Maruti Jimny: ಭಾರತದ ಮಣ್ಣಿನಲ್ಲಿ ತಯಾರಾಗುವ ಮಾರುತಿ ಸುಜುಕಿ ಜಿಮ್ನಿ ವಿದೇಶದಲ್ಲಿ ಬಿಡುಗಡೆ: ವಿಶೇಷತೆಗಳೇನು?

ದೇಶದ ಯುವಕರನ್ನು ನಿಮ್ಮ ಮೆಚ್ಚಿನ ಆಫ್-ರೋಡ್ ಎಸ್‌ಯುವಿ ಯಾವುದೆಂದು ಕೇಳಿದರೆ ತಕ್ಷಣ ಬರುವ ಒಂದೇ ಉತ್ತರ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಎಂದು. ಅಷ್ಟರಮಟ್ಟಿಗೆ ಜನಪ್ರಿಯತೆ ಗಳಿಸಿದೆ. ಇದೀಗ, ವಿದೇಶಿ ಮಾರುಕಟ್ಟೆಗೂ ಅದ್ದೂರಿಯಾಗಿ ಪ್ರವೇಶಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮಾರುತಿ ಸುಜುಕಿ (Maruti Suzuki) ಭಾರತದ ಬಳಿಕ ಜಿಮ್ನಿ (Jimny) ಎಸ್‌ಯುವಿಯನ್ನು ಆಸ್ಟ್ರೇಲಿಯಾ (Australia)ದಲ್ಲಿ ಬಿಡುಗಡೆಗೊಳಿಸಿದೆ. ಅಲ್ಲಿ ಜಿಮ್ನಿ 5 - ಡೋರ್ ಎಕ್ಸ್‌ಎಲ್ (XL) ರೂಪಾಂತರ ಮಾರಾಟವಾಗಲಿದ್ದು, ಎಯುಡಿ 34,990 (ಸುಮಾರು ರೂ.18.60 ಲಕ್ಷ)ಕ್ಕೆ ಲಾಂಚ್ ಆಗಿದೆ. ವಿಶೇಷವಾಗಿ, ಇವುಗಳನ್ನು ಭಾರತದಲ್ಲಿ ತಯಾರಿಸಿ, ರಫ್ತು ಮಾಡಲಾಗುತ್ತದೆ.

Maruti Jimny: ಭಾರತದ ಮಣ್ಣಿನಲ್ಲಿ ತಯಾರಾಗುವ ಮಾರುತಿ ಸುಜುಕಿ ಜಿಮ್ನಿ ವಿದೇಶದಲ್ಲಿ ಬಿಡುಗಡೆ: ವಿಶೇಷತೆಗಳೇನು?

ಈ 5 - ಡೋರ್ ಜಿಮ್ನಿ ಎಸ್‌ಯುವಿ, ಕಳೆದ ಜೂನ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ರೂ.12.74 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಯಾಗಿತ್ತು. ಇದೇ ತಿಂಗಳು ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಮಾರುತಿ ಸುಜುಕಿ, ಜಿಮ್ನಿ ಥಂಡರ್ ಎಡಿಷನ್ (Jimny Thunder Edition) ಲಾಂಚ್ ಮಾಡಿದೆ. ಇದು ರೂ.10.74 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯುತ್ತದೆ.

ಮಾರುತಿ ಸುಜುಕಿಗೆ ಭಾರತದ ನಂತರ ದಕ್ಷಿಣ ಆಫ್ರಿಕಾ (South Africa) ಹಾಗೂ ಆಸ್ಟ್ರೇಲಿಯಾ (Australia) ಪ್ರಮುಖ ಮಾರುಕಟ್ಟೆಯಾಗಿವೆ. ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಮಾರಾಟವಾಗುವ ಜಿಮ್ನಿ ಎಸ್‌ಯುವಿಗಳ ನಡುವಿನ ದೊಡ್ಡ ವ್ಯತ್ಯಾಸವೆಂದರೆ, ಇದು ಹೆಚ್ಚುವರಿಯಾಗಿ ADAS (ಅಡ್ವಾನ್ಸ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಂ) ವೈಶಿಷ್ಟ್ಯವನ್ನು ಹೊಂದಿದೆ.

ಈ ADAS ಫೀಚರ್ ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಂಟಿ ಕೊಲಿಶನ್ ವಾರ್ನಿಂಗ್ ಮತ್ತು ಡ್ಯುಯಲ್ ಕ್ಯಾಮೆರಾ ಬ್ರೇಕ್ ಸಪೋರ್ಟ್ ನಂತಹ ಅಂಶಗಳನ್ನು ಹೊಂದಿದೆ. ಜೊತೆಗೆ ಕೈನೆಟಿಕ್ ಯೆಲ್ಲೋ ಸೇರಿದಂತೆ 7 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ಹೆಚ್ಚು - ಕಮ್ಮಿ ಭಾರತದಲ್ಲಿ ಬಿಡುಗಡೆಯಾದ ಜಿಮ್ನಿಯಂತೆಯೇ ಫೀಚರ್ಸ್ ಹೊಂದಿದೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾದಲ್ಲಿ ಮಾರಾಟವಾಗಲಿರುವ ಜಿಮ್ನಿ, 1.5 - ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 100 bhp ಗರಿಷ್ಠ ಪವರ್ ಹಾಗೂ 130 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 5 ಸ್ವೀಡ್ ಮ್ಯಾನುವಲ್, 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ದೊರೆಯುವ ಮಾರುತಿ ಸುಜುಕಿ ಜಿಮ್ನಿ ಝಿಟಾ, ಆಲ್ಪಾ ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಅಲಾಯ್ ವೀಲ್ಸ್ ಅನ್ನು ಪಡೆದಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ದೊರೆಯುತ್ತದೆ.

ಈ ಜಿಮ್ನಿ, 9 - ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫರೆನ್ಷಿಯಲ್ ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, December 11, 2023, 17:59 [IST]
English summary
Made in india maruti suzuki jimny suv launched in australia with adas features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+