Mahindra Bolero: ಜಬರ್ದಸ್ತ್ ಸಾಧನೆ ಮಾಡಿದ ಭಾರತೀಯರ ನೆಚ್ಚಿನ 'ಮಹೀಂದ್ರಾ ಬೊಲೆರೊ'

ಭಾರತದಲ್ಲಿ ಮಹೀಂದ್ರಾ ಕಂಪನಿ ಕಾರುಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಅದರಲ್ಲೂ ಬೊಲೆರೊ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದು, ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದ ಜನರೇ ಹೆಚ್ಚು ಲೈಕ್ ಮಾಡುತ್ತಾರೆ. ಸದ್ಯ, ಕಂಪನಿಯು ಬೊಲೆರೊ (Bolero) ಮಾರಾಟದಲ್ಲಿ ದೊಡ್ಡ ಸಾಧನೆ ಮಾಡಿದ್ದು, ಆ ಬಗ್ಗೆ ಇಲ್ಲಿದೆ ವಿವರ.

ಮಹೀಂದ್ರಾ ಕಂಪನಿ ಬೊಲೆರೊ ಎಸ್‌ಯುವಿಯನ್ನು 2000ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈಗಲೂ ಜನಪ್ರಿಯ ಎಸ್‌ಯುವಿಯಾಗಿ ಮುಂದುವರಿದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಂಪನಿಯು FY23ರಲ್ಲಿ ಬರೋಬ್ಬರಿ 1 ಲಕ್ಷ ಯುನಿಟ್ ಬೊಲೆರೊ ಮಾರಾಟ ಮಾಡಿದ್ದು, ಲಾಂಚ್ ಆಗಿದ್ದಾಗಿನಿಂದಲೂ ಈವರೆಗೆ ಒಟ್ಟು 14 ಲಕ್ಷ ಯುನಿಟ್ ಸೇಲ್ ಮಾಡಿದೆ. ಇದರ ಕಡಿಮೆ ನಿರ್ವಹಣಾ ವೆಚ್ಚ, ಕೈಗೆಟುಕುವ ಬೆಲೆ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ.

Mahindra Bolero: ಜಬರ್ದಸ್ತ್ ಸಾಧನೆ ಮಾಡಿದ ಭಾರತೀಯರ ನೆಚ್ಚಿನ ಮಹೀಂದ್ರಾ ಬೊಲೆರೊ

ಮಹೀಂದ್ರಾ ಕಂಪನಿ, 7-ಆಸನಗಳ ಬೊಲೆರೊವನ್ನು ಮ್ಯಾಕ್ಸಿ ಟ್ರಕ್ ಬಾಡಿ ಸ್ಟೈಲ್ ಆಯ್ಕೆಯಲ್ಲೂ ಮಾರಾಟ ಮಾಡುತ್ತಿದೆ. 2021ರಲ್ಲಿ ಜುಲೈನಲ್ಲಿ ಮತ್ತಷ್ಟು ಭಾರತೀಯ ಗ್ರಾಹಕರನ್ನು ತನ್ನತ್ತ ಸೆಳೆಯಲು ಮಹೀಂದ್ರಾ, ಬೊಲೆರೊ ನಿಯೋವನ್ನು ಪರಿಚಯಿಸಿತ್ತು. ಇದು, ಪ್ರಸ್ತುತ ರೂ.9.63 ಲಕ್ಷದಿಂದ ರೂ.12.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಎನ್4, ಎನ್8 ಎಂಬ 4 ರೂಪಾಂತರಗಳ ಆಯ್ಕೆಯಲ್ಲಿ ಸಿಗಲಿದೆ.

ಮಹೀಂದ್ರಾ, ಬೊಲೆರೊ ನಿಯೋ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 100 PS ಗರಿಷ್ಠ ಪವರ್ ಹಾಗೂ 260 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ ಜೊತೆಗೆ 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 17.29 kmpl ಮೈಲೇಜ್ ನೀಡಲಿದೆ.

ಇದರ ವೈಶಿಷ್ಟ್ಯದ ಬಗ್ಗೆ ಮಾತನಾಡುವುದಾದರೆ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಹಾಗೂ ಕೀಲೆಸ್ ಎಂಟ್ರಿ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರಿವರ್ಸ್ ಅಸಿಸ್ಟ್‌, ರೇರ್ ಪಾರ್ಕಿಂಗ್ ಸೆನ್ಸರ್ಸ್, ISOFIX ಚೈಲ್ಡ್ ಮೌಂಟ್ಸ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ.

ಇನ್ನು, ಮಹೀಂದ್ರಾ ಬೊಲೆರೊ ರೂ.9.78 ಲಕ್ಷದಿಂದ ರೂ.10.79 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಬಿ4, ಬಿ6 ಹಾಗೂ ಬಿ6(O) ಎಂಬ ಮೂರು ರೂಪಾಂತರಗಳಲ್ಲಿ ಸಿಗಲಿದೆ. ಇದು 1.5 ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 75 PS ಗರಿಷ್ಠ ಪವರ್ ಹಾಗೂ 210 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆದಿದೆ.

ಈ ಕಾರು, 16.0 kmpl ಮೈಲೇಜ್ ನೀಡಲಿದ್ದು, RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯಾನ್ಯುವಲ್ ಎಸಿ, USB ಕನೆಕ್ಟಿವಿಟಿ, ಪವರ್ ವಿಂಡೋಸ್ ಹಾಗೂ ಪವರ್ ಸ್ಟೀರಿಂಗ್ ನಂತಹ ಫೀಚರ್ಸ್ ಹೊಂದಿದೆ. ಡುಯೆಲ್
ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ.

ಮಹೀಂದ್ರಾ ಕಂಪನಿ, ಈ ಬೊಲೆರೊ ಮೂಲಕವೇ ಮತ್ತಷ್ಟು ದೇಶೀಯ ಗ್ರಾಹಕರಿಗೆ ಹತ್ತಿರವಾಗಲು 'ನಿಯೋ ಪ್ಲಸ್' ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ. ಬೊಲೆರೊ ಮಾರಾಟವನ್ನು ಗಮನಿಸಿದ ಅದರ ಜನಪ್ರಿಯತೆ ಎಷ್ಟಿದೆ ಎಂಬುದರ ಬಗ್ಗೆ ಸುಲಭವಾಗಿ ಅರ್ಥವಾಗುತ್ತದೆ. ಇದು ಅಗ್ಗದ ಬೆಲೆಯನ್ನು ಹೊಂದಿದ್ದು, ಭಾರತದಂತಹ ಹಳ್ಳಿಗಾಡಿನ ರಸ್ತೆಯಲ್ಲಿ ಸುಲಭವಾಗಿ ಸಂಚರಿಸಲು ಸಾದ್ಯವಾಗುವುದರಿಂದ ಈಗಲೂ ಹೆಚ್ಚಿನ ಮಂದಿ ಇಷ್ಟಪಡುತ್ತಾರೆ.

More from DriveSpark

Article Published On: Monday, April 24, 2023, 17:09 [IST]
English summary
Mahindra bolero 1 lakh sales mark in fy23 daitails
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+