Mahindra Bolero: ಅತ್ಯಾಧುನಿಕ ಹೊಸ ಎಸ್‍ಯುವಿಗಳು ಬಂದರೂ ಮಹೀಂದ್ರಾದ ಟಾಪ್‌ಸೆಲ್ಲರ್ ಮಾತ್ರ ಬೊಲೆರೋ

2020ರಲ್ಲಿ ಹೊಸ ನವೀಕರಣಗಳೊಂದಿಗೆ ಬೊಲೆರೋ ಬಿಡುಗಡೆಯಾದ ಬಳಿಕ ಮಹೀಂದ್ರಾ ಕಂಪನಿಗೆ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಲೈನ್-ಅಪ್‌ನಲ್ಲಿ ಬೊಲೆರೋ ಅತ್ಯಂತ ಹಳೆಯ ಮಾದರಿಯಾಗಿದ್ದರೂ, ಮಾರಾಟದ ವಿಷಯದಲ್ಲಿ ಇದು ಸ್ವದೇಶಿ ವಾಹನ ತಯಾರಕ ಮಹೀಂದ್ರಾದ ಪ್ರಸ್ತುತ ಎಲ್ಲಾ ಎಸ್‍ಯುವಿಗಳನ್ನು ಮೀರಿಸಿ ಕಳೆದ ತಿಂಗಳ ಮಾರಾಟದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ,

ಕಳೆದ ತಿಂಗಳು ಮಾರ್ಚ್ ಮಾರಾಟದಲ್ಲಿ, ಬೊಲೆರೋ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಹೀಂದ್ರಾ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಮಹೀಂದ್ರಾ ಬೊಲೆರೋ ದೇಶದ ಗ್ರಾಮೀಣ ಮತ್ತು ಸೆಮಿ-ನಗರಗಳಲ್ಲಿ ಭಾರಿ ಜನಪ್ರಿಯತೆಯನ್ನು ಹೊಂದಿದೆ. ಎಸ್‍ಯುವಿ ಯಾವಾಗಲೂ ಅದರ ಒರಟಾದ ದೇಹ-ನಿರ್ಮಿತ, ಪ್ರಾಯೋಗಿಕತೆ ಮತ್ತು ಇಂಧನ ದಕ್ಷತೆಗಾಗಿ ಒಲವು ಹೊಂದಿದೆ. 2023ರ ಮಾರ್ಚ್‌ ತಿಂಗಳಿನಲ್ಲಿ ಮಹೀಂದ್ರಾ ಬೊಲೆರೊ ಮಾದರಿಯ 9,546 ಯೂನಿಟ್ ಗಳನ್ನು ಮಾರಾಟಗೊಳಿಸಿವೆ.

Mahindra Bolero

ಕಳೆದ ವರ್ಷದ ಇದೇ ತಿಂಗಳಿನಲ್ಲಿ 6,924 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದು ವರ್ಷದಿಂದ ವರ್ಷಕ್ಕೆ 38 ಪ್ರತಿಶತದಷ್ಟು ಮಾರಾಟದ ಬೆಳವಣಿಗೆಯನ್ನು ಕಂಡಿದೆ. ದಿನದಿಂದ ದಿನಕ್ಕೆ ಈ ಜನಪ್ರಿಯ ಮಹೀಂದ್ರಾ ಬೊಲೆರೊ ಮಾದರಿಯ ಬೇಡಿಕೆಯು ಹೆಚ್ಚಾಗುತ್ತಿದೆ. 2023ರ ಮಾರ್ಚ್ ತಿಂಗಳಿನಲ್ಲಿ ಮಹೀಂದ್ರಾ ಸ್ಕಾರ್ಪಿಯೊದ 8,788 ಯುನಿಟ್‌ಗಳನ್ನು (ಸ್ಕಾರ್ಪಿಯೊ-ಎನ್ + ಸ್ಕಾರ್ಪಿಯೊ ಕ್ಲಾಸಿಕ್) ಮಾರಾಟ ಮಾಡಲಾಗಿದೆ.

ಕಳೆದ ವರ್ಷ ಇದೇ ತಿಂಗಳಲ್ಲಿ 6,061 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಇದನ್ನು ಹೋಲಿಸಿದರೆ ಶೇ.45 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಕುತೂಹಲಕಾರಿಯಾಗಿ, ಮಹೀಂದ್ರಾ XUV300 ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಯು ಗಮನಾರ್ಹವಾದ ಮಾರಾಟದ ಬೆಳವಣಿಗೆಯನ್ನು ವರದಿ ಮಾಡಿದೆ. ಕಂಪನಿಯು ಕಳೆದ ತಿಂಗಳು XUV300 ನ 5,128 ಯುನಿಟ್‌ಗಳನ್ನು ಮಾರಾಟ ಮಾಡಿತು, ಇದನ್ನು ಕೆಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.24 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಕಂಡಿದೆ.

Mahindra Bolero

ಇನ್ನು 2023ರ ಮಾರ್ಚ್ ತಿಂಗಳಿನಲ್ಲಿ ಮಹೀಂದ್ರಾ XUV700 ಮಾದರಿಯ 5,107 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದನ್ನು ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.29 ರಷ್ಟು ಬೆಳೆವಣಿಗೆಯನ್ನು ಸಾಧಿಸಿದೆ.ಇನ್ನು ಮಹೀಂದ್ರಾ ಬೊಲೆರೊ ಮಹೀಂದ್ರಾ ಕಂಪನಿಯ ಸರಣಿಯಲ್ಲಿ ಅತ್ಯಂತ ಜನಪ್ರಿಯ ಪ್ರಯಾಣಿಕ ವಾಹನಗಳಲ್ಲಿ ಒಂದಾಗಿದೆ. ಮಹೀಂದ್ರಾ ಬೊಲೆರೊ ಬ್ರ್ಯಾಂಡ್‌ನ ಸಾಲಿನಲ್ಲಿ ಒಟ್ಟಾರೆ ಮಾರಾಟದ ಪರಿಮಾಣದ ಶೇಕಡಾವಾರು ಪ್ರಾಬಲ್ಯವನ್ನು ಮುಂದುವರೆಸಿದೆ

ಈ ಬೊಲೆರೋ ಕಠಿಣ, ಸಮರ್ಥ ಮತ್ತು ವಿಶ್ವಾಸಾರ್ಹ ಯಾಂತ್ರಿಕ ಪ್ಯಾಕೇಜ್‌ನೊಂದಿಗೆ ನೀಡಲಾಗುತ್ತದೆ. ಮಹೀಂದ್ರಾ ಬೊಲೆರೋ ಎಸ್‌ಯುವಿಯಲ್ಲಿ 1.5 ಎಲ್ 3-ಸಿಲಿಂಡರ್ ಎಮ್ಹಾಕ್ 75 ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 75 ಬಿ‍‍ಹೆಚ್‍‍ಪಿ ಪವರ್ ಮತ್ತು 195 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಈ ಎಂಜಿನ್ ನೊಂದಿಗೆ 5 ಸ್ಪೀಡ್ ಮಾನ್ಯುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

Mahindra Bolero

ಮಹೀಂದ್ರಾ ಬೊಲೆರೊ ಎಸ್‍ಯುವಿಯನ್ನು ಮೊದಲ ಬಾರಿಗೆ ಭಾರತದಲ್ಲಿ 2000 ರಲ್ಲಿ ಪರಿಚಯಿಸಲಾಯಿತು, ಮತ್ತು ವರ್ಷಗಳಲ್ಲಿ ಕೆಲವು ಫೇಸ್‌ಲಿಫ್ಟ್‌ಗಳ ಹೊರತಾಗಿ, ವಾಹನವು ಒಂದೇ ಆಗಿರುತ್ತದೆ. ಅದರ ಇಬೊಲೆರೊ ಸಬ್ -4 ಮೀಟರ್ ವಾಹನವಾಗಿದೆ; ಇದರ ಉದ್ದ 3,995 ಮಿಮೀ, ಅಗಲ 1,745 ಎಂಎಂ, ಎತ್ತರ 1,880 ಎಂಎಂ, 2,680 ಎಂಎಂ ಉದ್ದದ ವ್ಹೀಲ್‌ಬೇಸ್ ಅನ್ನು ಒಳಗೊಂಡಿದೆ.

ಈ ಬೊಲೆರೊ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಹೊಸ ಬಂಪರ್, ಗ್ರಿಲ್ ಮತ್ತು ಮರುವಿನ್ಯಾಸಗೊಳಿಸಲಾದ ಹೆಡ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಈ ಬೊಲೆರೊ ಎಸ್‍ಯುವಿ ಆಕರ್ಷಕ ಲುಕ್ ಅನ್ನು ಹೊಂದಿದೆ.ಬೊಲೆರೊ ಎಸ್‍‍ಯುವಿನಲ್ಲಿ ಹೊಸ ಕ್ರ್ಯಾಶ್ ಟೆಸ್ಟ್ ಸುರಕ್ಷತಾ ನಿಯಮಕ್ಕೆ ಅನುಗುಣವಾಗಿ ಅದರ ಮಂಭಾಗವನ್ನು ನವೀಕರಿಸಲಾಗಿದೆ. ಮುಂಭಾಗದ ಪ್ರಯಾಣಿಕರ ಸುರಕ್ಷತೆಗೆ ಈ ಹೊಸ ನವೀಕರಣವು ಸಹಕಾರಿಯಾಗಲಿದೆ.

Article Published On: Wednesday, April 19, 2023, 11:23 [IST]
English summary
Mahindra model wise sales march 2023 bolero leading details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+