Mahindra: ಶೋರೂಂಗಳು ತುಂಬಿ ತುಳುಕಲಿವೆ.. ಮಹೀಂದ್ರಾದಿಂದ ದೊಡ್ಡ ಘೋಷಣೆ
ಭಾರತದಲ್ಲಿ ಮಹೀಂದ್ರಾ (Mahindra) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಸುರಕ್ಷತೆಗೆ ಹೆಸರುವಾಸಿಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕಂಪನಿ ಕಾರುಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಇನೇನು ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದು, ಈ ಆಗಸ್ಟ್ ತಿಂಗಳಲ್ಲಿ ತನ್ನ ವಿವಿಧ ಮಾದರಿಗಳ ಮೇಲೆ ರೂ.1 ಲಕ್ಷದಷ್ಟು ರಿಯಾಯಿತಿ ನೀಡಿದೆ.
ಮೊದಲಿಗೆ ಗರಿಷ್ಠ ಡಿಸ್ಕೌಂಟ್ ಆಫರ್ ಪಡೆದುಕೊಂಡಿರುವ ಮಹೀಂದ್ರಾದ 'XUV400' ಎಲೆಕ್ಟ್ರಿಕ್ ಕಾರಿನ ಬಗ್ಗೆ ಮಾತನಾಡೋಣ. ಈ ತಿಂಗಳು XUV400, ರೂ.1.25 ವರೆಗೂ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಸದ್ಯ, ಈ ಕಾರು, ರೂ.15.99 ಲಕ್ಷದಿಂದ ರೂ.18.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಇಎಲ್ & ಇಸಿ ರೂಪಾಂತರದ ಆಯ್ಕೆಯಲ್ಲಿ ಸಿಗುತ್ತದೆ. ಟಾಪ್ ಎಂಡ್ ಮಾದರಿ ಇಸಿ ವಿತರಣೆಗಳು ದೀಪಾವಳಿ ವೇಳೆಗೆ ಶುರುವಾಗಲಿದೆ.

ಮಹೀಂದ್ರಾದ XUV400, 34.5 kWh ಹಾಗೂ 39.4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜಿನಲ್ಲಿ 375 km ರಿಂದ 456 km ರೇಂಜ್ ನೀಡುತ್ತದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 150 hp ಪವರ್ ಹಾಗೂ 310 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್ ಎಂಬ ಮೂರು ಡ್ರೈವಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದೆ.
ಮಹೀಂದ್ರಾ ಮರಾಜೊ ಆಗಸ್ಟ್ ತಿಂಗಳಲ್ಲಿ ಒಟ್ಟು ರೂ.73,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಅದರಲ್ಲಿ ರೂ.58,000 ಕ್ಯಾಶ್ ಡಿಸ್ಕೌಂಟ್ ಸೇರಿದೆ. ಈ ಮರಾಜೊ 7, 8 ಆಸನ ವ್ಯವಸ್ಥೆಯಲ್ಲಿ ರೂ.14.10 ಲಕ್ಷದಿಂದ ರೂ.16.46 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇದರ 1.5 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್, 123 hp ಪವರ್, 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಪ್ರಮುಖವಾಗಿ, ಈ ತಿಂಗಳು ಮಹೀಂದ್ರಾ XUV300 ವಿವಿಧ ರೂಪಾಂತಗಳು ರೂ.45,000 ದಿಂದ ರೂ.71,000 ರಿಯಾಯಿತಿ ಪ್ರಯೋಜನವನ್ನು ಪಡೆದಿವೆ. ಅದರಲ್ಲಿ ಡೀಸೆಲ್ ಚಾಲಿತ ಮಾದರಿಗಳು ರೂ.45,000 - ರೂ.56,000 ಡಿಸ್ಕೌಂಟ್ ಆಫರ್ ಹೊಂದಿವೆ. XUV300 ರೂ.8.41 ಲಕ್ಷದಿಂದ ರೂ.14.60 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ.
ದೇಶದ ಗ್ರಾಮೀಣ ಜನರ ಹಾಟ್ ಫೆವರೇಟ್ ಆಗಿರುವ ಮಹೀಂದ್ರಾ ಬೊಲೆರೊ ನಿಯೋ ರೂ.50,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಬೊಲೆರೊ ನಿಯೋ, ರೂ.9.63 ಲಕ್ಷದಿಂದ ರೂ.12.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು, 1.5 - ಲೀಟರ್ ಡೀಸೆಲ್ ಎಂಜಿನ್ ಹಾಗೂ 5 - ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

ಮಹೀಂದ್ರಾ ಬೊಲೆರೊ ರೂಪಾಂತರಗಳಿಗೆ ಅನುಗುಣವಾಗಿ ನಗದು ರಿಯಾಯಿತಿ ಸೇರಿದಂತೆ ಒಟ್ಟು ರೂ.25,000 ದಿಂದ ರೂ.60,000 ಡಿಸ್ಕೌಂಟ್ ಆಫರ್ ಹೊಂದಿದೆ. ಈ ಕಾರು, ರೂ.9.78 ಲಕ್ಷದಿಂದ ರೂ.10.79 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದರಲ್ಲಿಯು 1.5 ಲೀಟರ್ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದ್ದು, 5 ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. 16.0 kmpl ಮೈಲೇಜ್ ನೀಡುತ್ತದೆ.
ಮಹೀಂದ್ರಾದ ಜನಪ್ರಿಯ ಆಫ್-ರೋಡ್ ಎಸ್‌ಯುವಿ 'ಥಾರ್' 4WD ಪೆಟ್ರೋಲ್ ಹಾಗೂ ಡೀಸೆಲ್ ರೂಪಾಂತರಗಳು, ಈ ತಿಂಗಳು ರೂ.20,000 ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಈ ಮಹೀಂದ್ರಾ ಥಾರ್, ರೂ.10.54 ಲಕ್ಷದಿಂದ ರೂ.16.78 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದ್ದು, 15.2 kmpl ಮೈಲೇಜ್ ನೀಡುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಬಣ್ಣ ಹಾಗೂ ರೂಪಾಂತರಗಳನ್ನು ಆಧರಿಸಿ, ರಿಯಾಯಿತಿ ಪ್ರಯೋಜನವನ್ನು ಬೇರೆಯಾಗಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications