ಜಲಪಾತ ಕೆಳಗೆ ಸ್ಕಾರ್ಪಿಯೊ N.. ಸನ್‌ರೂಫ್‌ನಿಂದ ನೀರು ಸೋರಿಕೆ: ಸರಿಯಾಗಿಯೇ ಉತ್ತರಕೊಟ್ಟ ಮಹೀಂದ್ರಾ
ಕೆಲವು ದಿನಗಳ ಹಿಂದೆ, ಯೂಟ್ಯೂಬರ್ ತನ್ನ ನೂತನ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‍ಯುವಿಯಲ್ಲಿ ಪ್ರವಾಸಕ್ಕೆ ತೆರಳಿದ್ದರು. ಆ ವೇಳೆ ಜಲಪಾತದ ಕೆಳಗಡೆ ಈ ಸ್ಕಾರ್ಪಿಯೋವನ್ನು ನಿಲ್ಲಿಸಿದ್ದು, ಸನ್‌ರೂಫ್ ಮೂಲಕ ಕ್ಯಾಬಿನ್‌ನೊಳಗೆ ನೀರು ಸೋರಿಕೆಯಾಗಿತ್ತು. ಇದು ಭಾರೀ ವೈರಲ್ ಆಗಿದ್ದು, ಇದಕ್ಕೆ ಮಹೀಂದ್ರಾ ಕಂಪನಿಗೆ ಸರಿಯಾಗಿಯೇ ಉತ್ತರ ನೀಡಿದೆ.
ಅಷ್ಟಕ್ಕೂ ಈ ವಿವಾದಕ್ಕೆ ಮಹೀಂದ್ರಾ ಯಾವ ರೀತಿಯಾಗಿ ಟಕ್ಕರ್ ಕೊಟ್ಟಿದೆ ಎಂಬುವದನ್ನು ತಿಳಿಯುವುದಕ್ಕಿಂತ ಮೊದಲು, ಆ ಯೂಟ್ಯೂಬರ್ ಮಾಡಿದ ಪೋಸ್ಟ್ ಬಗ್ಗೆ ತಿಳಿಯೋಣ. ಜಲಪಾತದ ಕೆಳಗೆ ಆತ ಸ್ಕಾರ್ಪಿಯೋವನ್ನು ನಿಲ್ಲಿಸಿದ್ದಾರೆ. ಮೇಲಿಂದ ಬಿದ್ದ ನೀರು, ಸನ್‌ರೂಫ್, ಮೌಂಟೆಡ್ ಸ್ಪೀಕರ್ಸ್ ಮತ್ತು ಕ್ಯಾಬಿನ್ ಲೈಟ್ ಪ್ಯಾನೆಲ್‌ನಿಂದ ನೀರು ಸೋರಿಕೆಯಾಗಲು ಪ್ರಾರಂಭಿಸಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ನೆಟ್ಟಿಗರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದಕ್ಕೆ ಸ್ವತಃ ಮಹೀಂದ್ರಾ ಕಂಪನಿಯೇ ಉತ್ತರ ಕೊಟ್ಟಿದ್ದು, ಮತ್ತೊಂದು ದಿನ ಸ್ಕಾರ್ಪಿಯೋ-ಎನ್ ಎಸ್‍ಯುವಿಯನ್ನು ಇದೇ ಜಲಪಾತದ ಕೆಳಗೆ ನಿಲ್ಲಿಸಿದೆ. ಮೇಲಿಂದ ರಭಸವಾಗಿ ನೀರು ಬಿದ್ದರೂ, ಕ್ಯಾಬಿನ್‌ನೊಳಗೆ ಒಂದಿಷ್ಟು ಸೋರಿಕೆಯಲ್ಲ. ಈ ವಿಡಿಯೋವನ್ನು ಮಹೀಂದ್ರಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ವೃತ್ತಿಪರರ ಮಾರ್ಗದರ್ಶನದಲ್ಲಿ ವಿಡಿಯೋವನ್ನು ಮಾಡಿದ್ದೇವೆ. ಯಾರು ಕೂಡ ನಕಲು ಅಥವಾ ಮರುಸೃಷ್ಟಿಸಲು ಪ್ರಯತ್ನಿಸಬೇಡಿ' ಎಂದು ಹೇಳಿದೆ.
ಮಹೀಂದ್ರಾದ ಈ ವಿಡಿಯೋಗೆ ನೆಟ್ಟಿಗರು ಕೂಡ ವಿಭಿನ್ನವಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದು ಮಹೀಂದ್ರಾದ ಅತ್ಯುತ್ತಮ ಕಾರ್ಯವೆಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು, ಮಹೀಂದ್ರಾ ಮಾಡಿರುವ ಈ ಪ್ರಯತ್ನ ತುಂಬಾ ಒಳ್ಳೆಯದು. ಜೊತೆಗೆ ಸ್ಕಾರ್ಪಿಯೋ ಎನ್ ಕಾರಿನ ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡುವುದು ತುಂಬಾ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು, ಯೂಟ್ಯೂಬರ್ ಜಲಪಾತ ಕೆಳಗೆ ನಿಲ್ಲಿಸಿದ್ದ ಸ್ಕಾರ್ಪಿಯೊಗೆ ವಾರಂಟಿ ಸೌಲಭ್ಯ ಸಿಗುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‍ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 2.2-ಲೀಟರ್ ಡೀಸೆಲ್ ಎಂಜಿನ್ ಪಡೆದಿರುವ ಕಾರು, 132 PS ಪವರ್, 300 Nm ಪೀಕ್ ಟಾರ್ಕ್, ಟಾಪ್ ಎಂಡ್ ಮಾದರಿಯು 175 PS ಪವರ್, 400 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 200 PS ಪವರ್, 370 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ.
ಈ ಸ್ಕಾರ್ಪಿಯೋ ಎನ್, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅವುಗಳೆಂದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್. ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬಾಗ್ಸ್ ಹೊಂದಿದೆ.
ಮಹೀಂದ್ರಾ ಸ್ಕಾರ್ಪಿಯೊ ಎನ್ ರೂ.12.74 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಟಾಪ್ ಎಂಡ್ ಮಾದರಿ Z8L ಡೀಸೆಲ್ ರೂಪಾಂತವು ರೂ.24.05 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಹಾಗೂ ವೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಗಳಿಗೆ ಸ್ಕಾರ್ಪಿಯೊ ಎನ್ ಭಾರೀ ಪೈಪೋಟಿ ನೀಡುತ್ತಿದೆ. ಅಲ್ಲದೆ, ಈ ಕಾರಿನ ಕೆಲವು ರೂಪಾಂತರಗಳನ್ನು ವಿತರಣೆ ಪಡೆಯಲು ಸುಮಾರು ಎರಡು ವರ್ಷದವೆರೆಗೂ ಕಾಯಬೇಕು. ಅಷ್ಟರಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications