ಭಾರತದ ಗ್ರಾಹಕರ ಇಷ್ಟದ ಮಹೀಂದ್ರಾ ಬೊಲೆರೋ ಬೆಲೆ ಹೆಚ್ಚಳ
ಪ್ರಮುಖ ವಾಹನ ತಯಾರಕ ಮಹೀಂದ್ರಾ, ತನ್ನ ಬೊಲೆರೋ ಹಾಗೂ ಬೊಲೆರೋ ನಿಯೋ ಎಸ್‌ಯುವಿಗಳ ದರವನ್ನು ಏರಿಸಿದೆ. ದೇಶಾದ್ಯಂತ ಏಪ್ರಿಲ್ 1ರಿಂದ ಜಾರಿಯಾಗಲಿರುವ RDE ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಬೆಲೆಯನ್ನು ರೂ.31,000 ವರೆಗೆ ಹೆಚ್ಚಿಸಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನೂತನ ದರಗಳು ಇಂದಿನಿಂದಲೇ (ಮಾರ್ಚ್ 10) ಜಾರಿಯಾಗಲಿದ್ದು, ಬೆಲೆ ಏರಿಕೆ ನಂತರ ಬೊಲೆರೋ ನಿಯೋ ರೂ.9.63 ಲಕ್ಷದಿಂದ ರೂ.12.14 ಲಕ್ಷ ಎಕ್ಸ್ ಶೋ ರೂಂ ಬೆಲೆಯನ್ನು ಪಡೆದಿದ್ದರೆ, ಬೊಲೆರೋ ರೂ.9.78 ಲಕ್ಷದಿಂದ ರೂ.10.79 ಲಕ್ಷ ದರವನ್ನು ಹೊಂದಿದೆ. ಬೊಲೆರೋ ನಿಯೊ ಎನ್10 ಲಿಮಿಟೆಡ್ ಎಡಿಷನ್ ಹೊರತುಪಡಿಸಿ, ಉಳಿದೆಲ್ಲ ರೂಪಾಂತರಗಳ ದರವನ್ನು ರೂ.15,000 ಹೆಚ್ಚಿಸಲಾಗಿದೆ. ಬೊಲೆರೋದ ಬಿ4 ರೂಪಾಂತರವು ರೂ.25,000 ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.

ಬೊಲೆರೋದ ಟಾಪ್ ಎಂಡ್ ಮಾದರಿ ಬಿ6 (ಒ) ದರವು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬರೋಬ್ಬರಿ ರೂ.31,000 ಅಧಿಕವಾಗಿದೆ. ಬೊಲೆರೋ ಬಿ6 ಎಕ್ಸ್ ಶೋರೂಂ ದರ ರೂ.10 ಲಕ್ಷವಿದ್ದು, ಯಾವುದೇ ರೀತಿಯಾದ ಬೆಲೆ ಹೆಚ್ಚಳವನ್ನು ಪಡೆದುಕೊಂಡಿಲ್ಲ. ಈ ಬೊಲೆರೋ ಎಸ್‌ಯುವಿ ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ದರದಲ್ಲಿ ಖರೀದಿಗೆ ಸಿಗಲಿದೆ. ಆದರೆ, ದರ ಏರಿಕೆಯಾಗಿರುವುದು ಗ್ರಾಹಕರಿಗೆ ಆಘಾತ ತಂದಿದೆ.
ಮಹೀಂದ್ರಾ ಬೊಲೆರೋ ನಿಯೋ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.5-ಲೀಟರ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 100 PS ಗರಿಷ್ಠ ಪವರ್ ಹಾಗೂ 260 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಹೀಂದ್ರಾ ಬೊಲೆರೋ 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, ಇದು 75 PS ಪವರ್ ಹಾಗೂ 210 Nm ಪೀಕ್ ಟಾರ್ಕ್ ಉತ್ಪಾದಿಸುತ್ತಾರೆ. 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸರ್‌ನ್ನು ಹೊಂದಿದೆ. USB ಕನೆಕ್ಟಿವಿಟಿ ಹಾಗೂ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಪಡೆದಿದೆ.
ಮಹೀಂದ್ರಾ ಕಂಪನಿ, 2023ರ ಫೆಬ್ರವರಿಯಲ್ಲಿ 30,358 ಯುನಿಟ್ ವಾಹನ ಮಾರಾಟ ಮಾಡಿದ್ದು, 2022ರ ಫೆಬ್ರವರಿಯಲ್ಲಿ 27,663 ಯುನಿಟ್ ಸೇಲ್ ಮಾಡಿದೆ. ವರ್ಷದಿಂದ ವರ್ಷಕ್ಕೆ 10% ಪ್ರಗತಿ ಕಂಡಿದೆ. ಆದರೆ, ಬೊಲೆರೋ ಮಾರಾಟದಲ್ಲಿ ಮಾತ್ರ ಹಿನ್ನೆಡೆ ಅನುಭವಿಸಿದೆ. ಕಳೆದ ತಿಂಗಳು, 9,782 ಯುನಿಟ್ ಬೊಲೆರೋ ಎಸ್‌ಯುವಿಗಳನ್ನು ಮಾರಿದೆ. ಆದರೆ, 2022ರ ಫೆಬ್ರವರಿ ತಿಂಗಳಲ್ಲಿ 11,045 ಯುನಿಟ್ ಸೇಲ್ ಮಾಡಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, 11% ಕುಸಿತ ದಾಖಲಿಸಿದೆ.
ಇನ್ನು, ಮಹೀಂದ್ರಾ ಈಗಾಗಲೇ ಬೊಲೆರೋ ನಿಯೋ ಪ್ಲಸ್ ಎಸ್‌ಯುವಿಯನ್ನು ಪರೀಕ್ಷಿಸುತ್ತಿದ್ದು, ಮುಂಬರುವ ತಿಂಗಳಲ್ಲಿ ಲಾಂಚ್ ಆಗಲಿದೆ. ಹೊಸ ಎಸ್‌ಯುವಿ ಹೊರಭಾಗದಲ್ಲಿ ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿರಲಿದ್ದು, 15-ಇಂಚಿನ ಅಲಾಯ್ ವೀಲ್ಸ್ ಹೊಂದಿರಲಿದ್ದು, ಬಂಪರ್ ಹಾಗೂ ಗ್ರೀಲ್ ವಿನ್ಯಾಸದಲ್ಲಿ ಬದಲಾವಣೆಗಳು ಇರಲಿವೆ. 5 ರೂಪಾಂತರಗಳು ಹಾಗೂ 7-9 ಆಸನ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಬಹುದು. ಜೊತೆಗೆ 1.5 - ಲೀಟರ್ ಡಿಸೇಲ್ ಎಂಜಿನ್ ಅನ್ನು ಪಡೆದಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications