Mahindra Thar: 100,000 ಯುನಿಟ್ ಉತ್ಪಾದನೆ.. ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸಿದ ಮಹೀಂದ್ರಾ ಥಾರ್

ಭಾರತದಲ್ಲಿ ಆಫ್-ರೋಡ್ ಎಸ್‌ಯುವಿ ಮಹೀಂದ್ರಾ ಥಾರ್ ಬಹುಬೇಡಿಕೆಯನ್ನು ಪಡೆದಿದೆ. ಇದರ ಆಕರ್ಷಕ ಲುಕ್, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಮಹೀಂದ್ರಾ, ಕೇವಲ 2.5 ವರ್ಷಗಳಲ್ಲಿ 100,000 ಯುನಿಟ್ ಥಾರ್ ಎಸ್‌ಯುವಿಗಳನ್ನು ಉತ್ಪಾದಿಸಿ, ಅತಿದೊಡ್ಡ ಸಾಧನೆಯನ್ನು ಮಾಡಿದೆ. ಇದನ್ನು ನೋಡಿದಾಗ ಮಹೀಂದ್ರಾ ಥಾರ್ ಎಷ್ಟರಮಟ್ಟಿಗೆ ಜನಪ್ರಿಯತೆಯನ್ನು ಹೊಂದಿದೆ ಎಂಬುದು ಗೊತ್ತಾಗುತ್ತದೆ. ವಿಶೇಷವೆಂದರೆ, ಈ ಎಸ್‌ಯುವಿಯನ್ನು ಬಹುತೇಕ ಯುವ ಜನತೆಯೇ ಇಷ್ಟಪಟ್ಟು ಖರೀದಿಸುತ್ತಿದ್ದು, ಭಾರತದ ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Mahindra Thar: 100,000 ಯುನಿಟ್ ಉತ್ಪಾದನೆ.. ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸಿದ ಮಹೀಂದ್ರಾ ಥಾರ್

ಮಹೀಂದ್ರಾ ಕಂಪನಿ ಬಹುನೀರಿಕ್ಷಿತ ಥಾರ್, ಲಾಂಚ್ ಆದ ಕೆಲವೇ ವಾರಗಳಲ್ಲಿ 15,000ಕ್ಕೂ ಹೆಚ್ಚು ಬುಕಿಂಗ್‌ನ್ನು ಪಡೆದುಕೊಂಡಿತ್ತು. ಜೊತೆಗೆ ಮಾರುಕಟ್ಟೆಗೆ ಬಂದ ಮೊದಲ 12 ತಿಂಗಳಲ್ಲಿಯೇ 75,000ಕ್ಕೂ ಅಧಿಕ ಬುಕಿಂಗ್‌ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಆಫ್-ರೋಡ್ ಎಸ್‌ಯುವಿ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ಥಾರ್ ಕೊಂಡುಕೊಳ್ಳಲು ಇವತ್ತು ಬುಕ್ ಮಾಡಿದರೂ ಕನಿಷ್ಠವೆಂದರೂ ನಾಲ್ಕು ತಿಂಗಳು ಕಾಯಬೇಕು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹೀಂದ್ರಾ & ಮಹೀಂದ್ರಾ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ, 'ಥಾರ್‌ ಎಸ್‌ಯುವಿಯ ಉತ್ಪಾದನೆಯಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಸಾಧಿಸಿರುವುದು ಸಂತೋಷ ತಂದಿದೆ. ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದು, ವಾರಾಂತ್ಯದಲ್ಲಿ ಲಾಂಗ್ ಡ್ರೈವ್ ಹೋಗುವವರಿಗೆ ಅತ್ಯುತ್ತಮವಾಗಿರುವುದರಿಂದ ಹೆಚ್ಚಿನ ಜನರ ಮನಗೆದ್ದಿದೆ. ನಮ್ಮ ಗ್ರಾಹಕರು ಥಾರ್‌ ಮೇಲಿಟ್ಟಿರುವ ನಂಬಿಕೆ ಹಾಗೂ ಪ್ರೀತಿಗೆ ಕೃತಜ್ಞರಾಗಿರುತ್ತೇವೆ' ಎಂದು ಹೇಳಿದ್ದಾರೆ.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಥಾರ್ 3 ಡೋರ್, ರೂ.9.99 ಲಕ್ಷದಿಂದ ರೂ.16.49 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಒಟ್ಟು ಆರು ಬಣ್ಣಗಳ ಆಯ್ಕೆಯಲ್ಲಿ AX(O) ಹಾಗೂ LX ಎಂಬ ಎರಡು ರೂಪಾಂತರಗಳಲ್ಲಿ ದೊರೆಯಲಿದೆ. ಸದ್ಯ, ಮಹೀಂದ್ರಾ ಕಂಪನಿ ಈ ಎಸ್‌ಯುವಿಯ 5 ಡೋರ್ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆದಿದೆ.

ಈ ಮಹೀಂದ್ರಾ ಥಾರ್ 3 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದರ RWD (ರೇರ್ ವೀಲ್ ಡ್ರೈವ್) ವೇರಿಯೆಂಟ್ 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 118 PS ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 6 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದ್ದು, 15.2 kmpl ಮೈಲೇಜ್ ನೀಡಲಿದೆ.

ಮಹೀಂದ್ರಾ ಥಾರ್ 4WD (ಫೋರ್ ವೀಲ್ ಡ್ರೈವ್) ವೇರಿಯೆಂಟ್ ನ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 PS ಗರಿಷ್ಠ ಪವರ್, 320 Nm ಪೀಕ್ ಟಾರ್ಕ್, 2.2 ಲೀಟರ್ ಡೀಸೆಲ್ ಎಂಜಿನ್ 130 PS ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಮ್ಯಾನುವಲ್ ಹಾಗೂ 6 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಈ ಮಹೀಂದ್ರಾ ಥಾರ್ ಎಸ್‌ಯುವಿ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದರೆ, ಇದು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ, ಕ್ರೂಸ್ ಕಂಟ್ರೋಲ್, ಎಲ್ಇಡಿ DRLs, ಹ್ಯಾಲೊಜೆನ್ ಹೆಡ್ ಲೈಟ್ಸ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಸ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಇಷ್ಟೇಅಲ್ಲದೆ, ಸುರಕ್ಷತೆಯ ದೃಷ್ಟಿಯಿಂದಲೂ ಮಹೀಂದ್ರಾ ಥಾರ್ ಅತ್ಯುತ್ತಮವಾಗಿದ್ದು, ಡ್ಯೂಯಲ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್),ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್ಸ್, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ. ಈ ಮಹೀಂದ್ರಾ ಥಾರ್ ಭಾರತದ ಮಾರುಕಟ್ಟೆಯಲ್ಲಿ ಆಫ್-ರೋಡ್ ಎಸ್‌ಯುವಿಗಾಳದ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಜಿಮ್ನಿಗೆ ನೇರ ಪ್ರತಿಸ್ಪರ್ಧಿಯಾಗಿದೆ.

Article Published On: Wednesday, March 29, 2023, 17:23 [IST]
English summary
Mahindra marks the production milestone of 100000 units thar details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+