ಸೆಪ್ಟಂಬರ್ ತಿಂಗಳ ಮಾರಾಟದಲ್ಲಿ ದಾಖಲೆ ನಿರ್ಮಿಸಿದ ಮಹೀಂದ್ರಾ: ಗ್ರಾಹಕರ ಸೆಳೆಯುವಲ್ಲಿ ಯಶಸ್ವಿ
ಭಾರತದ ಪ್ರಮುಖ ಆಟೋಮೋಟಿವ್ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ (M&M Ltd.), ಸೆಪ್ಟೆಂಬರ್ 2023 ರಲ್ಲಿ ಬರೋಬ್ಬರಿ 75,604 ವಾಹನಗಳನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದೆ. ರಫ್ತು ಸೇರಿದಂತೆ ಶೇ 17 ರಷ್ಟು ಬೆಳವಣಿಗೆ ಕಂಡಿರುವುದಾಗಿ ಮಹೀಂದ್ರಾ ಕಂಪನಿ ಹೇಳಿಕೊಂಡಿದೆ.
ಯುಟಿಲಿಟಿ ವೆಹಿಕಲ್ಸ್ ವಿಭಾಗದಲ್ಲಿ, ಮಹೀಂದ್ರಾ ಸತತ ಮೂರನೇ ತಿಂಗಳು ಅತ್ಯಧಿಕ ಮಾರಾಟವನ್ನು ದಾಖಲಿಸಿದೆ. ಸೆಪ್ಟೆಂಬರ್‌ನಲ್ಲಿ, ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 41,267 ವಾಹನಗಳನ್ನು ಮಾರಾಟ ಮಾಡಿದೆ. ಒಟ್ಟಾರೆಯಾಗಿ, ರಫ್ತು ಸೇರಿದಂತೆ 42,260 ವಾಹನಗಳನ್ನು ಮಾರಾಟ ಮಾಡಿದ್ದು, ವಾಣಿಜ್ಯ ವಾಹನಗಳ ದೇಶೀಯ ಮಾರಾಟವು 23,997 ಯುನಿಟ್‌ಗಳಿಗೆ ಹೆಚ್ಚಾಗಿದೆ.

M&M ಲಿಮಿಟೆಡ್‌ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಮಾತನಾಡಿ, "ಸತತ ಮೂರನೇ ತಿಂಗಳಿಗೆ ನಮ್ಮ ಎಸ್‌ಯುವಿಗಳ ಅತ್ಯಧಿಕ ಮಾರಾಟವನ್ನು ಸಾಧಿಸಲು ನಾವು ಉತ್ಸುಕರಾಗಿದ್ದೇವೆ. ಈ ತಿಂಗಳು ನಾವು 41,267 ವಾಹನಗಳೊಂದಿಗೆ ಶೇ 20 ರಷ್ಟು ಬೆಳವಣಿಗೆಯನ್ನು ಕಂಡಿದ್ದೇವೆ. ನಾವು ಶೇ 17 ರಷ್ಟು ಒಟ್ಟಾರೆ ಬೆಳವಣಿಗೆಯನ್ನು ದಾಖಲಿಸಿದ್ದೇವೆ ಎಂದು ವೀಜಯ್ ನಕ್ರಾ ಹೇಳಿದರು.
ಸೆಪ್ಟೆಂಬರ್‌ನಲ್ಲಿ, ನಾವು ನಮ್ಮ ಬೊಲೆರೊ ಮ್ಯಾಕ್ಸ್ ಪಿಕ್ ಅಪ್ ಟ್ರಕ್‌ಗಳ 1 ಲಕ್ಷ ಯುನಿಟ್ ಮಾರಾಟವನ್ನು ದಾಟಿದ್ದೇವೆ. ಈ ಮೂಲಕ ದೇಶದಲ್ಲಿ ವೇಗವಾಗಿ ಮಾರಾಟವಾಗುವ ಪಿಕ್ ಅಪ್ ಟ್ರಕ್ ಎಂಬ ಹೆಗ್ಗಳಿಕೆ ಕೂಡ ಬಂದಿದೆ. ನಮ್ಮ ಪ್ರಮುಖ SUV ಬ್ರ್ಯಾಂಡ್‌ಗಳ ಬೇಡಿಕೆಯು ಪ್ರಬಲವಾಗಿ ಮುಂದುವರಿದರೂ, ನಾವು ಸೆಮಿ ಕಂಡಕ್ಟರ್‌ಗಳ ಲಭ್ಯತೆಯ ಮೇಲೆ ನಿಕಟವಾಗಿ ನಿಗಾ ಇಡುತ್ತಿದ್ದೇವೆ ಎಂದರು.

ಹೇಗಿದೆ ಹೊಸ ಬೊಲೆರೊ: ಹೊಸ Bolero MaXX Pik-up ಶ್ರೇಣಿಯು ಅತ್ಯಾಧುನಿಕ ವೈಶಿಷ್ಟ್ಯಗಳು, ಉತ್ತಮ ಶಕ್ತಿ, ಗರಿಷ್ಠ ಪೇಲೋಡ್ ಸಾಮರ್ಥ್ಯ ಮತ್ತು ಹೆಚ್ಚಿನ ಮೈಲೇಜ್ ನೀಡುತ್ತದೆ. Bolero MaXX Pik-Up ಸುಧಾರಿತ ಸಂಪರ್ಕಿತ ತಂತ್ರಜ್ಞಾನವನ್ನು ಸಹ ಹೊಂದಿದೆ. iMAXX ಟೆಲಿಮ್ಯಾಟಿಕ್ಸ್ ಪರಿಹಾರವು ಪರಿಣಾಮಕಾರಿ ವಾಹನ ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ವ್ಯಾಪಾರ ಲಾಭವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿದೆ.
ಮಹೀಂದ್ರಾ ಬ್ರಾಂಡ್ ಅನ್ನು ಮೊದಲು ಬಿಡುಗಡೆ ಮಾಡಿದಂದಿನಿಂದ ಎರಡು ಮಿಲಿಯನ್‌ಗಿಂತಲೂ ಹೆಚ್ಚು ಪಿಕ್-ಅಪ್ ಘಟಕಗಳನ್ನು ಮಾರಾಟ ಮಾಡಿದೆ. ಭಾರತಕ್ಕಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಲಾದ ಅದರ ವಾಹನಗಳ ಶ್ರೇಣಿಯು ದೇಶದ ಲಾಜಿಸ್ಟಿಕ್ಸ್ ಅಗತ್ಯಗಳಿಗೆ ಅನನ್ಯವಾಗಿ ಸೂಕ್ತವಾಗಿರುತ್ತದೆ, ಇದು ದೇಶದ ಕೊನೆಯ ಮೈಲಿ ಲಾಜಿಸ್ಟಿಕ್ಸ್ ನೆಟ್ವರ್ಕ್ನ ಬೆನ್ನೆಲುಬಾಗಿದೆಯೆಂದು ಮಹೀಂದ್ರಾ ಹೇಳಿದೆ.

ಕಳೆದ 22 ವರ್ಷಗಳಿಂದ ಪಿಕಪ್ ವಿಭಾಗದಲ್ಲಿ ಮಹೀಂದ್ರಾ ತನ್ನ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿರಂತರವಾಗಿ ಗಮನಹರಿಸಿದೆ. ಕಾರ್ಯಕ್ಷಮತೆ, ವಿಶ್ವಾಸಾರ್ಹತೆ, ಕಡಿಮೆ ನಿರ್ವಹಣೆ ಮತ್ತು ಹೆಚ್ಚಿನ ಪೇಲೋಡ್ ಸಾಮರ್ಥ್ಯದಂತಹ ವರ್ಗ-ಸಂಬಂಧಿತ ಪ್ಯಾರಾಮೀಟರ್‌ಗಳ ಮೇಲೆ ನಿರಂತರವಾಗಿ ಉದ್ಯಮ ಮಾನದಂಡಗಳನ್ನು ಹೊಂದಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
ಸದ್ಯ ಮಹೀಂದ್ರಾ ಗ್ರೂಪ್ ಅವರು ಜಾಗತಿಕವಾಗಿ ಇಎಸ್‌ಜಿಯನ್ನು ಮುನ್ನಡೆಸುವಲ್ಲಿ ಸ್ಪಷ್ಟ ಗಮನವನ್ನು ಹೊಂದಿದೆ, ಗ್ರಾಮೀಣ ಸಮೃದ್ಧಿಯನ್ನು ಸಕ್ರಿಯಗೊಳಿಸುತ್ತಾ ನಗರ ಜೀವನವನ್ನು ವರ್ಧಿಸಲು ಹೊರಟಿದೆ. ಸಮುದಾಯಗಳು ಮತ್ತು ಮಧ್ಯಸ್ಥಗಾರರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿರುವುದಾಗಿ ಮಹೀಂದ್ರಾ ಅಂಡ್ ಮಹೀಂದ್ರಾ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ.


Click it and Unblock the Notifications