ಮಹೀಂದ್ರಾದ ಜನಪ್ರಿಯ ಫ್ಯಾಮಿಲಿ ಕಾರು ಸ್ಥಗಿತಗೊಳ್ಳಲಿದೆ!... ಇನ್ನು ಇತಿಹಾಸವಷ್ಟೇ?
ಭಾರತದ ಹೆಮ್ಮೆಯ ಕಾರು ತಯಾರಕ ಕಂಪನಿಗಳಲ್ಲಿ ಮಹೀಂದ್ರಾ (Mahindra) ಕೂಡ ಒಂದು, ಮಹೀಂದ್ರಾ ಕಾರುಗಳು ತಮ್ಮ ವೈಶಿಷ್ಟ್ಯಗಳ ಪಟ್ಟಿ ಮತ್ತು ಪವರ್‌ಫುಲ್ ಎಂಜಿನ್‌ಗಳೊಂದಿಗೆ ಗ್ರಾಹಕರ ಮನಗೆದ್ದಿವೆ. ಸದ್ಯ ಮಹೀಂದ್ರಾದವರ ಬಹುತೇಕ ಎಲ್ಲಾ ಎಸ್‌ಯುವಿಗಳು ಉತ್ತಮ ಮಾರಾಟವನ್ನು ಗಳಿಸುತ್ತಿವೆ. ಆದ್ರೆ ಒಂದು ಕಾರು ಮಾತ್ರ ಇದೀಗ ಸ್ಥಗಿತಗೊಳ್ಳುವ ಹಂತವನ್ನು ತಲುಪಿದೆ.
ಪ್ರಸ್ತುತ ಮಹೀಂದ್ರಾ ಕಂಪನಿಯು ಥಾರ್ 5-ಡೋರ್ (Mahindra Thar 5-Door) ಮತ್ತು XUV300 ಫೇಸ್‌ಲಿಫ್ಟ್‌ಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ನಡುವೆ ದುಃಖಕರ ವಿಷಯವೆಂದರೆ, ಮಹೀಂದ್ರಾದ ಒಂದು ಕಾರು ದುರದೃಷ್ಟಕರ ಅಂತ್ಯವನ್ನು ಎದುರಿಸುವುದು ಖಚಿತ ಎನ್ನಲಾಗುತ್ತಿದೆ. ಅದು ಯಾವ ಕಾರೆಂದು ನೀವು ಊಹಿಸಬಲ್ಲಿರಾ?... ಅದು ಮತ್ಯಾವುದೂ ಅಲ್ಲಾ ಮಹೀಂದ್ರಾ ಮರಾಝೋ (Mahindra Marazzo).

ಹೌದು Mahindra Marazzo ಅತ್ಯಂತ ಕಡಿಮೆ ಮಾರಾಟ ಕಾಣುತ್ತಿದ್ದು ತೀವ್ರ ಕುಸಿತವನ್ನು ಎದುರಿಸಿದೆ. ಗ್ರಾಹಕರು ಇದನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ನವೆಂಬರ್ 2023 ರಲ್ಲಿ ಮಹೀಂದ್ರಾ ಕೇವಲ 49 ಮರಾಝೋ ಘಟಕಗಳನ್ನು ಮಾರಾಟ ಮಾಡಿದೆ. ಅಲ್ಲದೆ, ಕಳೆದ ಮೂರು ತಿಂಗಳುಗಳಲ್ಲಿ ಮಹೀಂದ್ರಾ ಕೇವಲ 282 ಮರಾಝೋ ಘಟಕಗಳನ್ನು ಮಾತ್ರ ಮಾರಾಟ ಮಾಡಿದೆ.
ಮಹೀಂದ್ರಾ ತನ್ನ ಮರಾಝೋ ಮಾರಾಟವನ್ನು ಹೆಚ್ಚಿಸಲು ಬಯಸಿದರೆ ಒಂದು ಮರಾಝೋವನ್ನು ನವೀಕರಿಸಬೇಕು, ಇಲ್ಲವೇ ಅದನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ. ಈ ಎರಡು ಆಯ್ಕೆಯಲ್ಲಿ ಕಂಪನಿ ಒಂದುನ್ನು ಖಂಡಿತ ಮಾಡಬೇಕಿದೆ. ಆದ್ರೆ Mahindra Marazzo ಈಗಾಗಲೇ ಫ್ಲಾಪ್ ಉತ್ಪನ್ನವಾಗಿದ್ದು, ಮಹೀಂದ್ರಾ ಇದನ್ನು ನವೀಕರಿಸಲು ಯಾವುದೇ ಮಾರ್ಗವಿಲ್ಲ ಎನ್ನಲಾಗುತ್ತಿದೆ.

ಎರ್ಟಿಗಾ ಮತ್ತು ಇನ್ನೋವಾ ನಡುವಿನ ಸ್ವೀಟ್ ಸ್ಪಾಟ್ ಅನ್ನು ಗುರಿಯಾಗಿಟ್ಟುಕೊಂಡು ಮಹೀಂದ್ರಾ ತನ್ನ ಮರಾಝೋವನ್ನು ಪರಿಚಯಿಸಿತು. ಕ್ಯಾರೆನ್ಸ್‌ನೊಂದಿಗೆ ಕಿಯಾ ಮಾಡಿದ್ದು ಕೂಡ ಇದೆ. ಆದ್ರೆ ಇದು ಮಹೀಂದ್ರಾಗೆ ಅಂದುಕೊಂಡ ಮಟ್ಟಕ್ಕೆ ಯಶಸ್ಸು ತಂದುಕೊಡಲಿಲ್ಲ. ಹಾಗೆಂದು ಮಹೀಂದ್ರಾ ಮರಾಝೋ ತೀರಾ ಕೆಟ್ಟ ಉತ್ಪನ್ನವೇನಲ್ಲ. ಅದರ ವಿಶಾಲವಾದ ಕ್ಯಾಬಿನ್ ಮತ್ತು ಸೌಕರ್ಯ-ಆಧಾರಿತ ಕ್ಯಾಬಿನ್‌ಗೆ ಪ್ರಶಂಸಿಸಲ್ಪಟ್ಟಿದೆ.
ಆದರೆ ಇದು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ಎಂಜಿನ್ ಇಲ್ಲದಂತಹ ಕೆಲವು ಪ್ರಮುಖ ನ್ಯೂನತೆಗಳನ್ನು ಹೊಂದಿತ್ತು. ಇದು ಯಾವುದೇ ಗಿಮಿಕ್‌ಗಳು ಅಥವಾ ಅಲಂಕಾರಿಕ ವೈಶಿಷ್ಟ್ಯಗಳನ್ನು ಸಹ ಹೊಂದಿಲ್ಲ. ಹಾಗಾಗಿ 2024 ರಲ್ಲಿ ಮಹೀಂದ್ರಾ ಮರಾಝೋ ಅಂತ್ಯ ಕಾಣಲಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮಹೀಂದ್ರಾ ತನ್ನ ಮರಾಝೊ (Mahindra Marazzo)ದೊಂದಿಗೆ ಏನು ಮಾಡಲಿದೆ ಎಂಬುದರ ಕುರಿತು ಆಟೋ ವಲಯದಲ್ಲಿ ಸದ್ಯ ಸಾಕಷ್ಟು ಕುತೂಹಲವಿದೆ.

ಮಹೀಂದ್ರಾ ತನ್ನ ಉತ್ಪನ್ನ ಶ್ರೇಣಿಯಲ್ಲಿ ಮರಾಝೋದಂತಹ ಉತ್ಪನ್ನ ಅಸ್ತಿತ್ವದಲ್ಲಿದೆ ಎಂಬುದನ್ನು ಮರೆತಂತೆ ಭಾಸವಾಗುತ್ತಿದೆ. Mahindra Marazzo ಫೇಸ್‌ಲಿಫ್ಟ್ ಪಡೆಯುವ ಬಗ್ಗೆಯೂ ಕೆಲವು ವದಂತಿಗಳಿವೆ, ಆದರೆ ಅದು ಈಗ ಅಸಂಭವವೆಂದು ತೋರುತ್ತದೆ. ಆದ್ದರಿಂದ, ಮಹೀಂದ್ರಾಗೆ ಉತ್ತಮ ಆಯ್ಕೆಯು ಮರಾಜೊವನ್ನು ಸ್ಥಗಿತಗೊಳಿಸುವುದಾಗಿದೆ. ಇದರಿಂದ ಮುಂಬರುವ SUV ಗಳಿಗೆ ಹೆಚ್ಚು ಅಗತ್ಯವಿರುವ ಉತ್ಪಾದನಾ ಸಾಮರ್ಥ್ಯವನ್ನು ಸಹ ಮುಕ್ತಗೊಳಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications