Mahindra Car: ಮೇರು ಶಿಖರವೇರುತ್ತಿದೆ ಮಹೀಂದ್ರಾ ಸ್ಕಾರ್ಪಿಯೋ: ಅದಕ್ಕೆ 'ಜೈ' ಎನ್ನುತ್ತಿದ್ದಾರೆ ಗ್ರಾಹಕ

ಭಾರತದಲ್ಲಿ ಮಹೀಂದ್ರಾ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಅದರ ಕಾರುಗಳ ನಿರ್ಮಾಣ ಗುಣಮಟ್ಟ, ವೈಶಿಷ್ಟ್ಯ ಹಾಗೂ ವಿನ್ಯಾಸ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತಿದೆ. ಸದ್ಯ, ಮೇ (2023) ತಿಂಗಳ ಮಾರಾಟ ವರದಿ ಪ್ರಕಟಗೊಂಡಿದ್ದು, ಕಂಪನಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಅದರಲ್ಲೂ ಸ್ಕಾರ್ಪಿಯೋ, ಬೊಲೆರೋ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಮಹೀಂದ್ರಾ ಕಂಪನಿ ಮೇ ತಿಂಗಳಲ್ಲಿ (2023) ಬರೋಬ್ಬರಿ 32,883 ಯುನಿಟ್ ಕಾರುಗಳನ್ನು ಸೇಲ್ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ (26,560 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 23.8% ಬೆಳವಣಿಗೆ ಸಾಧಿಸಿದೆ. ಆದರೆ, ಏಪ್ರಿಲ್ ತಿಂಗಳ ಮಾರಾಟವನ್ನು ಗಮನಿಸಿದರೆ (34,694) ತಿಂಗಳಿಂದ ತಿಂಗಳಿಗೆ ಶೇಕಡ 5.2% ಹಿನ್ನೆಡೆ ಅನುಭವಿಸಿದೆ.

Mahindra Car: ಮೇರು ಶಿಖರವೇರುತ್ತಿದೆ ಮಹೀಂದ್ರಾ ಸ್ಕಾರ್ಪಿಯೋ: ಅದಕ್ಕೆ ಜೈ ಎನ್ನುತ್ತಿದ್ದಾರೆ ಗ್ರಾಹಕ

ಮಹೀಂದ್ರಾ, ತನ್ನ ಜನಪ್ರಿಯ ಎಸ್‌ಯುವಿ ಸ್ಕಾರ್ಪಿಯೋ ಸೇಲ್ ಯಾವುದೇ ರೀತಿಯಿಂದಲ್ಲೂ ಹಿಂದೆ ಉಳಿದಿಲ್ಲ. ಮೇ ತಿಂಗಳು (2023) ಸ್ಕಾರ್ಪಿಯೋ ಸರಣಿಯ 9,318 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ (4,348 ಯುನಿಟ್) ಬರೋಬ್ಬರಿ 114% ಪ್ರಗತಿ ಸಾಧಿಸಿದೆ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಸ್ಕಾರ್ಪಿಯೋ ಎನ್ ಹಾಗೂ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಗಳು ಖರೀದಿಗೆ ಲಭ್ಯವಿವೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ ಐದು ರೂಪಾಂತರಗಳ ಆಯ್ಕೆಯಲ್ಲಿ ರೂ.13.05 - ರೂ.24.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಇದರ ರೂಪಾಂತರಗಳನ್ನು ವಿತರಣೆ ಪಡೆಯಲು 6 ರಿಂದ 18 ತಿಂಗಳು ಕಾಯಬೇಕು. ಸ್ಕಾರ್ಪಿಯೋ ಎನ್ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Mahindra Car: ಮೇರು ಶಿಖರವೇರುತ್ತಿದೆ ಮಹೀಂದ್ರಾ ಸ್ಕಾರ್ಪಿಯೋ: ಅದಕ್ಕೆ ಜೈ ಎನ್ನುತ್ತಿದ್ದಾರೆ ಗ್ರಾಹಕ

ಸ್ಕಾರ್ಪಿಯೋ ಕ್ಲಾಸಿಕ್ ದೇಶೀಯ ಮಾರುಕಟ್ಟೆಯಲ್ಲಿ ರೂ.13 ಲಕ್ಷದಿಂದ 16.81 ಲಕ್ಷ ದರದಲ್ಲಿ ಸಿಗಲಿದೆ. ಹಲವು ದಶಕಗಳಿಂದ ಫೇಮಸ್ ಆಗಿರುವ ಈ ಕಾರು, ಕೇವಲ 2.2-ಲೀಟರ್ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ಕನಿಷ್ಠ ಏಳು ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದ್ದು, ಯುವ ಗ್ರಾಹಕರನ್ನು ಆಕರ್ಷಿಸುವ ವಿವಿಧ ಫೀಚರ್ಸ್ ಪಡೆದಿದೆ.

ಭಾರತದ ಮಧ್ಯಮ ವರ್ಗದ ಜನರ ಹಾಟ್ ಫೆವರೇಟ್ ಆಗಿರುವ ಮಹೀಂದ್ರಾ ಬೊಲೆರೋ ಕೂಡ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿದೆ. ಕಂಪನಿಯು ಕಳೆದ ಮೇ ತಿಂಗಳಲ್ಲಿ 8,170 ಯುನಿಟ್ ಕಾರುಗಳನ್ನು ಸೇಲ್ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಲೆಕ್ಕ ಹಾಕಿದರೆ (8,767 ಯುನಿಟ್) ಶೇಕಡ -7% ಹಿನ್ನೆಡೆ ಅನುಭವಿಸಿದೆ. ಸದ್ಯ, ಬೊಲೆರೋ ನಿಯೋ ರೂ.9.63 - 12.14 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತಿದೆ.

ಮಹೀಂದ್ರಾದ ಪ್ರಮುಖ ಎಸ್‌ಯುವಿಗಳಲ್ಲಿ XUV700 ಕೂಡ ಒಂದಾಗಿದೆ . ಕಂಪನಿಯು ಕಳೆದ ಮೇ ತಿಂಗಳಲ್ಲಿ 5,245 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2022ರ ಇದೇ ಅವಧಿಗೆ ಹೋಲಿಸಿದರೆ (5,069 ಯುನಿಟ್) ಶೇಕಡ 3% ಪ್ರಗತಿ ಸಾಧಿಸಿದೆ. ಇದು, ರೂ.14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಭಾರತದ ಗ್ರಾಹಕರಿಗೆ ಸಿಗಲಿದ್ದು, ಸುರಕ್ಷತೆಯ ದೃಷ್ಟಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ.

ಇನ್ನುಳಿದಂತೆ ಮಹೀಂದ್ರಾ, ಮೇ ತಿಂಗಳಲ್ಲಿ XUV300 ಕಾರು 5,125 ಯುನಿಟ್, ಆಫ್ ರೋಡ್ ಎಸ್‌ಯುವಿ ಥಾರ್ 4,296 ಯುನಿಟ್, ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು XUV400ನ 696 ಯುನಿಟ್ ಸೇಲ್ ಮಾಡಿದೆ. ಸಂಸ್ಥೆಯ ಮಾರಾಟ ವರದಿಯನ್ನು ಗಮನಿಸಿದಾಗ ಸ್ಕಾರ್ಪಿಯೋ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಿಗೆ ಇಷ್ಟವಾಗಿದೆ ಎಂದು ಸುಲಭವಾಗಿ ಹೇಳಬಹುದು.

Article Published On: Wednesday, June 14, 2023, 18:11 [IST]
English summary
Mahindra may 2023 sales scorpio bolero xuv700 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+