ಭಾರತೀಯ ಸೇನೆಗೆ ಬಲ ತುಂಬಲು ರೆಡಿಯಾದ ಸ್ವದೇಶಿ ಶಕ್ತಿಶಾಲಿ ಮಹೀಂದ್ರಾ ಎಸ್‍ಯುವಿಗಳು
ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಇತ್ತೀಚೆಗೆ ಭಾರತೀಯ ಸೇನೆಯಿಂದ ಸ್ಕಾರ್ಪಿಯೊ ಕ್ಲಾಸಿಕ್‌ನ 1,850 ಯುನಿಟ್‌ಗಳ ಆರ್ಡರ್ ಅನ್ನು ಪಡೆದುಕೊಂಡಿತ್ತು. ಅದರಂತೆ ಇದೀಗ ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಕ್ಲಾಸಿಕ್‌ನ ಮೊದಲ ಬ್ಯಾಚ್ ಅನ್ನು ಭಾರತೀಯ ಸೇನೆಗೆ ವಿತರಿಸಿದೆ. ಜನವರಿಯಲ್ಲಿ, ಭಾರತೀಯ ಸೇನೆಯು ಸ್ಕಾರ್ಪಿಯೋ ಕ್ಲಾಸಿಕ್ಸ್‌ನ 1,470 ಯುನಿಟ್‌ಗಳನ್ನು ಆರ್ಡರ್ ಅನ್ನು ನೀಡಿತ್ತು.
ಸದ್ಯಕ್ಕೆ, ಭಾರತೀಯ ಸೇನೆಯು ಈಗಾಗಲೇ ಟಾಟಾ ಕ್ಸೆನಾನ್, ಫೋರ್ಸ್ ಗೂರ್ಖಾ, ಮಾರುತಿ ಸುಜುಕಿ ಜಿಪ್ಸಿ ಮತ್ತು ಟಾಟಾ ಸಫಾರಿ ಯಂತಹ ಪವರ್ ಫುಲ್ ಎಸ್‍ಯುವಿಗಳನ್ನು ಬಳಸುತ್ತಿವೆ. ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ (Mahindra Scorpio Classic) ಸೇರ್ಪಡೆಯು ಭಾರತೀಯ ಸೇನೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಮಹೀಂದ್ರಾ 4x4 ಪವರ್‌ಟ್ರೇನ್‌ನೊಂದಿಗೆ ಸ್ಕಾರ್ಪಿಯೋ ಕ್ಲಾಸಿಕ್‌ನೊಂದಿಗೆ ಸಜ್ಜುಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದರರ್ಥ ಈ ಗೆ ಸ್ಕಾರ್ಪಿಯೋ ಕ್ಲಾಸಿಕ್ ಎಸ್‍ಯುವಿಯಲ್ಲಿರುವ ಎಂಜಿನ್ ಸುಮಾರು 140 ಬಿಹೆಚ್‍ಪಿ ಪವರ್ ಉತ್ಪಾದಿಸುವ 2.2-ಲೀಟರ್ ಎಂಜಿನ್‌ನ ಹಿಂದಿನ ಪೀಳಿಗೆಯಾಗಿರಬಹುದು. ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು, ಮಹೀಂದ್ರಾ ಎಂಜಿನ್ ಅನ್ನು ನವೀಕರಿಸಿದೆ. ಇದು ಇನ್ನೂ 2.2-ಲೀಟರ್ ಯುನಿಟ್ ಆಗಿದೆ. ಆದರೆ ಇದರ ಹಿಂದಿನ ಜನರೇಷನ್ ಮಾದರಿಗಿಂತ 55 ಕೆಜಿ ಹಗುರವಾಗಿದೆ.
ಮಹೀಂದ್ರಾ ಪ್ರಕಾರ, 1,000 rpm ನಿಂದ 230 Nm ಟಾರ್ಕ್ ಲಭ್ಯವಿದೆ. ಇಂಧನ ಕ್ಷಮತೆ ಶೇ.15ರಷ್ಟು ಹೆಚ್ಚಾಗಬೇಕು ಎನ್ನುತ್ತಾರೆ ತಯಾರಕರು. ಗೇರ್ ಬಾಕ್ಸ್ ಕೇಬಲ್-ಶಿಫ್ಟ್ ಅನ್ನು ಸಹ ಬಳಸುತ್ತದೆ, ಇದು ಕಂಪನಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗೇರ್ ಬಾಕ್ಸ್ ಬಗ್ಗೆ ಹೇಳುವುದಾದರೆ, ಇದು 6-ಸ್ಪೀಡ್ ಯುನಿಟ್ ಆಗಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಎಸ್‌ಯುವಿಯಲ್ಲ್ 2.2 - ಲೀಟರ್ mHawk ಡೀಸೆಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 132 PS ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಇನ್ನು ಸ್ವದೇಶಿ ಮಹೀಂದ್ರಾ ಕಂಪನಿಯ ಗೇಮ್ ಚೇಂಜರ್ ಎಸ್‍ಯುವಿ ಸ್ಕಾರ್ಪಿಯೋ ಎರಡೂ ದಶಕಗಳಿಂದ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಕಂಪನಿಯ ಎಸ್‍ಯುವಿಗಳ ಸರಣೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ, ಮಾರಾಟದಲ್ಲಿ ಮಹೀಂದ್ರಾ ಕಂಪನಿಗೆ ಇಂದಿಗೂ ಕೂಡ ಹೆಚ್ಚಿನ ಕೊಡುಗೆಯನ್ನು ನೀಡುವುದನ್ನು ಮುಂದುವರೆಸಿರುವುದು ವಿಶೇಷ.
ಇನ್ನು ಮಹೀಂದ್ರಾ ಕಂಪನಿಯು ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಎಸ್‍ಯುವಿಯನ್ನು ನ್ಯೂ ಜನರೇಷನ್ ಸ್ಕಾರ್ಪಿಯೋ-ಎನ್ ಜೊತೆಗೆ ಮಾರಾಟ ಮಾಡಲಾಗುತ್ತದೆ, ಈ ಎರಡೂ ಎಸ್‍ಯುವಿಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಎಲ್ಲಾ ಎಸ್‍ಯುವಿಗಳ ಬಿಗ್ ಡ್ಯಾಡಿ ಸ್ಕಾರ್ಪಿಯೋ ಬೇಡಿಕೆ ಹೆಚ್ಚಾಗಿರುವುದರಿಂದ ಇದರ ಕಾಯುವ ಅವಧಿ ಕೂಡ ಹೆಚ್ಚಾಗಿದೆ.
ಇನ್ನು ಭಾರತದಲ್ಲಿ ಮಹೀಂದ್ರಾ ಕಳೆದ ಎರಡು ದಶಕದಿಂದ ಸ್ಕಾರ್ಪಿಯೋ ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದು, ಬರೋಬ್ಬರಿ 9 ಲಕ್ಷ ಯುನಿಟ್ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ಸದ್ಯ, ಖರೀದಿಗೆ ದೊರೆಯುವ ನೂತನ ಮಹೀಂದ್ರಾ ಸ್ಕಾರ್ಪಿಯೋ ಎನ್ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಯುವುದಾದರೆ, ಈ ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ ರೂ.13.05 - ರೂ.24.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.


Click it and Unblock the Notifications