Mahindra: ಮಹೀಂದ್ರಾ ಕಾರುಗಳಿಗೆ 73,000 ರೂಪಾಯಿವರೆಗೂ ರಿಯಾಯಿತಿ.. ಈ ಅವಕಾಶ ಮತ್ತೆ ಸಿಗಲ್ಲ
ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಮಹೀಂದ್ರಾ (Mahindra) ಖ್ಯಾತಿಗಳಿಸಿದೆ. ಈ ಜುಲೈ ತಿಂಗಳು ತನ್ನ ವಿವಿಧ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದ್ದು, ಆಸಕ್ತ ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಯಾವ ಕಾರು ಎಷ್ಟು ಡಿಸ್ಕೌಂಟ್ ಹೊಂದಿದೆ ಎಂಬುದನ್ನು ತಿಳಿಯೋಣ ಬನ್ನಿ.
ಮೊದಲಿಗೆ ಮಹೀಂದ್ರಾ ಮರಾಜೊ (Mahindra Marazzo) ಬಗ್ಗೆ ಮಾತನಾಡೋಣ. ಈ ಕಾರಿನ ಟಾಪ್ ಎಂಡ್ ಮಾದರಿ M6 ಪ್ಲಸ್ ರೂಪಾಂತರ ಗರಿಷ್ಠ ರೂ.73,000 ವರೆಗೆ ರಿಯಾಯಿತಿ ಪ್ರಯೋಜನ ಹೊಂದಿದೆ. M4 ಪ್ಲಸ್ ರೂ.36,000 ಹಾಗೂ ಬೇಸ್ ವೇರಿಯೆಂಟ್ M2 ರೂ.58,000 ಡಿಸ್ಕೌಂಟ್ ಒಳಗೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಮರಾಜೊ ರೂ.14.10 ಲಕ್ಷದಿಂದ ರೂ.16.46 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಮರಾಜೊ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 122 PS ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಮಹೀಂದ್ರಾ ಬೊಲೆರೊ (Mahindra Bolero) ಕೂಡ ರೂ.60,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಬೇಸ್ ವೇರಿಯೆಂಟ್ B4 ರೂ.37,000, B6 ಹಾಗೂ B6 (O) ರೂಪಾಂತರಗಳು ಕ್ರಮವಾಗಿ ರೂ.25,000 ಹಾಗೂ ರೂ.60,000 ಡಿಸ್ಕೌಂಟ್ ಪಡೆದಿವೆ. ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ ರೂ.9.78 ಲಕ್ಷದಿಂದ ರೂ.10.79 ಲಕ್ಷ (ಎಕ್ಸ್ ಶೋರೂಂ, ಮುಂಬೈ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಈ ಜುಲೈ ತಿಂಗಳು ಮಹೀಂದ್ರಾ XUV300 ಸಹ ಭರ್ಜರಿ ಡಿಸ್ಕೌಂಟ್ ಆಫರ್ ಪಡೆದಿದೆ. ಒಟ್ಟು ರೂ.55,000ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. T-GDi ರೂಪಾಂತರಗಳು ರೂ.20,000ವರೆಗೆ, ಡೀಸೆಲ್ ವೇರಿಯೆಂಟ್ಸ್ ರೂ.20,000 - ರೂ.55,000 ತನಕ ಡಿಸ್ಕೌಂಟ್ ಒಳಗೊಂಡಿವೆ. ದೇಶೀಯ ಮಾರುಕಟ್ಟೆಯಲ್ಲಿ XUV300 ರೂ.8.42 ಲಕ್ಷದಿಂದ ರೂ.14.60 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.
ಮಹೀಂದ್ರಾದ ಬಹುಬೇಡಿಕೆಯ ಬೊಲೆರೊ ನಿಯೋ (Mahindra Bolero Neo) ಬರೋಬ್ಬರಿ ರೂ.50,000 ವರೆಗೆ ರಿಯಾಯಿತಿಯನ್ನು ಒಳಗೊಂಡಿದೆ. N4 ವೇರಿಯೆಂಟ್ ರೂ.22,000, ಮಿಡ್-ಸ್ಪೆಕ್ N8 ರೂ.31,000 ಡಿಸ್ಕೌಂಟ್ ಹೊಂದಿದ್ದು, ಟಾಪ್ ಎಂಡ್ ಮಾದರಿಗಳಾದ N10 R ಹಾಗೂ N10 (O) ರೂ.50,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಬೊಲೆರೊ ರೂ.9.63 ಲಕ್ಷದಿಂದ ರೂ.12.14 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಸಿಗುತ್ತದೆ.
ಈ ತಿಂಗಳು ಮಹೀಂದ್ರಾ ಥಾರ್ 4X4 (Mahindra Thar 4X4) ಕೂಡ ಒಳ್ಳೆಯ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಅದರ AX (O) ಮತ್ತು LX ರೂಪಾಂತರಗಳು ರೂ.30,000 ನಗದು ರಿಯಾಯಿತಿಯನ್ನು ಹೊಂದಿವೆ. ಥಾರ್ ರೂ.13.87 ಲಕ್ಷದಿಂದ ರೂ.16.57 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ 15.2 kmpl ಮೈಲೇಜ್ ನೀಡುತ್ತದೆ.
ಒಟ್ಟಾರೆ, ಈ ಜುಲೈ ತಿಂಗಳು ಮಹೀಂದ್ರಾ ಕಂಪನಿ ತನ್ನ ಮಾರಾಟ ಪ್ರಮಾಣವನ್ನು ವೃದ್ಧಿಸಿಕೊಳ್ಳಲು ಆಕರ್ಷಕ ರಿಯಾಯಿತಿ ಪ್ರಯೋಜನವನ್ನು ನೀಡಿದೆ. ಆಸಕ್ತ ಗ್ರಾಹಕರು, ಇದರ ಸದುಪಯೋಗಪಡಿಸಿಕೊಳ್ಳಬಹುದು. ನಿಮಗೆ ತಿಳಿದಿರಲಿ.. ರಾಜ್ಯದಿಂದ ರಾಜ್ಯಕ್ಕೆ ಈ ರಿಯಾಯಿತಿಗಳು ಬೇರೆ - ಬೇರೆ ಇರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಮಹೀಂದ್ರಾ ಡೀಲರ್ ಶಿಪ್ ಸಂಪರ್ಕಿಸಿರಿ.


Click it and Unblock the Notifications