Mahindra OJA: ಮಹೀಂದ್ರಾ ಓಜಾ ಶ್ರೇಣಿ ಟ್ರಾಕ್ಟರ್‌ಗಳು ಬಿಡುಗಡೆ, ರೂ.5.64 ಲಕ್ಷ ಬೆಲೆ: ಕಾರಿನ ರೀತಿ ವೈಶಿಷ್ಟ್ಯ

ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಹೀಂದ್ರಾ (Mahindra), ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಪಾರುಪಾತ್ಯ ಮೆರೆಯುತ್ತಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆದ ಫ್ಯೂಚರ್‌ಸ್ಕೇಪ್ ಈವೆಂಟ್‌ನಲ್ಲಿ ಕಂಪನಿಯ ಟ್ರಾಕ್ಟರ್ ವಿಭಾಗವಾದ 'ಮಹೀಂದ್ರಾ ರೈಸ್' ಓಜಾ ಪ್ಲಾಟ್‌ಫಾರ್ಮ್ ಆಧರಿತ ಟ್ರಾಕ್ಟರ್‌ಗಳನ್ನು ಜಾಗತಿಕವಾಗಿ ಬಿಡುಗಡೆಗೊಳಿಸಿದೆ.

'ಓಜಾ' (lightweight) ಹಗುರವಾದ ಪ್ಲಾಟ್‌ಫಾರ್ಮ್ ಆಗಿದ್ದು, ಇದರಡಿ ಉತ್ಪಾದನೆಗೊಂಡ ಟ್ರಾಕ್ಟರ್‌ಗಳು ಹೆಚ್ಚು ಶಕ್ತಿಯುತವಾಗಿರುತ್ತವೆ. ಈ ಓಜಾ (OJA) ಎಂಬ ಹೆಸರು ಸಂಸ್ಕೃತ ಪದವಾದ 'ಓಜಸ್'ನಿಂದ ಬಂದಿದೆ. ಮಹೀಂದ್ರಾ ಓಜಾ 27 hp ಟ್ರಾಕ್ಟರ್ ಬೆಲೆ ರೂ.5.64 ಲಕ್ಷ, ಓಜಾ 40 hp ಟ್ರಾಕ್ಟರ್ ದರ ರೂ.7.35 ಲಕ್ಷ (ಎಕ್ಸ್ ಶೋರೂಂ, ಪುಣೆ) ಇದೆ.

Mahindra OJA: ಮಹೀಂದ್ರಾ ಓಜಾ ಶ್ರೇಣಿ ಟ್ರಾಕ್ಟರ್‌ಗಳು ಬಿಡುಗಡೆ, ರೂ.5.64 ಲಕ್ಷ ಬೆಲೆ: ಕಾರಿನ ರೀತಿ ವೈಶಿಷ್ಟ್ಯ

ಪ್ರಸ್ತುತ ದೇಶೀಯ ಟ್ರಾಕ್ಟರ್ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ಶೇಕಡ 42% ಮಾರುಕಟ್ಟೆ ಪಾಲನ್ನು ಹೊಂದಿದೆ. ಕಳೆದ ವರ್ಷ, ಕಂಪನಿಯು 9.45 ಲಕ್ಷ ಯುನಿಟ್ ಟ್ರಾಕ್ಟರ್ ಮಾರಾಟ ಮಾಡಿತ್ತು. ನೂತನ ಮಹೀಂದ್ರಾ ಟ್ರಾಕ್ಟರ್‌ಗಳು, ಸಬ್-ಕಾಂಪ್ಯಾಕ್ಟ್, ಕಾಂಪ್ಯಾಕ್ಟ್ ಮತ್ತು ಸ್ಮಾಲ್ ಯುಟಿಲಿಟಿ ಎಂಬ 3 ಓಜಾ ಪ್ಲಾಟ್‌ಫಾರ್ಮ್‌ನ್ನು ಆಧರಿಸಿವೆ. ಜೊತೆಗೆ 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡಿದಿವೆ.

ಸಬ್-ಕಾಂಪ್ಯಾಕ್ಟ್ ಪ್ಲಾಟ್‌ಫಾರ್ಮ್‌ ಹೊಂದಿರುವ ಟ್ರಾಕ್ಟರ್‌ಗಳನ್ನು ಯುಎಸ್ಎ, ಸ್ಮಾಲ್ ಯುಟಿಲಿಟಿ ಪ್ಲಾಟ್‌ಫಾರ್ಮ್‌ ಪಡೆದಿರುವ ಟ್ರಾಕ್ಟರ್‌ಗಳನ್ನು ಯುಎಸ್ಎ, ಭಾರತ ಹಾಗೂ ಏಶಿಯನ್, ಕಾಂಪ್ಯಾಕ್ಟ್ ಪ್ಲಾಟ್‌ಫಾರ್ಮ್‌ನ್ನು ಆಧರಿಸಿರುವ ಟ್ರಾಕ್ಟರ್‌ಗಳನ್ನು ಯುಎಸ್ ಹಾಗೂ ಏಶಿಯನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವಿನ್ಯಾಸ ಮಾಡಲಾಗಿದೆ. ಅದರಲ್ಲೂ ಭಾರತದ ಮಾರುಕಟ್ಟೆಗೆ ಕಂಪನಿಯು ಕಾಂಪ್ಯಾಕ್ಟ್ ಮತ್ತು ಸ್ಮಾಲ್ ಯುಟಿಲಿಟಿ ಪ್ಲಾಟ್‌ಫಾರ್ಮ್‌ನ್ನು ಪಡೆದಿರುವ 7 ಹೊಸ ಟ್ರಾಕ್ಟರ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಇವೆಲ್ಲ, 4WD ಡ್ರೈವಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, 20 hp - 40 hp (14.91kW - ​​29.82kW) ರೇಂಜ್ ನಲ್ಲಿವೆ. ಮಹೀಂದ್ರಾ ಓಜಾ ಶ್ರೇಣಿ ಟ್ರಾಕ್ಟರ್‌ಗಳು ಪ್ರೊಜಾ (PROJA), ಮಯೋಜ (MYOJA), ರೋಬೋಜ (ROBOJA) ಮೂರು ಟೆಕ್ನಲಾಜಿ ಪ್ಯಾಕ್‌ಗಳನ್ನು ಹೊಂದಿದ್ದು, ಕೃಷಿ ಕೆಲಸಕ್ಕೆ ಬಳಸುವ ಟ್ರಾಕ್ಟರ್‌ಗಳೇ ಆಗಿದ್ದರೂ ಯಾವ ಕಾರಿಗೂ ಕಮ್ಮಿ ಇಲ್ಲದಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

ಪ್ರೊಜಾ (PROJA) ಟೆಕ್ನಲಾಜಿ ಪ್ಯಾಕ್‌ ಪಡೆದಿರುವ ಟ್ರಾಕ್ಟರ್‌, ಫಾರ್ವರ್ಡ್/ ರಿವರ್ಸ್ ಷಟಲ್ & ಕ್ರೀಪರ್, ಟಿಲ್ಟ್ ಹಾಗೂ ಟೆಲಿಸ್ಕೋಪಿಕ್ ಸ್ಟೀರಿಂಗ್, ಎಲೆಕ್ಟ್ರಿಕ್ ವೆಟ್ ಪಿಟಿಒ ಹಾಗೂ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಜೊತೆಗೆಯಲ್ಲಿ ಸಿಗ್ನೇಚರ್ DRLs ವೈಶಿಷ್ಟ್ಯಗಳನ್ನು ಹೊಂದಿದೆ. ಮಯೋಜ (MYOJA) ತಂತ್ರಜ್ಞಾನ ಹೊಂದಿರುವ ಟ್ರಾಕ್ಟರ್‌ ಸರ್ವಿಸ್ ಅಲರ್ಟ್ & ಟೆಲಿಮ್ಯಾಟಿಕ್ಸ್ ಫೀಚರ್ಸ್ ಪಡೆದಿದೆ.

ರೋಬೋಜ (ROBOJA) ಟೆಕ್ನಲಾಜಿ ಪ್ಯಾಕ್‌ ಹೊಂದಿರುವ ಟ್ರಾಕ್ಟರ್‌, ಆಟೋ ಪಿಟಿಒ ಆನ್/ಆಫ್ (ಟರ್ನಿಂಗ್ & ರಿವರ್ಸ್), ಆಟೋ ಬ್ರೇಕಿಂಗ್, ಎಲೆಕ್ಟ್ರಾನಿಕ್ ಡೆಪ್ತ್ ಮತ್ತು ಡ್ರಾಫ್ಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಕ್ವಿಕ್ ರೈಸ್ ಮತ್ತು ಲೋವರ್, ಮತ್ತು ಆಟೋ ಇಂಪ್ಲಿಮೆಂಟ್ ಲಿಫ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮಹೀಂದ್ರಾ, ಓಜಾ ಶ್ರೇಣಿ ಟ್ರಾಕ್ಟರ್‌ಗಳನ್ನು ತೆಲಂಗಾಣದ ಜಹೀರಾಬಾದ್‌ನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ತಯಾರಿಸಲು ನಿರ್ಧರಿಸಿದೆ.

ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್‌ನ ಫಾರ್ಮ್ ವಿಭಾಗದ ಸಿಇಒ ವಿಕ್ರಮ್ ವಾಘ್ ಅವರು, ಮುಂದಿನ ಅಕ್ಟೋಬರ್‌ ತಿಂಗಳಿಂದ ಭಾರತದಲ್ಲಿ ಗ್ರಾಹಕರಿಗೆ ಟ್ರಾಕ್ಟರ್‌ಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು, ಮಹೀಂದ್ರಾ ಟ್ರಾಕ್ಟರ್‌ಗಳು ಈಗಾಗಲೇ ದೇಶದಲ್ಲಿ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿವೆ. ಓಜಾ ಶ್ರೇಣಿ ಟ್ರಾಕ್ಟರ್‌ಗಳು ಆಕರ್ಷಕ ವೈಶಿಷ್ಟ್ಯ ಪಡೆದಿರುವುದರಿಂದ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, August 16, 2023, 11:03 [IST]
English summary
Mahindra oja tractor range globally launched details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+