Mahindra: ಗ್ರಾಮೀಣ ಜನರ ಫೆವರೇಟ್ ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಶೀಘ್ರ ಬಿಡುಗಡೆ, ವಿಶೇಷತೆಗಳೇನು?

ದೇಶದಲ್ಲಿ ಮಹೀಂದ್ರಾ (Mahindra) ಕಂಪನಿ ಮಾರಾಟ ಮಾಡುವ ಬೊಲೆರೊ (Bolero) ಸರಣಿ ಎಸ್‌ಯುವಿಗಳು ಗ್ರಾಮೀಣ ಜನರ ಹಾಟ್ ಫೆವರೇಟ್ ಆಗಿವೆ. ಹಬ್ಬದ ಋತುವಿನಲ್ಲಿ ತನ್ನ ಮಾರಾಟ ಪ್ರಮಾಣವನ್ನು ವೃದ್ಧಿಸಿಕೊಳ್ಳಲು ಕಂಪನಿಯು ಮುಂದಿನ ತಿಂಗಳು (ಸೆಪ್ಟೆಂಬರ್) ಹೊಸ ಬೊಲೆರೊ ನಿಯೋ ಪ್ಲಸ್ ಎಸ್‌ಯುವಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ಈ ಬೊಲೆರೊ ನಿಯೋ ಪ್ಲಸ್, ಸ್ಕಾರ್ಪಿಯೋ ಕ್ಲಾಸಿಕ್‌ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಕ್ಲಾಸಿಕ್‌ ಹೊಂದಿರುವ ರೂಪಾಂತರಗಳ ಹೆಸರನ್ನು ಬೊಲೆರೊ ನಿಯೋ ಪ್ಲಸ್ ಕೂಡ ಪಡೆದಿರುವ ನೀರಿಕ್ಷೆಯಿದೆ. ಗ್ರಾಮೀಣ ಭಾಗದ ಜನರು, ಬೊಲೆರೊವನ್ನು ಹೆಚ್ಚು ಇಷ್ಟಪಡುವುದರಿಂದ ಮಹೀಂದ್ರಾ, ನೂತನ ಬೊಲೆರೊ ನಿಯೋ ಪ್ಲಸ್ ಎಸ್‌ಯುವಿಯಲ್ಲಿ 3 ಸಾಲಿನ ಆಸನ ವ್ಯವಸ್ಥೆ ನೀಡಲು ತೀರ್ಮಾನಿಸಿದೆ.

Mahindra: ಗ್ರಾಮೀಣ ಜನರ ಫೆವರೇಟ್ ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಶೀಘ್ರ ಬಿಡುಗಡೆ, ವಿಶೇಷತೆಗಳೇನು?

ಅದರಲ್ಲೂ ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಎಸ್‌ಯುವಿ 7 ಅಥವಾ 9 ಆಸನ ವ್ಯವಸ್ಥೆಯಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಸಿಗಬಹುದು. ಜೊತೆಗೆ ರೇರ್ ವೀಲ್ ಡ್ರೈವ್ ತಂತ್ರಜ್ಞಾನದೊಂದಿಗೆ ದೊರೆಯಬಹುದು. ಸ್ಕಾರ್ಪಿಯೋ ಕ್ಲಾಸಿಕ್‌ನಂತೆಯೇ ಬೊಲೆರೊ ನಿಯೋ ಪ್ಲಸ್ 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, ಆದರೆ ಪವರ್ ಉತ್ಪಾದನೆಯು ಸ್ಕಾರ್ಪಿಯೋ ಕ್ಲಾಸಿಕ್‌ಗಿಂತ ಭಿನ್ನವಾಗಿರಲಿದೆ.

ಈ ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಎಸ್‌ಯುವಿ, 120 bhp ಗರಿಷ್ಠ ಪವರ್ ಹಾಗೂ 280 Nm ಪೀಕ್ ಟ್ರಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರುವ ನಿರೀಕ್ಷೆಯಿದೆ. ಸ್ಕಾರ್ಪಿಯೋ ಕ್ಲಾಸಿಕ್‌, 130 bhp ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಗೇರ್‌ಬಾಕ್ಸ್‌ ವಿಷಯಕ್ಕೆ ಬರುವುದಾದರೆ, ಬೊಲೆರೊ ನಿಯೋ ಪ್ಲಸ್ ಕೇವಲ 6 ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆಯಿದೆ.

ವೈಶಿಷ್ಟ್ಯಗಳ ವಿಷಯಕ್ಕೆ ಬರುವುದಾದರೆ, ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಎಸ್‌ಯುವಿಯು 6.8 - ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಪವರ್ ವಿಂಡೋ, ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಡ್ಯುಯಲ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಸೇರಿದಂತೆ ಹತ್ತಾರು ಫೀಚರ್ಸ್ ಪಡೆದಿರಲಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಬೊಲೆರೊ ನಿಯೋ ರೂ.9.63 ಲಕ್ಷದಿಂದ ರೂ.12.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು, 1.5 - ಲೀಟರ್ ಡೀಸೆಲ್ ಎಂಜಿನ್ ಪಡೆದಿದ್ದು, 100 PS ಗರಿಷ್ಠ ಪವರ್ ಹಾಗೂ 260 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 - ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಲಭ್ಯವಿದೆ.

ಈ ಬೊಲೆರೊ ನಿಯೋ, ಎನ್4, ಎನ್8, ಎನ್10 ಮತ್ತು ಎನ್10(ಒ) ಎಂಬ ನಾಲ್ಕು ರೂಪಾಂತರ ಹಾಗೂ ಏಳು ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ 17.29 kmpl ಮೈಲೇಜ್ ನೀಡುತ್ತದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಏರ್‌ಬ್ಯಾಗ್ಸ್ ಒಳಗೊಂಡಿದೆ.

ಮಹೀಂದ್ರಾ ಬೊಲೆರೊ ಬಗ್ಗೆ ಮಾತನಾಡುವುದಾದರೆ, ಇದು ರೂ.9.78 ಲಕ್ಷದಿಂದ ರೂ.10.79 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದ್ದು, 75 PS ಗರಿಷ್ಠ ಪವರ್ ಹಾಗೂ 210 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ದೊರೆಯಲಿದ್ದು, 16.0 kmpl ಮೈಲೇಜ್ ನೀಡುತ್ತದೆ.

ಇನ್ನು, ಹಬ್ಬದ ಋತುವಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಎಸ್‌ಯುವಿ ರೂ.10 ಲಕ್ಷದಿಂದ ರೂ.12 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆಯಿದೆ. ಮೊದಲೇ ಬೊಲೆರೊ ಗ್ರಾಮೀಣ ಜನರ ಹಾಟ್ ಫೆವರೇಟ್ ಆಗಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೊಳ್ಳುವ ನಿಯೋ ಪ್ಲಸ್ ಎಸ್‌ಯುವಿ ಹೆಚ್ಚಿನ ದೇಶೀಯ ಗ್ರಾಹಕರನ್ನು ತನ್ನತ್ತ ಸೆಳೆಯಬಹುದು. ಎಲ್ಲದಕ್ಕೂ ಶೀಘ್ರದಲ್ಲಿ ಉತ್ತರ ಸಿಗಲಿದೆ.

Article Published On: Monday, August 7, 2023, 13:47 [IST]
English summary
Mahindra bolero neo plus launch september details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+