ್ನು ಹೊಂದಿವೆ.

ಎಲ್ಲಾ ಇಂಜಿನ್‌ಗಳು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಸಂಯೋಜಿತವಾಗಿದ್ದು, ಇಂಟಿಗ್ರೇಟೆಡ್ ಸ್ಟಾರ್ಟ್ ಜನರೇಟರ್‌ನೊಂದಿಗೆ ಪ್ರಮಾಣಿತವಾಗಿ ಬರುತ್ತವೆ. ಪ್ರಸ್ತುತ, ಲ್ಯಾಂಡ್ ರೋವರ್ ಮಾದರಿಗಳು ಐಷಾರಾಮಿ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಹೊಂದಿವೆ. ಈ ವಾಹನಕ್ಕೆ ಸಿನಿಮಾ ತಾರೆಯರು ಸೇರಿದಂತೆ ಸೆಲೆಬ್ರಿಟಿಗಳದ್ದೇ ಪ್ರಮುಖ ಬೇಡಿಕೆ ಹೆಚ್ಚು. ಈ ದೈತ್ಯ ಕಾರಿನ ಅತ್ಯುತ್ತಮ ಸುರಕ್ಷತೆ ಮತ್ತು ಯಾವುದೇ ಜಾಗಕ್ಕೂ ಸಲೀಸಾಗಿ ನುಗ್ಗುವ ಇದರ ಸಾಮರ್ಥ್ಯವು ಇದನ್ನು ಜನಪ್ರಿಯಗೊಳಿಸಿದೆ.

ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ 130 ಬೆಲೆ ಬಹಿರಂಗ

ವಿಶ್ವವಿಖ್ಯಾತ ಲ್ಯಾಂಡ್ ರೋವರ್ ಈಗ ನಮ್ಮದೇ ಆದ ಟಾಟಾ ಮೋಟಾರ್ಸ್ ಒಡೆತನದಲ್ಲಿದೆ ಎಂದು ತಿಳಿದರೆ ಕೆಲವರು ಶಾಕ್ ಆಗಬಹುದು, ಇತ್ತೀಚೆಗೆ ಭಾರತದಲ್ಲಿ ರೇಂಜ್ ರೋವರ್ ಎಸ್‌ಯುವಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ ಕಂಪನಿಯು ಇದೀಗ ಡಿಫೆಂಡರ್ 130 ವೆರಿಯಂಟ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದೆ. ಐಷಾರಾಮಿ ಕಾರುಗಳನ್ನು ಬಯಸುವವರಿಗೆ ಇದೊಂದು ಶುಭ ಸುದ್ದಿಯೆಂದು ಹೇಳಬಹುದು. 1.30 ಕೋಟಿ ರೂ. ಎಕ್ಸ್ ಶೋರೂಂ ಬೆಲೆಯಲ್ಲಿ ಈ ದೈತ್ಯವನ್ನು ಮನೆಗೆ ತರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, February 28, 2023, 8:30 [IST]
English summary
Land rover defender 130 price revealed in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+