ಭಾರತದ ಬಳಿಕ ಇಂಡೋನೇಷ್ಯಾದಲ್ಲೂ ಹವಾ ಸೃಷ್ಟಿಸಲು ರೆಡಿಯಾದ ಗ್ರ್ಯಾಂಡ್ ವಿಟಾರಾ
ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು 2022ರ ಕೊನೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ಈ ಹೊಸ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಹಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಫ್ತು ಮಾಡಲು ಯೋಜಿಸುತ್ತಿದೆ.
ಕಂಪನಿಯು ಇತ್ತೀಚೆಗೆ ಕಾಮರಾಜರ್ ಬಂದರಿನಿಂದ ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಗಳಿಗೆ ಭಾರತದಲ್ಲಿ ತಯಾರಿಸಿದ ಗ್ರ್ಯಾಂಡ್ ವಿಟಾರಾವನ್ನು ರಫ್ತು ಮಾಡಿದೆ. ಇದೀಗ ಹೊಸ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಸುಜುಕಿ ಇಂಡೋನೇಷ್ಯಾ ಹೊಸ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಟೀಸರ್ ನಲ್ಲಿ ಈ ಹೊಸ ಎಸ್‍ಯುವಿಯನ್ನು ಫೆಬ್ರವರಿ 16 ರಂದು ಬಿಡುಗಡೆಗೊಳಿಸಲಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ.

ಸುಜುಕಿ-ಟೊಯೋಟಾ ಪಾಲುದಾರಿಕೆಯ ಭಾಗವಾಗಿ, ಹೊಸ ಸುಜುಕಿ ಗ್ರ್ಯಾಂಡ್ ವಿಟಾರಾವನ್ನು ಟೊಯೊಟಾದ ಬಿಡದಿ ಆಧಾರಿತ ಸ್ಥಾವರದಲ್ಲಿ ತಯಾರಿಸಲಾಗುತ್ತದೆ. ಮಧ್ಯಪ್ರಾಚ್ಯ ಮಾರುಕಟ್ಟೆಗಳು, ಆಸಿಯಾನ್ ಮಾರುಕಟ್ಟೆಗಳು, ಲ್ಯಾಟಿನ್ ಅಮೇರಿಕಾ, ಆಫ್ರಿಕಾ ಮತ್ತು ಇತರವುಗಳನ್ನು ಒಳಗೊಂಡಂತೆ 60 ಕ್ಕೂ ಹೆಚ್ಚು ದೇಶಗಳಿಗೆ ಹೊಸ ಮಧ್ಯಮ ಗಾತ್ರದ ಎಸ್‌ಯುವಿಯನ್ನು ರಫ್ತು ಮಾಡಲು ಯೋಜಿಸಿದೆ ಎಂದು ಮಾರುತಿ ಸುಜುಕಿ ಈಗಾಗಲೇ ದೃಢಪಡಿಸಿದೆ. ಇನ್ನು ಇಂಡೋನೇಷ್ಯಾ-ಸ್ಪೆಕ್ ಮಾಡೆಲ್ ಭಾರತ-ಸ್ಪೆಕ್ ಮಾಡೆಲ್‌ಗೆ ಹೆಚ್ಚಾಗಿ ಹೋಲುತ್ತದೆ.
ರಫ್ತು ಮಾದರಿಯು ಸಣ್ಣ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯು 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು 1.5-ಲೀಟರ್ TNGA ಪೆಟ್ರೋಲ್ ಮೋಟರ್ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದೆ. ಇದರಲ್ಲಿ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ 102 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಯುನಿಟ್ ಅನ್ನು ನೀಡಿದೆ. ಇನ್ನು ಈ ಎಸ್‍ಯುವಿಯ ಎಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ರೂಪಾಂತರಗಳೊಂದಿಗೆ ಮಾತ್ರ ನೀಡಲಾಗುತ್ತದೆ. ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಮ್ ಎಂದೂ ಕರೆಯಲ್ಪಡುವ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಐಸಿಇ ಯುನಿಟ್ ಮೂಲಕ ಸಂಯೋಜಿತವಾಗಿ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದನ್ನು ಇ-ಸಿವಿಟಿ ಯೊಂದಿಗೆ ಮಾತ್ರ ಜೋಡಿಸಲಾಗಿದೆ. ಈ ಪವರ್‌ಟ್ರೇನ್‌ಗಾಗಿ 27.97 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತದೆ.
ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಈ 5-ಸೀಟರ್ ಎಸ್‍ಯುವಿಯು 45-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಹೈರೈಡರ್‌ನೊಂದಿಗೆ ಕೆಲವು ಬಾಹ್ಯ ವಿಶೇಷಣಗಳನ್ನು ಹಂಚಿಕೊಂಡದೆ. ಹೈರೈಡರ್‌ನಿಂದ ಗ್ರಾಂಡ್ ವಿಟಾರಾ ದೊಡ್ಡ ವ್ಯತ್ಯಾಸವೆಂದರೆ ಅದರ ಮುಂಭಾಗದ ವಿನ್ಯಾಸ. ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸುಜುಕಿ ಎಸ್-ಕ್ರಾಸ್ ಮಾದರಿಗೆ ಹೋಲುತ್ತಿದೆ.
ಈ ಎಸ್‍ಯುವಿಯ ಸೈಡ್ ಬಾಡಿ ಪ್ಯಾನೆಲ್‌ಗಳು, ಟೈಲ್‌ಗೇಟ್ ಮತ್ತು ಇಂಟಿಗ್ರೇಟೆಡ್ ಟೈಲ್ ಲ್ಯಾಂಪ್‌ಗಳೊಂದಿಗೆ ಹಿಂಭಾಗದ ಬಂಪರ್ ಕೂಡ ಹೈರೈಡರ್‌ಗೆ ಹೋಲುತ್ತವೆ. ಈ ಎಸ್‍ಯುವಿಯ ಸಿ-ಪಿಲ್ಲರ್‌ನಲ್ಲಿ ಕ್ರೋಮ್ ಅಪ್ಲಿಕ್, ಅಲಾಯ್ ವ್ಹೀಲ್ ನೊಂದಿಗೆ ವಿಭಿನ್ನ ವಿನ್ಯಾಸ ಮತ್ತು ಟೈಲ್‌ಗೇಟ್‌ನಲ್ಲಿ ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಕೂಡ ವಿಶಿಷ್ಟವಾಗಿದೆ, ಈ ಹೊಸ ಮಾದರಿಯ ಸೈಡ್ ಬಾಡಿ ಪ್ಯಾನೆಲ್‌ಗಳು, ಟೈಲ್‌ಗೇಟ್ ಮತ್ತು ಇಂಟಿಗ್ರೇಟೆಡ್ ಟೈಲ್ ಲ್ಯಾಂಪ್‌ಗಳೊಂದಿಗೆ ಹಿಂಭಾಗದ ಬಂಪರ್ ಕೂಡ ಹೈರೈಡರ್‌ಗೆ ಹೋಲುತ್ತವೆ.
ಈ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ಸಿ-ಪಿಲ್ಲರ್‌ನಲ್ಲಿ ಕ್ರೋಮ್ ಅಪ್ಲಿಕ್, ಅಲಾಯ್ ವ್ಹೀಲ್ ನೊಂದಿಗೆ ವಿಭಿನ್ನ ವಿನ್ಯಾಸ ಮತ್ತು ಟೈಲ್‌ಗೇಟ್‌ನಲ್ಲಿ ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಕೂಡ ವಿಶಿಷ್ಟವಾಗಿದೆ. ಇದೇ ವಿನ್ಯಾಸ ಶೈಲಿಯನ್ನು ಇಂಡೋನೇಷಿಯನ್ ಮಾದರಿಯು ಹೊಂದಿರುತ್ತದೆ. ಈ ಎಸ್‍ಯುವಿಯ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ಟಾಪ್-ಸ್ಪೆಕ್ ರೂಪಾಂತರಗಳು ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್, ಆಂಬಿಯೆಂಟ್ ಲೈಟಿಂಗ್, ಕನೆಕ್ಟ್ ಕಾರ್ ಟೆಕ್, ಇಎಸ್‌ಪಿ ಮತ್ತು ಹಿಲ್-ಹೋಲ್ಡ್ ಅಸಿಸ್ಟ್, ಅನ್ನು ಹೊಂದಿವೆ.


Click it and Unblock the Notifications